ಅಂಜೆಲೊರ್ ಚರ್ಚಿನಲ್ಲಿ ಹಸಿರು ಜಾಗೃತಿ ಅಭಿಯಾನಕ್ಕೆ ಚಾಲನೆ
ಮಂಗಳೂರು: ಪೋಪ್ ಫ್ರಾನ್ಸಿಸ್ ಅವರು ತಮ್ಮ ಲಾವ್ದಾತೊ ಸಿ ಎಂಬ ವಿಶ್ವ ಪತ್ರದ ಮುಖಾಂತರ ಭೂಮಿಯ ರಕ್ಷಣೆ ಮಾಡಲು ಜಾಗತಿಕ ಕರೆ ನೀಡಿದ್ದಾರೆ. ಮಂಗಳೂರಿನ ಬಿಷಪ್ ಡಾ ಪೀಟರ್ ಪಾವ್ಲ್ ಸಲ್ಡಾನ ಮುಂದಾಳುತ್ವದಲ್ಲಿ ಮಂಗಳೂರು ಧರ್ಮ ಪ್ರಾಂತ್ಯದಲ್ಲಿ ಅಭಿಯಾನವೊಂದನ್ನು ಆರಂಭಿಸಲಾಗಿದೆ. ಚರ್ಚ್ ಆವರಣದಲ್ಲಿ ಗಿಡವೊಂದನ್ನು ನೀಡುವ ಮೂಲಕ ಆಂಜೆಲೊರ್ ಚರ್ಚ್ನಲ್ಲಿ ಈ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ನವೆಂಬರ್ 25 ನೇ ಆದಿತ್ಯವಾರದಂದು ಬೆಳಗ್ಗೆ 7.30ಕ್ಕೆ ಬಲಿಪೂಜೆಯ ಬಳಿಕ ಚರ್ಚ್ನ ಪ್ರಧಾನ ಧರ್ಮಗುರುಗಳಾದ ವಂ. ವಿಲಿಯಂ ಮಿನೆಜಸ್ ಗಿಡವನ್ನು ನೆಟ್ಟು ತಮ್ಮ ಸಂದೇಶದಲ್ಲಿ ನಮಗೆ ದೇವರು ನೀಡಿದ ಪರಿಸರದ ಸಮರ್ಪಕ ಬಳಕೆಯಲ್ಲಿ ನಾವು ತೋರುವ ಬೇಜವಾಬ್ದಾರಿಯಿಂದಾಗಿ ನಾವು ಇಂದು ಪ್ರಕೃತಿಯ ವಿಕೋಪಗಳನ್ನು ಎದುರಿಸುತ್ತಿದ್ದೇವೆ. ನಮ್ಮ ಅತಿ ಆಸೆಗೆ ಕಡಿವಾಣ ಹಾಕಿ ಪಾರಿಸರದ ರಕ್ಷಣೆ ಮಾಡಿ ನೈಸರ್ಗಿಕ ವಿಕೋಪಗಳನ್ನು ಮರುಕಳಿಸದಂತೆ ತಡೆಯುವುದು ಅಗತ್ಯವಿದೆ ಎಂದರು.