ರಾಮಕೃಷ್ಣ ಮಿಷನ್  ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ಪ್ರತಿನಿತ್ಯ ನಡೆಯುವ  ಜಾಗೃತಿ ಕಾರ್ಯಕ್ರಮಗಳು

Spread the love

ರಾಮಕೃಷ್ಣ ಮಿಷನ್  ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ಪ್ರತಿನಿತ್ಯ ನಡೆಯುವ  ಜಾಗೃತಿ ಕಾರ್ಯಕ್ರಮಗಳು

 

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಅಂಗವಾದ “ಸ್ವಚ್ಛತಾ ಜಾಗೃತಿ ಅಭಿಯಾನವನ್ನು ದಿನಾಂಕ 1-2-2018 ರಿಂದ  15-2-2018 ರವರೆಗೆ ಮಂಗಳೂರಿನ ವಿವಿಧ ಪ್ರದೇಶಗಳಲ್ಲಿ ಕೈಗೊಳ್ಳಲಾಯಿತು.  10  ಸ್ವಚ್ಛತಾ ತಂಡಗಳು ಭಾಗವಹಿಸಿ ಸಾವಿರಕ್ಕೂ ಅಧಿಕ ಮನೆ-ಅಂಗಡಿಗಳನ್ನು  ಸಂಪರ್ಕಿಸಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಪ್ರಯತ್ನಿಸಿದವು.

1-2-2018 : ಕದ್ರಿ  ರಸ್ತೆ: ಬಂಟ್ಸ್ ಹಾಸ್ಟೆಲ್ ವೃತ್ತದಿಂದ ಕದ್ರಿ ಸಾಗುವ ಮುಖ್ಯ ರಸ್ತೆಯಲ್ಲಿ ಕರಂಗಲಪಾಡಿ ಆಟೋ ಚಾಲಕರ ಸಂಘದ ಸದಸ್ಯರು ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ಆಟೋ ಚಾಲಕರಾದ ಕೃಷ್ಣಪ್ಪ, ವಿಶ್ವನಾಥ್ ಸೇರಿದಂತೆ ಅನೇಕರು ಅಂಗಡಿ ಮುಂಗಟ್ಟುಗಳಿಗೆ ತೆರಳಿ ‘ಸ್ವಚ್ಛತೆಯ ಕರಪತ್ರ’ ವಿತರಿಸಿ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಚ್ಛತೆ ಕಾಯ್ದಿರಿಸುವಂತೆ ವಿನಂತಿಸಿಕೊಂಡರು.

02-02-2018: ಸರ್ಕಿಟ್ ಹೌಸ್:  ಫ್ರೆಂಡ್ಸ್ ಫಾರ್ ಎವರ್ ಸದಸ್ಯರು ಶುಭೋದಯ ಆಳ್ವ  ನೇತೃತ್ವದಲ್ಲಿ ಎರಡು ಗುಂಪುಗಳಾಗಿ ವಿಂಗಡಿಸಿಕೊಂಡು ಸರ್ಕಿಟ್ ಹೌಸ್ ಅಕ್ಕ ಪಕ್ಕದಲ್ಲಿ ಜಾಗೃತಿ ಅಭಿಯಾನವನ್ನು ಕೈಗೊಂಡರು. ಸದಸ್ಯರು ರಸ್ತೆ ಬದಿಯ ವ್ಯಾಪಾರಿ ಗಳನ್ನು ಭೇಟಿಮಾಡಿ ಸ್ವಚ್ಚತೆಯ ಕರಪತ್ರ ನೀಡಿ  ಜಾಗೃತಿ ಮೂಡಿಸಿದರು.

ಸುಜಿತ ಭಂಡಾರಿ, ಕೆ ವಿ ಪ್ರಸಾದ ಮತ್ತಿತರರು ನಿತ್ಯ ಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಂಡರು.

