ಅಂತರಾಜ್ಯ ಮಾದಕ ದ್ರವ್ಯ ಸಾಗಾಟ ಜಾಲ ಪ್ರಮುಖ ಆರೋಪಿ ಬಂದನ
ಉಪ್ಪಿನಂಗಡಿ: ಅಂತರಾಜ್ಯ ಮಾದಕ ದ್ರವ್ಯ ಸಾಗಾಟ ಜಾಲದ ಪ್ರಮುಖ ಆರೋಪಿಯೋರ್ವನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಈ ಮೂಲಕ ಕಳೆದ ಡಿಸೆಂಬರ್‌ನಲ್ಲಿ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಪತ್ತೆಯಾದ ೮೧ ಕೆ.ಜಿ. ಗಾಂಜಾ ಸಾಗಾಟ ಪ್ರಕರಣವನ್ನು ಬೇಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಉಪ್ಪಳ ತಾಲೂಕಿನ ಹಸೈನಾರ್ ಎಂಬವರ ಪುತ್ರ ಮೊಯ್ದೀನ್ ನವಾಝ್ ಅಲಿಯಾಸ್ ನವಾಝ್ (೩೨) ಎಂಬಾತ ಬಂಧಿತ ಆರೋಪಿ.
ದ.ಕ. ಜಿಲ್ಲೆಯಲ್ಲಿಯೇ ಭಾರೀ ಪ್ರಮಾಣದ ಗಾಂಜಾ ಸಾಗಾಟ ಪ್ರಕರಣ ಇದಾಗಿದೆ. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಜಿತ್ ಕುಮಾರ್, ಪುತ್ತೂರು ಉಪವಿಭಾಗ ಡಿವೈಎಸ್ಪಿ ಶ್ರೀನಿವಾಸ್ ಅವರ ಮಾರ್ಗದರ್ಶನದಂತೆ, ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಗೋಪಾಲ ನಾಯ್ಕ ಎಂ. ಅವರ ನಿರ್ದೇಶನದಂತೆ ನಡೆದ ಆರೋಪಿಯ ಪತ್ತೆ ಕಾರ್ಯದಲ್ಲಿ ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ನಂದಕುಮಾರ್, ಸಿಬ್ಬಂದಿಗಳಾದ ಶಿವರಾಮ, ಧರ್ನಪ್ಪ, ಅಬ್ದುಲ್ ಸಲೀಂ, ಪ್ರವೀಣ್ ರೈ, ಇರ್ಷಾದ್ ಪಿ., ಜಗದೀಶ್ ಹಾಗೂ ಚಾಲಕರಾದ ರಾಜು ಪೂಜಾರಿ ಬನ್ನೂರು, ನಾರಾಯಣ ಗೌಡ ದರ್ಬೆಯವರು ಭಾಗವಹಿಸಿದ್ದರು.
ಈ ಪ್ರಕರಣವನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಹಾಗೂ ಸಮಸ್ತ ಪೊಲೀಸ್ ಇಲಾಖೆಗೆ ಅಭಿನಂದನೆಗಳು.