ದ್ವೇಶದ ಹೆಸರಿನಲ್ಲಿ ದೇಶದಲ್ಲಿ ಕೊಲ್ಲುವ ಪ್ರತಿಕ್ರಿಯೆ ವ್ಯಾಪಕಗೊಳ್ಳುತ್ತಿದೆ;  ಎಸ್.ಐ.ಓ ರಾಷ್ಟ್ರೀಯ ಅಧ್ಯಕ್ಷ ನಹಸ್ ಮಾಳ

Spread the love

ದ್ವೇಶದ ಹೆಸರಿನಲ್ಲಿ ದೇಶದಲ್ಲಿ ಕೊಲ್ಲುವ ಪ್ರತಿಕ್ರಿಯೆ ವ್ಯಾಪಕಗೊಳ್ಳುತ್ತಿದೆ;  ಎಸ್.ಐ.ಓ ರಾಷ್ಟ್ರೀಯ ಅಧ್ಯಕ್ಷ ನಹಸ್ ಮಾಳ

ಉಡುಪಿ: ಎಲ್ಲಿಯವರೆಗೆ ಪ್ರತಿಯೊಬ್ಬರಿಗೂ ಸಾಮಾಜಿಕ ಸಮಾನತೆ ದೊರಕುವುದಿಲ್ಲವೋ ಅಲ್ಲಿಯವರೆಗೆ ಸಮಾನತೆ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಎಸ್.ಐ.ಓ ರಾಷ್ಟ್ರೀಯ ಅಧ್ಯಕ್ಷ ನಹಸ್ ಮಾಳ ಅಭಿಪ್ರಾಯಪಟ್ಟರು.

ಅವರು ಶನಿವಾರ ಉಡುಪಿ ಪುರಭವನದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಹಮ್ಮಿಕೊಂಡ “ಹಲವು ಧರ್ಮ – ಒಂದು ಭಾರತ” ಸೌಹರ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಡಾ.ಬಿ.ಆರ್ ಅಂಬೇಡ್ಕರ್ ಆಶಯದಂತೆ ಇಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿದೆ ಅದರ ಅರ್ಥ ಸಮಾನತೆ ಕಲ್ಪಿಸಲಾಗಿದೆ. ಆದರೆ ಇಂದು ದೇಶದಲ್ಲಿ ದ್ವೇಷದ ಹೆಸರಿನಲ್ಲಿ ನಿರ್ದಯವಾಗಿ ಕೊಲ್ಲುವ ಪ್ರತಿಕ್ರಿಯೆಗಳು ವ್ಯಾಪಕಗೊಳ್ಳುತ್ತಿದೆ. ಜೀವನಗಳು  ಮೃತದೇಹಗಳ ಮೇಲೆ ಮರಗುತ್ತಿವೆ.

