ಅಂತರಾಜ್ಯ ಮನೆ ಕಳ್ಳತನ ಆರೋಪಿ ಬಂಧಿಸಿ ಚಿನ್ನಾಭರಣ ಸಮೇತ ರೂ 21 ಲಕ್ಷ ಮೌಲ್ಯದ ಸೊತ್ತು ವಶ
ದಿನಾಂಕ 20.12.2024 ರಂದು ಪುತ್ತೂರು ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿ ಮನೆಯೊಂದರ ಬಾಗಿಲು ಮುರಿದು ಚಿನ್ನಾಭರಣಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇದೇ ಮಾದರಿಯಲ್ಲಿ ಜಿಲ್ಲೆಯಾದ್ಯಂತ ಹಲವು ಕಳ್ಳತನ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ, ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಯತೀಶ್ ಎನ್, ಐ.ಪಿ.ಎಸ್ ರವರ ಸೂಚನೆಯಂತೆ, ಪುತ್ತೂರು ಗ್ರಾಮಾಂತರ ಠಾಣೆ, ವಿಟ್ಲ ಠಾಣೆ, ಕಡಬ ಠಾಣಾ ಪೊಲೀಸರ ಜಂಟಿ ತನಿಖಾ ತಂಡ ರಚನೆಯಾಗಿರುತ್ತದೆ. ಸದ್ರಿ ತನಿಖಾ ತಂಡವು ಕಾರ್ಯಾಚರಣೆ ನಡೆಸಿ, ಹಗಲು ಮನೆ ಕಳ್ಳತನ ನಡೆಸಿ ಯಾವುದೇ ಸುಳಿವು ನೀಡದೇ ಪರಾರಿಯಾಗುತ್ತಿದ್ದ ಆರೋಪಿತನಾದ ಉಪ್ಪಳ ಕಾಸರಗೋಡು ಜಿಲ್ಲೆ ಕೇರಳ ನಿವಾಸಿ ಸೂರಜ್ ಕೆ (36) ಎಂಬಾತನನ್ನು, ಕಳ್ಳತನ ಮಾಡಿದ್ದ ಒಟ್ಟು ಅಂದಾಜು ಮೌಲ್ಯ 18,00.000/-ರೂ (ಹದಿನೆಂಟು ಲಕ್ಷ ರೂ) ಮೌಲ್ಯದ 200ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರುತಿ ಆಲ್ಟೋ ಕಾರು ಅಂದಾಜು ಮೌಲ್ಯ 3,00,000/- ರೂ (3 ಲಕ್ಷ) ಸೇರಿದಂತೆ ಒಟ್ಟು ರೂ 21,00,000/- ರೂ( 21 ಲಕ್ಷ ) ಮೌಲ್ಯದ ಸೊತ್ತುಗಳೊಂದಿಗೆ ದಿನಾಂಕ 10.01.2025 ರಂದು ವಶಕ್ಕೆ ಪಡೆದಿರುತ್ತಾರೆ.
ಸದಿ ಆರೋಪಿತನನ್ನು ವಿಚಾರಣೆ ನಡೆಸಲಾಗಿ ಈ ಕೆಳಗಿನ ಪ್ರಕರಣಗಳು ಪತ್ತೆಯಾಗಿರುತ್ತದೆ.
1.ಪುತ್ತೂರು ಗ್ರಾಮಾಂತರ ಠಾಣಾ ಅ,ಕ್ರ 147/2024 ಕಲಂ 305,331(3) ಬಿ ಎನ್ ಎಸ್ 2023 .
2.ಕಡಬ ಪೊಲೀಸ್ ಠಾಣಾ ಅ.ಕ್ರ 110/2024 ಕಲಂ 305,331(3) ಬಿ ಎನ್ ಎಸ್ 2023 .
3.ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 74/2024 ಕಲಂ 305,331(3) ಬಿ ಎನ್ ಎಸ್ 2023 .
4.ವಿಟ್ಲ ಪೊಲೀಸ್ ಠಾಣೆ ಅ,ಕ್ರ 146/2024 ಕಲಂ 305,331(3) ಬಿ ಎನ್ ಎಸ್ 2023 .