03-02-3018: ಬೋಳಾರ: ನಿವೇದಿತಾ ಬಳಗದ ಸದಸ್ಯರು ಬೋಳಾರ ಮಾರಿಗುಡಿ ದೇವಸ್ಥಾನ ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಕಾಯ್ದಿರಿಸುವಂತೆ ವಿನಂತಿಸಿಕೊಂಡರು. ಅಧ್ಯಾಪಕಿ ಶ್ರೀವಿಜಯಲಕ್ಷ್ಮೀ ಮಾರ್ಗದರ್ಶದಲ್ಲಿ ಸ್ವಚ್ಚತೆಯ ಕರಪತ್ರ ವಿತರಿಸಿ, ಅಲ್ಲಲ್ಲಿ ರಸ್ತೆಯ ಮೇಲೆ ಬಿದ್ದಿದ್ದ  ಒಣಕಸ ಹೆಕ್ಕಿ ಶುಚಿಗೊಳಿಸಿದರು. ಕು. ಯಶಸ್ವಿ, ಮೇಘಾ, ಧನುಶ್ರೀ ಹಾಗೂ ಹಲವು ಯುವತಿಯರು ಕಾರ್ಯಕ್ರಮದಲ್ಲಿ ಕೈಜೋಡಿಸಿದರು.

08-02-2018; ನಂದಿಗುಡ್ಡ : ಕೋಟಿ ಚನ್ನಯ್ಯ ವೃತ್ತ ದಿಂದ ಮಂಗಳಾದೇವಿ ಮುಖ್ಯ ರಸ್ತೆ ಯಲಿ ್ಲ ವಿವೇಕಾನಂದ ಯೂಥ್ ಫೆÇೀರ್‍ಂ ಸದಸ್ಯರು ಅಂಗಡಿಗಳಿಗೆ ತೆರಳಿ ಕರಪತ್ರ ನೀಡಿ ಸ್ವಚ್ಚತೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಸಚಿನ್, ಧನುಶ್ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು

09-02-2018: ಹಂಪನಕಟ್ಟೆ:  ಶ್ರೀಕೃಷ್ಣ ಭವನ ಆಟೋ ಚಾಲಕರಿಂದ  ಸ್ವಚ್ಚತಾ ಜಾಗೃತಿ ಅಭಿಯಾನವನ್ನು ಕೆಎಸ್‍ಆರ್ ರಾವ್ ರೋಡ್‍ನಲ್ಲಿ ಆಯೋಜಿಸಲಾಯಿತು. . ಸಂಯೋಜಕರಾದ ಗಣೇಶ ಬೋಳಾರ್,ಯೋಗೀಶ ಪಂಪವೆಲ್ ಹಾಗೂ ಚಾಲಕರು ಹಂಪನಕಟ್ಟೆ ಹಳೆ ಬಸ್‍ನಿಲ್ದಾಣದಿಂದ ಆರಂಭಿಸಿ ಸಿಟಿ ಸೆಂಟರ್ ಮಾಲ್ ಮಾರ್ಗವಾಗಿ ಸುಮಾರು ನೂರಕ್ಕೂ ಅಧಿಕ ವಾಣಿಜ್ಯ ಮಳಿಗೆಗಳಿಗೆ ತೆರಳಿ ಸ್ವಚ್ಛತೆಯ ಕುರಿತಂತೆ ಮಾಹಿತಿಪತ್ರ ವಿತರಿಸಿದರು.