ಜಾಗತಿಕ ಸನ್ನಿವೇಶಗಳಂತೆ ಭಾರತದಲ್ಲಿ ಒಂದು ರೀತಿಯ ಹಿಂಸೆಯ ವಾತಾವರಣ ನಿರ್ಮಾಣಗೊಂಡಿದೆ. ಇಂದು ಪ್ರಜಾಪ್ರಭುತ್ವದ ಹೆಸರಿನಲ್ಲಿ ಧ್ವಜನ್ನೋತಿಯ ಕಾರ್ಯಗಳು ವ್ಯಾಪಗೊಳಿಸಲಾಗುತ್ತಿದೆ. ಸಂವಿಧಾನದ ಮೂಲ ಆಶಯವನ್ನು ಮರೆ ಮಾಚಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಜನಭಿಮತ ರೂಪಿಸಲು ಇಂದು ಸತ್ಯದ ಪಾತ್ರ ಕಡಿಮೆಯಾಗಿದೆ. ಸುಳ್ಳಿನ ಕಂತೆಯ ಮೇಲೆ ಜನಾಭಿಪ್ರಾಯ ರೂಪಿತವಾಗಿದೆ. ನಾಯಕರುಗಳ ಬದಲಾವಣೆಯಿಂದ ಯಾವುದೇ ಪ್ರಯೋಜನವಿಲ್ಲ, ಮನಸ್ಥಿತಿಗಳ ಬದಲಾವಣೆಯಾಗಬೇಕೆಂದರು. ಎಲ್ಲರೂ ಸೌಹಾದರ್ತೆಗಾಗಿ ಐಕ್ಯರಾಗಬೇಕೇಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಐ.ಓ ರಾಜ್ಯಾಧ್ಯಕ್ಷ ಮಹಮ್ಮದ್ ರಫೀಕ್ ಬೀದರ್ ಅವರು ಹಲವು ಧರ್ಮಗಳು ಒಂದು ಭಾರತ ಎಂಬ ಘೋಷವಾಕ್ಯ ದಡಿಯಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ವತಿಯಿಂದ ವರ್ಷಾವಧಿ ಅಭಿಯಾನವನ್ನು ಹಮ್ಮಿ ಕೊಳ್ಳಲಾಗಿದ್ದು   ದೇಶದ ಬಹುತ್ವದ ಭವ್ಯ ಮೌಲ್ಯಗಳನ್ನು ಉಳಿಸಿ ಸಹೋದರತೆ ಯ ಬದು ಕನ್ನು ಸಾರಲು ಅಭಿಯಾನದ ಮುಖ್ಯಉದ್ದೇಶವಾಗಿದೆ. ಬೀದಿ ನಾಟಕ, ಕ್ಯಾಂಪಸ್ ಲೇಕ್ಷರಿಂಗ್, ಸಮಾವೇಶ, ಖ್ಯಾತಿ ವ್ಯಕ್ತಿಗಳು ಮತ್ತು ಧಾರ್ಮಿಕ ಮುಖಂಡರ ಭೇಟಿ, ಪ್ರಬಂಧ, ಸಾಕ್ಷ್ಯಚಿತ್ರ ಸ್ಪರ್ಧೆ, ಪುಸ್ತಕ ಬಿಡುಗಡೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಅಭಿಯಾನದ ಭಾಗವಾಗಿ ಹಮ್ಮಿ ಕೊಳ್ಳ ಲಾಗಿದೆ ಎಂದರು. ಭಾರತದ ಪರಿಕ ಲ್ಪನೆಯನ್ನು ಸಂರಕ್ಷಿ ಸುವುದು ಅಗತ್ಯವಿದೆ. ಅಂತರ್ಗತ ವೈವಿದ್ಯತೆ ಜೊತೆಗೆ ಒಂದು ದೇಶವಾಗಿ ನಾವು ಒಗ್ಗೂಡುವ ಅಗತ್ಯ ವಿದೆ. ಕರುಣೆ, ಕ್ಷಮೆ ಸಹೋದರತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕಿದೆ. ಈ ನಿಟ್ಟಿನಲ್ಲಿ ಅಭಿ ಯಾನವನ್ನು ಸಂಘಟಿಸಲಾಗುತ್ತಿದೆ ಎಂದರು.

ಖ್ಯಾತ ಚಿಂತಕರಾದ ಶಿವಸುಂದರ್, ಯುಬಿಎಮ್ ಚರ್ಚ್ ಮಲ್ಪೆ ಇದರ ಪಾಸ್ಟರ್ ಆಗಿರುವ ವಂ. ಡೇವಿಡ್ ಎಫ್ ನಿರ್ಮಾನಿಕ್ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಶಾಂತಿಪ್ರಕಾಶ ಮಂಗಳೂರು ಇದರ ವ್ಯವಸ್ಥಾಪಕರಾದ ಮಹಮ್ಮದ್ ಕುಂಞ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಿರಾತನ್ನು ಜುನೇದ್ ನೇರವೇರಿಸಿ, ಶುಐಬ್ ಮಲ್ಪೆ ವಂದಿಸಿದರು. ಯಾಸಿನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.


Spread the love
1 Comment
Inline Feedbacks
View all comments
Lukman
6 years ago

very nice programme. Keep it up SIO