5.ವಿಟ್ಲ ಪೊಲೀಸ್ ಠಾಣಾ ಅ,ಕ್ರ 154/2024 ಕಲಂ 305,331(3) ಬಿ ಎನ್ ಎಸ್ 2023 .
6. ವಿಟ್ಲ ಪೊಲೀಸ್ ಠಾಣಾ ಅ,ಕ್ರ 156/2024 ಕಲಂ 305,331(3) ಬಿ ಎನ್ ಎಸ್ 2023 .
7. ವಿಟ್ಲ ಪೊಲೀಸ್ ಠಾಣಾ ಅ,ಕ್ರ 173/2024 ಕಲಂ 305,331(3) ಬಿ ಎನ್ ಎಸ್ 2023 .
ಸದ್ರಿ ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲೆ ಅಧೀಕ್ಷಕರಾದ ಮಾನ್ಯ ಶ್ರೀ ಯತೀಶ್. ಎನ್ ಐ.ಪಿ.ಎಸ್ ರವರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೇಂದ್ರ ಡಿ.ಎಸ್ ರವರ ಮಾರ್ಗದರ್ಶನದಲ್ಲಿ, ಪುತ್ತೂರು ಪೊಲೀಸ್ ಉಪಾಧಿಕ್ಷಕರಾದ ಶ್ರೀ ಅರುಣ್ ನಾಗೇಗೌಡ ,ಹಾಗೂ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಶ್ರೀ ವಿಜಯ್ ಪ್ರಸಾದ್ ರವರ ನಿರ್ದೇಶನದಲ್ಲಿ, ಪುತ್ತೂರು ಗ್ರಾಮಾಂತರ ನಿರೀಕ್ಷಕರಾದ ಶ್ರೀ ರವಿ ಬಿ.ಎಸ್, ವಿಟ್ಲ ಪೊಲೀಸ್ ನಿರೀಕ್ಷಕರಾದ ನಾಗರಾಜ್ ಹೆಚ್ .ಇ.ರವರ ನೇತೃತ್ವದ, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಜಂಬೂರಾಜ್ ಬಿ ಮಹಾಜನ್ , ಮಪಿಎಸ್ ಐ ಸುಷ್ಮಾ ಜಿ ಭಂಡಾರಿ, ಎಎಸ್ಐ ಮುರುಗೇಶ್ ಸಿಬ್ಬಂದಿಗಳಾದ ಉದಯ ರೈ, ರಾಧಾಕೃಷ್ಣ, .ಪ್ರವೀಣ್ ರೈ ಪಾಲ್ತಾಡಿ, ಸ್ಕರಿಯ, ಅದ್ರಾಮ್, ಹರೀಶ್ಗೌಡ, ಹರಿಶ್ಚಂದ್ರ ಹರ್ಷಿತ್ ಗೌಡ, ಚಂದ್ರಶೇಖರ್ ಗೆಜ್ಜೆಳ್ಳಿ, ಶರಣಪ್ಪ ಪಾಟೇಲ್ ,ಶಂಕರ ಸಂಶಿ, ಗದಿಗಪ್ಪ, ವಿವೇಕ್ ,ಕುಮಾರ್ ಹೆಚ್ , ನಾಗೇಶ್ ಕೆ ಸಿ, ಗಣಕಯಂತ್ರ ವಿಭಾಗದ ದಿವಾಕರ್ ಹಾಗೂ ಸಂಪತ್, ಚಾಲಕರಾದ ಎಆರ್ಎಸ್ಐ ಯೋಗೇಶ್ ಹಾಗೂ ನಿತೇಶ್ ಕರ್ನೂರು ಅವರುಗಳನ್ನು ಒಳಗೊಂಡ ತಂಡ ಕರ್ತವ್ಯ ನಿರ್ವಹಿಸಿರುತ್ತದೆ. ಸದ್ರಿ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಶೇಷ ಬಹುಮಾನವನ್ನು ಘೋಷಿಸಿರುತ್ತಾರೆ.