ಉಡುಪಿ: ಬಿಜೆಪಿಯನ್ನು ‘ಭಾರತೀಯ ಜೂಟ್ ಪಾರ್ಟಿ’ ಕರೆಯುವುದು ಸೂಕ್ತ ; ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ

Spread the love

ಉಡುಪಿ: ಭಾರತೀಯ ಜನತಾ ಪಕ್ಷವನ್ನು ಇನ್ನು ಮುಂದೆ ಭಾರತೀಯ ಜೂಟ್ ಪಾರ್ಟಿ ಎಂದು ಕರೆಯುವುದು ಸೂಕ್ತ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ದೇಶದ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಒಂದು ವರ್ಷದ ಬಳಿಕ ಸರಕಾರದ ಕುರಿತು ಮಾತನಾಡುವುದಾಗಿ ಉಡುಪಿಯಲ್ಲಿ ಆಶ್ವಾಸನೆ ನೀಡಿದ್ದು ಅದರಂತೆ ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ನರೇಂದ್ರ ಮೋದಿಯವರ ಸರಕಾರ ಕಳೆದ ಒಂದು ವರ್ಷದಲ್ಲಿ ಸತತವಾಗಿ ಹೇಳಿದ್ದು ಕೇವಲ ಸುಳ್ಳು ಬಿಟ್ಟರೆ ಬೇರೇನೂ ಹೇಳಿಲ್ಲ. ಪ್ರಧಾನಮಂತ್ರಿಗಳು ತನ್ನ ಮತದಾರರಿಗೆ ನೀಡಿದ ಮಾತಿನಂತೆ ನಡೆಯುವ ಬದಲು ತಾನು ಹಾಗೂ ತನ್ನ ಪಕ್ಷ ಅಧಿಕಾರಕ್ಕೆ ಬರಲು ಹಣದ ಹೊಳೆಯನ್ನು ಹರಿಸಿದ ಉದ್ಯಮಿಗಳನ್ನು ತೃಪ್ತಿ ಪಡಿಸುವದರಲ್ಲೇ ಕಾಲ ಕಳೆಯುತ್ತಿದ್ದಾರೆ. ಜನರ ಕಷ್ಟಗಳನ್ನು ಅರಿಯುವ ಬದಲು ಕಳೆದ ಒಂದು ವರ್ಷದಿಂದ ಸತತವಾಗಿ ವಿದೇಶ ಪ್ರವಾಸದಲ್ಲೇ ಮಗ್ನರಾಗಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಅಕಾಲಿಕ ಮಳೆಯಿಂದ ನೂರಾರು ಮಂದಿ ರೈತರು ಕಷ್ಟಕ್ಕೊಳಗಾಗಿದ್ದು ಅವರ ಕಷ್ಟವನ್ನು ಅರಿಯುವ ಪ್ರಯತ್ನ ಕೂಡ ದೇಶದ ಪ್ರಧಾನಿಯಾಗಿ ಅವರು ಮಾಡಿಲ್ಲ. ವಿದೇಶಗಳಿಗೆ ಭೇಟಿ ನೀಡಿದ ದೇಶದ ಅಭಿವೃದ್ದಿಯ ಚಿಂತನೆ ನಡೆಸುವ ಬದಲು ಐತಿಹಾಸಿಕ ಸ್ಥಳಗಳ ಭೇಟಿ ಮತ್ತು ಉದ್ಯಮಿಗಳಿಗೆ ಪ್ರಯೋಜನ ಮಾಡುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ. ತಮ್ಮ ವಿಧೇಶ ಪ್ರವಾಸದಿಂದ ದೇಶದ ಹಣವನ್ನು ಲೂಟಿ ಮಾಡಿದ್ದು ಬಿಟ್ಟರೆ ಇನ್ನೇನು ಕೂಡ ಮಾಡಿಲ್ಲ ಎಂದರು.

