ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10000 ಹಾಸಿಗೆಗಳ ಕೋವಿಡ್ ಸೊಂಕಿತರ ಆರೈಕೆ ಕೇಂದ್ರ

Spread the love

ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10000 ಹಾಸಿಗೆಗಳ ಕೋವಿಡ್ ಸೊಂಕಿತರ ಆರೈಕೆ ಕೇಂದ್ರ

ಬೆಂಗಳೂರು: ತುಮಕೂರು ರಸ್ತೆಯ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನೂತನವಾಗಿ 10,000 ಹಾಸಿಗೆಗಳೊಂದಿಗೆ ಸಜ್ಜುಗೊಂಡಿರುವ ಕೋವಿಡ್ ಸೋಂಕಿತರ ಆರೈಕೆ ಕೇಂದ್ರಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ಕೇಂದ್ರವು ಭಾರತದಲ್ಲೇ ಬೃಹತ್ ಕೋವಿಡ್ ಸೋಂಕಿತರ ಆರೈಕೆ ಕೇಂದ್ರವಾಗಿದೆ.

10,100 ಹಾಸಿಗೆಯ ವ್ಯವಸ್ಥೆಯನ್ನು ಲಕ್ಷಣ ರಹಿತ ರೋಗಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಮತ್ತು ವಯಸ್ಕರ ಮನರಂಜನೆಗಾಗಿ ಎಲ್ ಇಡಿ ಪರದೇಗಳಿವೆ. ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಆಮ್ಲಜನಕಯುಕ್ತ ಹಾಸಿಗೆಗಳ ಪ್ರತ್ಯೇಕ ವಿಭಾಗವಿದೆ.

ಆರೈಕೆ ಕೇಂದ್ರದಲ್ಲಿ 150 ನುರಿತ ವೈದ್ಯರು, ಶುಶ್ರೂಷಕರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ

ಅಲ್ಲದೆ ಸೂಕ್ತ ಆಹಾರದ ವ್ಯವಸ್ಥೆ, ಶೌಚಾಲಯ, ಅಗತ್ಯ ಸೇವೆಗಳನ್ನು ಕಲ್ಪಿಸಲಾಗಿದೆ.

ಈ ವೇಳೆ ಮಾನ್ಯ ಶಾಸಕರಾದ ಎಸ್ ಆರ್ ವಿಶ್ವನಾಥ್, ಜಂಟಿ ಆಯುಕ್ತ ಸರ್ಫರಾಜ್ ಖಾನ್ ಇತರರು ಇದ್ದರು.


Spread the love