10-02-2018: ಸೆಂಟ್ರಲ್ ಮಾರ್ಕೆಟ್: ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪೆÇ್ರೀ|| ಶೇಷಪ್ಪ ಅಮೀನ್ ಮಾರ್ಗದರ್ಶನದಲ್ಲಿ ಸೆಂಟ್ರಲ್ ಮಾರುಕಟ್ಟೆಯ ವರ್ತಕರನ್ನು  ಭೇಟಿಮಾಡಿ,  ಕಸವನ್ನು ಸರಿಯಾಗಿ ವಿಲೇವಾರಿ ಮಾಡುವುದು, ಮಾರುಕಟ್ಟೆಯ ಶುಚಿತ್ವದ ಬಗ್ಗೆ ತಿಳಿಸಿದರು ಹಾಗೂ ಅಂಗಡಿಯ ಮುಂಭಾಗದಲ್ಲಿ ಕಸದ ಬುಟ್ಟಿಗಳನ್ನು ಇಡುವಂತೆ ಮತ್ತು ಎಲ್ಲೆಂದರಲ್ಲಿ ಕಸ ಎಸೆಯದಂತೆ ವಿನಂತಿಸಿಕೊಂಡು ‘ಜಾಗೃತಿ ಪತ್ರ’ ನೀಡಿದರು.

10-02-2018: ಕ್ಲಾಕ್ ಟವರ್: ಸಂತ ಅಲೋಸಿಯಸ್ ಕಾಲೇಜಿನ ಸಹಾಯ ಬಳಗದ ವಿದ್ಯಾರ್ಥಿಗಳು ಕ್ಲಾಕ್ ಟವರ್ ನಿಂದ ಸ್ಟೇಟ್ ಬ್ಯಾಂಕ್ ಸಾಗುವ ಮಾರ್ಗದಲ್ಲಿನ ಬೀದಿಬದಿ ವ್ಯಾಪಾರಸ್ಥರನ್ನು ಸಂಪರ್ಕಿಸಿ ಸ್ವಚ್ಛತಾ ಮಾಹಿತಿಪತ್ರವನ್ನು ಕೊಟ್ಟು ಸುತ್ತಮುತ್ತಲಿನ ಜಾಗವನ್ನು ಶುಚಿಯಾಗಿಡುವಂತೆ ಮನವಿ ಮಾಡಿದರು.  ಪ್ರಾಧ್ಯಾಪಕರಾದ ಅರುಣಾ ಕಲ್ಕೂರ, ಸೆಲ್ಫಿಯಾ, ಸೋನಾಲ್ ವಿದ್ಯಾರ್ಥಿಗಳನ್ನು ಮುನ್ನಡೆಸಿದರು

12-02-2018: ಸುಭಾಶ ನಗರ: ಶ್ರೀ ಶಾರದಾ ಮಹಿಳಾ ವೃಂದದ ಸದಸ್ಯೆಯರು  ಸುಭಾಶ ನಗರದ ಸುಮಾರು ನೂರಕ್ಕೂ ಅಧಿಕ ಮನೆಗಳಿಗೆ ತೆರಳಿ ಕರಪತ್ರವನ್ನು ನೀಡಿದರು.  ಪರಿಸರ ಶುಚಿತ್ವ ಬಗ್ಗೆ ಜಾಗೃತಿ ನೀಡುವುದರ  ಜೊತೆಗೆ ಮನೆಯಲ್ಲಿನ ಹಸಿಕಸವನ್ನು ಪಾಟ್ ಕಾಂಪೆÇೀಸ್ಟ್ ಮಾಡುವುದರ ಬಗ್ಗೆ ಮಾಹಿತಿ ನೀಡಿದರು. ಶೀಲಾ ಭಟ್ ಸುಮಾ ರವಿಶಂಕರ್, ಕವಿತಾ ಪೈ ಮತ್ತಿತರರು ನಿತ್ಯ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು.

