ಮಹಿಳಾ ಸಬಲೀಕರಣದತ್ತ ಹೆಜ್ಜೆ; ಜಿಲ್ಲೆಯ ಮೊದಲ ಸವಿರುಚಿ ಸಂಚಾರಿ ಕ್ಯಾಂಟಿನಿಗೆ ಪ್ರಮೋದ್ ಚಾಲನೆ
ಉಡುಪಿ: ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಇಂದಿರಾ ಕ್ಯಾಂಟಿನ್ ಬಳಿಕ ಆರಂಭಗೊಂಡ ಸವಿರುಚಿ ಸಂಚಾರಿ ಕ್ಯಾಂಟಿನಿಗೆ ಉಡುಪಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಶನಿವಾರ ಜಿಲ್ಲಾಧಿಕಾರಿ ಸಂಕೀರ್ಣದ ಬಳಿ ಚಾಲನೆ ನೀಡಿದರು.
ಕ್ಯಾಂಟಿನಿನಲ್ಲಿ ಮಹಿಳೆಯರು ತಯಾರಿಸಿದ ಇಡ್ಲಿಯ ರುಚಿಯನ್ನು ಸವಿದ ಸಚಿವರು ರೂ 500 ನೀಡಿ ಕ್ಯಾಂಟಿನಿನಗೆ ಶುಭ ಹಾರೈಸಿದರು.
ಮಹಿಳೆಯರ ಸಬಲೀಕರಣಕ್ಕಾಗಿ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ಸಂಚಾರಿ ಕ್ಯಾಂಟೀನ್ ನನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ನೀಡಲಾಗಿದೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಅವರು ಸದ್ಯ ಜಿಲ್ಲೆಗೆ ಒಂದರಂತೆ 10 ಲಕ್ಷ ಬಡ್ಡಿ ರಹಿತ ಸಾಲ ನೀಡಿದ್ದು, ಆರು ತಿಂಗಳ ನಂತರ ರೂ.15 ಸಾವಿರದಂತೆ ಸಾಲ ಮರುಪಾವತಿ ಮಾಡಬೇಕು. ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸಲು ಈ ಯೋಜನೆ ಸಹಕಾರಿಯಾಗಿದೆ. ಆಹಾರಕ್ಕೆ ಬೇಡಿಕೆ ಇರುವ ಪ್ರದೇಶದಲ್ಲಿ ಈ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತದೆ. ಆಯಾ ಪ್ರದೇಶದ ಆಹಾರ ಪದ್ಧತಿಗೆ ಅನುಸಾರ ಇಲ್ಲಿ ಅಡುಗೆ ತಯಾರಿಸಲಾಗುತ್ತದೆ. ಅಲ್ಲಿನ ಹೊಟೇಲ್ಗಳು ನಿಗದಿ ಮಾಡುವ ದರಕ್ಕಿಂತ ಕಡಿಮೆ ಇರುತ್ತದೆ. ಪ್ರತಿ ಕ್ಯಾಂಟೀನ್ನಲ್ಲಿ 10-11 ಮಹಿಳೆಯರು ಕಾರ್ಯನಿರ್ವಹಿಸುತ್ತಾರೆ. ಮುಖ್ಯವಾಗಿ ಇಲ್ಲಿ ಮನೆಯ ಅಡುಗೆಯನ್ನು ಜನರಿಗೆ ಉಣಬಡಿಸುತ್ತಾರೆ ಎಂದು.
Pamma is popular and BJP has to really sweat it out to unseat him. He may win with a reduced marfin. Hope Raghupathy Bhatta will not get the ticket. He can buy movie ticket instead.