Home Mangalorean News Kannada News ಅಂತರರಾಷ್ಟ್ರೀಯ ಮಟ್ಟದಲ್ಲಿ ಖುರ್ ಆನ್ ಪಠಿಸಿ ಪ್ರಶಸ್ತಿ ಬಾಚಿಕೊಂಡ ಕನ್ನಡಿಗ ಬಾಲಕ

ಅಂತರರಾಷ್ಟ್ರೀಯ ಮಟ್ಟದಲ್ಲಿ ಖುರ್ ಆನ್ ಪಠಿಸಿ ಪ್ರಶಸ್ತಿ ಬಾಚಿಕೊಂಡ ಕನ್ನಡಿಗ ಬಾಲಕ

Spread the love

ಅಂತರರಾಷ್ಟ್ರೀಯ ಮಟ್ಟದಲ್ಲಿ ಖುರ್ ಆನ್ ಪಠಿಸಿ ಪ್ರಶಸ್ತಿ ಬಾಚಿಕೊಂಡ ಕನ್ನಡಿಗ ಬಾಲಕ

ಬಹರೈನ್ ; ರಂಜಾನ್ ತಿಂಗಳಲ್ಲಿ ಬಹರೈನ್ ನ ವಿವಿಧ ಮಸೀದಿಗಳಲ್ಲಿ ಸುಂದರವಾಗಿ ಖುರ್ ಆನ್ ಪಾರಾಯಣ ಮಾಡಿ ರಾತ್ರಿಯ ಸಮಯದ ವಿಶೇಷ ಪ್ರಾರ್ಥನೆ ಗಳಿಗೆ ನೇತೃತ್ವ ವಹಿಸಿದ್ದಾನೆ ಭಾರತದ 16ವರ್ಷದ ಬಾಲಕ ಧರ್ವೇಶ್ ಮುಹಮ್ಮದ್ ಅಲಿ.

ಹೌದು ಬಹರೈನ್ ರಾಜರ ಹೆಸರಿನಲ್ಲಿ ನಡೆಸಿದ ಖುರಾನ್ ಪಾರಾಯಣ ದಲ್ಲಿ ಜಯಗಳಿಸಿದ ಧರ್ವೇಶ್ ಗೆ ರಂಜಾನ್ ತಿಂಗಳಲ್ಲಿ ಬಿಡುವಿಲ್ಲದ ದಿವಸಗಳಾಗಿವೆ.ತನ್ನ 13ನೇ ವಯಸ್ಸಿನಿಂದಲೇ ಬಹರೈನ್ ನ ಹಲವು ಮಸೀದಿಗಳಲ್ಲಿ ರಂಜಾನ್ ತಿಂಗಳ ತರಾವೀಹ್ ನಮಾಜ್ ನಿರ್ವಹಿಸುತ್ತಿದ್ದು, ಸದ್ಯ ಬಹರೈನ್ ರಾಜ್ಯದ 11ಮಸೀದಿಗಳಲ್ಲಿ ತರಾವೀಹ್ ನಮಾಜಿಗೆ ನೇತೃತ್ವ ವಹಿಸುತ್ತಿದ್ದಾನೆ. ಕೇವಲ 16 ವರ್ಷದ ಬಾಲಕನ ಮನೋಹರ ಖುರಾನ್ ಪಠಣಕ್ಕೆ ಬಹರೈನ್ ರಾಜರೂ ಕೂಡ ತಲೆತೂಗಿಸಿದ್ದಾರೆ. ಬಹರೈನ್ ನಲ್ಲಿ ನಡೆಸಿದ ಕಿಂಗ್ ಅಹ್ಮದ್ ಬಿನ್ ಇಸಾ ಅಲ್ ಖಲೀಫಾ ಖುರಾನ್ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನಲಂಕರಿಸಿದ ದರ್ವೇಶ್ ಮುಹಮ್ಮದಲಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.

2008 ರಲ್ಲೇ ಸ್ಪರ್ಧಾಕಣಕ್ಕೆ ಲಗ್ಗೆಯಿಟ್ಟ ದರ್ವೇಶ್ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಮುಂತಾದ ಎಲ್ಲಾ ವಿಭಾಗದಲ್ಲೂ ಪ್ರಥಮ ಸ್ಥಾನವನ್ನಲಂಕರಿಸುತ್ತಾ ಬಂದು 2018 ರ ಘಟ್ಟದಲ್ಲಿ ಇಡೀ ವಿಶ್ವವನ್ನೇ ಬೆರಗುಗೊಳಿಸುವಂತೆ ನೂರಾರು ಅರಬಿ ಸ್ಪರ್ಧಾಳುಗಳನ್ನೇ ಹಿಂದಿಕ್ಕಿ ಪ್ರಥಮ ಸ್ಥಾನವನ್ನಲಂಕರಿಸುವ ಮೂಲಕ ಕರ್ನಾಟಕದ ಘನತೆಯನ್ನು ಎತ್ತಿ ಹಿಡಿದಿದ್ದಾರೆ.