14-02-2018 ಮೋರ್ಗನ್ಸ್ ಗೇಟ್: ಶ್ರೀಮತಿ ವಜ್ರಾ ರಾವ್ ನೇತೃತ್ವದಲ್ಲಿ ಭಗಿನಿ ಸಮಾಜದ ಸದಸ್ಯೆಯರು ಮೋರ್ಗನ್ಸ್ ಗೇಟ್ ನಿಂದ ಎಂಫಾಸಿಸ್ ಮನೆಗಳನ್ನು ಸಂದರ್ಶಿಸಿ ಸ್ವಚ್ಚತೆಯ ಪ್ರಾಮುಖ್ಯತೆಯನ್ನು ತಿಳಿಹೇಳಿದರು. ಸ್ವಚ್ಚತಾ  ‘ಸಂಕಲ್ಪ’ ಕರಪತ್ರವನ್ನು ನೀಡುವುದರೊಂದಿಗೆ ಕಸದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ಈ ಅಭಿಯಾನದಲ್ಲಿ ಭಾನುಮತಿ, ಯಶೋಧಾ ರೈ, ವಿಜಯಲಕ್ಷ್ಮೀ ಭಟ್  ಭಾಗವಹಿಸಿದ್ದರು. ಸುರೇಶ್ ಶೆಟ್ಟಿ ಮಾರ್ಗದರ್ಶನ ಮಾಡಿದರು.

15-02-2018: ಕದ್ರಿ : ಸಿಟಿ ಹಾಸ್ಪಿಟಲ್‍ನಿಂದ ಕದ್ರಿ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಸುಬ್ರಹ್ಮಣ್ಯ ಸಭಾ ವತಿಯಿಂದ ಶೀಕಾಂತ್ ರಾವ್ ಅವರ ನೇತೃತ್ವದಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ಸಹಾಯ ಬಳಗದ ಕಾರ್ಯಕರ್ತರು ಭಾಗಿಯಾಗಿ ಕರಪತ್ರ ಹಂಚಿ ಜನರಲ್ಲಿ ಶುಚಿತ್ವದ ಬಗ್ಗೆ ಅರಿವು ಮೂಡಿಸಿದರು.

ಪ್ರತಿದಿನ ಸಾಯಂಕಾಲ ನಡೆಯುತಿರುವ ನಿತ್ಯಜಾಗೃತಿ ಅಭಿಯಾನದ ಮುಖ್ಯ ಸಂಯೋಜಕರಾದ ಶ್ರೀಉಮಾನಾಥ ಕೋಟೆಕಾರ್ ಎಲ್ಲ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಎಂಆರ್ ಪಿಎಲ್ ಸಂಸ್ಥೆ ಈ ಸ್ವಚ್ಛತಾ ಜಾಗೃತಿ ಅಭಿಯಾನಕ್ಕೆ ಪ್ರಾಯೋಜಕತ್ವ ನೀಡಿ ಪೆÇ್ರೀತ್ಸಾಹಿಸುತ್ತಿದೆ.

ಈ ಕಾರ್ಯಕ್ರಮಗಳಿಗೆ ಸಂಬಂಧಪಟ್ಟಂತೆ ಕೆಲ ಚಿತ್ರಗಳನ್ನು ಲಗತ್ತಿಸಿದ್ದೇವೆ. ದಯಮಾಡಿ ಈ ವರದಿಯನ್ನು ಪ್ರಕಟಿಸಿ ಈ ಮೂಲಕ ನೀವೂ ಈ “ಸ್ವಚ್ಛತಾ ಮಂಗಳೂರು ಅಭಿಯಾನ” ದಲ್ಲಿ ಕೈಜೋಡಿಸಿ ಸಹಕರಿಸಬೇಕೆಂದು ಕೇಳಿಕೊಳ್ಳುವೆವು.


Spread the love
1 Comment
Inline Feedbacks
View all comments
ರಿತೇಶ್
6 years ago

ರಾಮಕೃಷ್ಣ ಮಿಷನ್ ಸ್ವಚ್ಛ ಭಾರತ ಕಾರ್ಯಕ್ರಮ ಇಡೀ ದೇಶಕ್ಕೆ ಮಾದರಿಯಾಗಿರುವಂತ ಅಭಿಯಾನ. ಎಲ್ಲ ಕಾರ್ಯಕತರಿಗೂ ಧನ್ಯವಾದಗಳು.