bjp_joot_party 16-05-2014 12-19-47

ಪ್ರಧಾನಿಯವರು ಕಳೆದ ಒಂದು ವರ್ಷದಿಂದ ಮಾಡಿದ ವಿದೇಶ ಪ್ರವಾಸ ಖರ್ಚಿನ ಮಾಹಿತಿ ಕೇಳಿ ಮಾಹಿತಿಹಕ್ಕಿನಡಿ ಅರ್ಜಿಸಲ್ಲಿಸಿದರೆ ಅದನ್ನು ನೀಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಕಛೇರಿ ಹೇಳುತ್ತಿದೆ ಇದು ಖಂಡನಾರ್ಹ. ದೇಶದ ಜನತೆಗೆ ಪ್ರಧಾನಿಯವರು ಮಾಹಿತಿ ನೀಡುವುದು ಅವರ ಕರ್ತವ್ಯ ಅದನ್ನು ಮಾಡದೆ ರೈತರು ಹಾಗೂ ಮಧ್ಯಮ ವರ್ಗದವರನ್ನು ಮೋಸ ಮಾಡುವ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿಯವರು ವಿದೇಶಗಳಿಗೆ ಭೇಟಿ ನೀಡುರುವುದರಿಂದ ದೇಶದ ಗಡಿ ಸಮಸ್ಯೆಯಲ್ಲಿ ಯಾವುದೇ ಪ್ರಯೋಜನ ಕಂಡಿಲ್ಲ ಬದಲಾಗಿ ಸಮಸ್ಯೆ ಹೆಚ್ಚಾಗಿದೆ. ಪಾಕಿಸ್ತಾನ ಚೀನಾ ಶ್ರೀಲಂಕಾ ಇಂದಿಗೂ ಕೂಡ ಗಡಿಯಲ್ಲಿ ಸಮಸ್ಯೆಯನ್ನುಂಟು ಮಾಡುತ್ತಿವೆ ಎಂದರು.

ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆ ಸಂಪೂರ್ಣ ಸುಳ್ಳಿನ ಕಂತೆಯಾಗಿದ್ದು, ಕಪ್ಪು ಹಣ ತಂದು ಪ್ರತಿಯೊಬ್ಬ ನಾಗರಿಕನ ಖಾತೆ 15 ಲಕ್ಷ ಜಮೆ ಮಾಡುವುದಾಗಿ ಹೇಳಿದ ಪ್ರಧಾನಿ ಈಗ ಏಕೆ ಅದರ ಕುರಿತು ಸುಮ್ಮನಿದ್ದಾರೆ. ಕಪ್ಪು ಹಣದ ಕುರಿತು ಕಾಯಿದೆಯನ್ನು ತಂದಿದ್ದು ಅದರಲ್ಲಿ ವಿದೇಶದಿಂದ ಕಪ್ಪು ಹಣವನ್ನು ಭಾರತಕ್ಕೆ ವಾಪಾಸು ತರುವ ಕುರಿತು ಯಾವುದೇ ರೀತಿಯ ವಿಷಯ ನೂತನ ಕಾಯಿದೆಯಲ್ಲಿ ಒಳಪಟ್ಟಿಲ್ಲ. ಅಲ್ಲದೆ ಪ್ರತಿನಿತ್ಯ ವಿದೇಶ ಪ್ರವಾಸದಲ್ಲಿ ಇರುವ ಪ್ರಧಾನಿ ಈ ವರೆಗೆ ಯಾಕೆ ಸ್ವಿಟ್ಜರ್‍ಲ್ಯಾಂಡ್ ದೇಶಕ್ಕೆ ಭೇಟಿ ನೀಡಿ ಕಪ್ಪು ಹಣ ವಾಪಸು ತರುವ ವಿಷಯದ ಕುರಿತು ಅಲ್ಲಿನ ಸರಕಾರದ ಜೊತೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಚರಿತ್ರೆಯನ್ನು ಬದಲಿಸುವ ಹುನ್ನಾರ ಮಾಡುತ್ತಿದ್ದು, ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಲವಾರು ಕಾಂಗ್ರೆಸ್ ನಾಯಕರು ತಮ್ಮ ಪ್ರಾಣವನ್ನು ಅರ್ಪಿಸಿದ್ದು ಬಿಜೆಪಿಯ ಎಷ್ಟು ಮಂದಿ ಪ್ರಾಣ ತೆತ್ತಿದ್ದಾರೆ ಎಂದು ಪ್ರಶ್ನಿಸಿದರು. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವ ಇವರ ಕನಸು ನನಸಾಗುವುದಿಲ್ಲ ಬದಲಾಗಿ ಅವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ ವಾಜಪೇಯಿ, ಅಡ್ವಾಣಿ ಸುಷ್ಮಾ ಸ್ವರಾಜ್ ಮುರಳಿ ಮನೋಹರ ಜೋಶಿ ಇಂತಹ ಹಿರಿಯ ನಾಯಕರನ್ನೇ ಮೂಲೆ ಗುಂಪು ಮಾಡುತ್ತಿದ್ದಾರೆ ಎಂದರು. ಇವರ ಸರ್ವಾಧಿಕಾರಿ ವರ್ತನೆ ನೋಡಿದರೆ ಹಿಟ್ಲರಿಗೂ ಮತ್ತು ನರೇಂದ್ರ ಮೋದಿಗೂ ಯಾವುದೇ ವ್ಯತ್ಯಾಸವಿದಲ್ಲ ಎಂದರು.


Spread the love
1 Comment
Inline Feedbacks
View all comments
Krishna
9 years ago

ಇದು 2019 ನೇ ಲೋಕ ಸಭಾ ಚುನಾವಣಾ ಪ್ರಚಾರ.