ಬಹರೈನ್ ರಾಜ್ಯದ 500 ಅರಬಿ ಹಾಫೀಳ್ ಗಳು ತಮ್ಮ ಪ್ರತಿಭೆ ಯನ್ನು ಪ್ರದರ್ಶಿಸಿದ್ದು,ಅದರಲ್ಲಿ ಕನ್ನಡಿಗ ಹುಡುಗನೊಬ್ಬ ಜಯಗಳಿಸುವುದು ಸುಲಭದ ಮಾತಲ್ಲ. ತನ್ನೆಲ್ಲಾ ಸಾಧನೆಗಳ ಹಿಂದೆ ತಂದೆ ತಾಯಿಯ ಗುರುಹಿರಿಯರ ಪ್ರೋತ್ಸಾಹವಿದ್ದು, ಇದೇ ಹಾದಿಯಲ್ಲಿ ಮುಂದುವರೆಯುತ್ತೇನೆ ಎನ್ನುತ್ತಾರೆ ದರ್ವೇಶ್ .

ಕೊಡಗು ಸ್ವದೇಶಿ ಅಲ್ ಹಾಜ್ ಮುಹಮ್ಮದಾಲಿ ಮುಸ್ಲಿಯಾರ್ ಹಾಗೂ ಸಫಿಯಾ ಹಜ್ಜುಮ್ಮ ದಂಪತಿಗಳ ಏಳು ಮಕ್ಕಳಲ್ಲಿ ಆರನೇಯ ಪುತ್ರನಾಗಿ 2002 ರಲ್ಲಿ ಬಹ್ರೈನ್’ನಲ್ಲಿ ದರ್ವೇಶ್ ಜನಿಸಿದ್ದರು. ಆರಂಭದಲ್ಲಿ ಇಂಡಿಯನ್ ಸ್ಕೂಲ್ ನಲ್ಲಿ ಪ್ರಾಥಮಿಕ ವಿಧ್ಯಾಬ್ಯಾಸ ನಡೆಸಿದ್ದು, 12ವಿಷಯಗಳ ಬಗ್ಗೆ ಬಹರೈನ್ ನ ಅಲ್ ಮಹದ್ ರಿಲೇಜೆಸ್ ಅರೇಬಿಕ್ ಸ್ಕೂಲ್ ನಲ್ಲಿ ಈಗಲೂ ಕಲಿಯುತ್ತಿದ್ದಾನೆ. ಸಂಜೆ ಬಳಿಕ ಮರ್ಕಝ್ ಅಬ್ದುಲ್ಲಾ ಬಿನ್ ಅಬ್ಬಾಸ್ ಅವರ ಮಾರ್ಗದರ್ಶನದಲ್ಲಿ ಖುರಾನ್ ಹಿಫ್ಳ್ ಅಭ್ಯಾಸ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಈಜಿಪ್ಟಿನ ಅಲ್ ಅಝ್ಹರಿ ಕಾಲೇಜಿನಲ್ಲಿ ಉನ್ನತ ವಿಧ್ಯಾಭ್ಯಾಸ ನಡೆಸುವ ಆಕಾಂಕ್ಷೆ ಹೊಂದಿದ್ದಾರೆ ದರ್ವೇಶ್ ನ ಪೋಷಕರು. ದರ್ವೇಶ್ ಅರಬಿ, ಇಂಗ್ಲಿಷ್,ಕನ್ನಡ, ತಮಿಲು,ಮಲಯಾಳಂ, ಹಿಂದಿ ,ಪಂಜಾಬಿ ಭಾಷೆಗಳಲ್ಲಿ ಹಾಡುತ್ತಿದ್ದ ದರ್ವೇಶ್ ತನ್ನ ಆರನೇ ವರ್ಷ ಪ್ರಾಯದಿಂದಲೇ ವಿವಿಧ ಸ್ಪರ್ಧಾ ವೇದಿಕೆಗಳಲ್ಲಿ ಮಿಂಚಲಾರಂಭಿಸಿದ್ದರು.2009 ರಿಂದ ಐಸಿಎಫ್ ಪ್ರತಿಭೋತ್ಸವದಲ್ಲಿ ಸೋಲರಿಯದ ಸರದಾರನಾಗಿ ಮಿಂಚಿದ ದರ್ವೇಶ್ “ಸಲ್ಮಾಬಾದ್ ಸೆಂಟ್ರಲ್ ಐಸಿಎಫ್” ಬಹ್ರೈನ್ ನ್ಯಾಷನಲ್ ಪ್ರತಿಭೋತ್ಸವದಲ್ಲಿ ಎರಡುಬಾರಿ ಚಾಂಪಿಯನ್ ಶಿಪ್ ಪಟ್ಟವನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹಾಡಿನ ಮೂಲಕ ರಂಗಪ್ರವೇಶಿಸಿದ ದರ್ವೇಶ್ ಕ್ರಮೇಣ ಖುರ್’ಆನ್ ಪಾಠ-ಪಾರಾಯಣದತ್ತ ತನ್ನ ಪ್ರತಿಭೆಯನ್ನು ವಿಸ್ತರಿಸಿಕೊಂಡ.ಇನ್ನೂ

ತನ್ನ ಪ್ರತಿಭೆಯನ್ನು ಕೇವಲ ಬಹ್ರೈನ್ ಗೆ ಸೀಮಿತಗೊಳಿಸದ ದರ್ವೇಶ್ ಭಾರತ, ದುಬಾಯ್,ಕತ್ತರ್, ಒಮಾನ್ ಮುಂತಾದೆಡೆ ಕೂಡ ತನ್ನ ಅಪಾರ ಪ್ರತಿಭೆಯನ್ನು ಪ್ರದರ್ಶಿಸಿ ಬೇಷ್ ಎನಿಸಿಕೊಂಡಿದ್ದಾರೆ,


Spread the love

Exit mobile version