ಅಂತರಾಷ್ಟಿçಯ ಖ್ಯಾತಿಯ ವನ್ಯಜೀವಿ ಮತ್ತು ಪಕ್ಷಿಗಳ ಫೋಟೊಗ್ರಾಫರ್ ಸಂತೋಷ್ ಕುಂದೇಶ್ವರರಿಗೆ ರಾಜ್ಯೋತ್ಸವ ಪ್ರಶಸ್ತಿ
ಕುಂದಾಪುರ : ಛಾಯಚಿತ್ರಗ್ರಹಣ ಕ್ಷೇತ್ರದಲ್ಲಿ ಈ ಬಾರಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಕುಂದಾಪುರದ ಸಂತೋಷ್ ಕುಂದೇಶ್ವರ ಅವರನ್ನು ಆಯ್ಕೆ ಮಾಡಲಾಗಿದೆ.1997ರಲ್ಲಿ ಫೋಟೋಗ್ರಾಫರ್ ಆಗಿ ವೃತ್ತಿಜೀವನ ಆರಂಭಿಸಿದ ಇವರು, ಈವರೆಗೆ 260ಕ್ಕೂ ಮಿಕ್ಕಿ ವಿಭಿನ್ನ, ವಿಶಿಷ್ಟ ಪಕ್ಷಿಗಳ ಚಿತ್ರವನ್ನು ಸರೆಹಿಡಿದಿದ್ದಾರೆ. ಡಿಪ್ಲೋಮಾ ವ್ಯಾಸಂಗ ಮಾಡಿರುವ ಇವರಿಗೆ ವನ್ಯಜೀವಿ ಕೀಟಗಳು, ಪಕ್ಷಿಗಳ ಬಗ್ಗೆ ಚಿತ್ರ ಸೆರೆಹಿಡಿಯುವುದೆಂದರೆ ವಿಶೇಷ ಆಸಕ್ತಿ. ಜತೆಗೆ ಅವಿಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.
ಸಂತೋಷ ಕುಂದೇಶ್ವರ, ಅಂತರಾಷ್ಟಿçಯ ಖ್ಯಾತಿಯ ವನ್ಯಜೀವಿ ಮತ್ತು ಪಕ್ಷಿಗಳ ಫೋಟೊಗ್ರಾಫರ್, ಇವರ ಪರಿಚಯ
ಹೆಸರು: ಸಂತೋಷ ಕುಂದೇಶ್ವರ
ವಯಸ್ಸು: ೪೨
ವಿದ್ಯಾಭ್ಯಾಸ: ಡಿಪ್ಲೋಮಾ
ವೃತ್ತಿ: ಛಾಯಾಗ್ರಾಹಕ
ಹವ್ಯಾಸ: ವನ್ಯಜೀವ, ಕೀಟಗಳು ಮತ್ತು ಪಕ್ಷಿಗಳ ಛಾಯಾಗ್ರಹಣ
ವೃತ್ತಿಪರ ಮತ್ತು ಹವ್ಯಾಸಿ ಛಾಯಾಗ್ರಹಣ ಪ್ರಾರಂಭಿಸಿದ ವರ್ಷ: ೧೯೯೭
ಒಟ್ಟು ಅನುಭವ: ೨೩ ವರ್ಷಗಳು
ಕಳೆದ ಎರಡು ದಶಕಗಳಲ್ಲಿ ಅಂತರಾಷ್ಟಿçಯ ಖ್ಯಾತಿ ಗಳಿಸಿದ ದೇಶದ ಪ್ರಮುಖ ಫೋಟೊಗ್ರಾಫರ್ಗಳ ಹೆಸರುಗಳಲ್ಲಿ ಮೊದಲ ಸಾಲಿನಲ್ಲಿರುವ ಹೆಸರು ಸಂತೋಷ ಕುಂದೇಶ್ವರ. ಕುಂದಾಪುರದತಹ ಸಣ್ಣ ಪಟ್ಟಣದಲ್ಲಿ ಹುಟ್ಟಿ ಬೆಳೆದು ಅಲ್ಲಿಯೇ ವಾಸವೂ ಆಗಿರುವ ಸಂತೋಷ್ ಕುಂದೇಶ್ವರ ಅವರ ಹೆಸರು ಜಗತ್ತಿನ ಹಲವು ಫೋಟೊ ಜರ್ನಲ್ಗಳಲ್ಲಿ, ಜಗತ್ತಿನ ಶ್ರೇಷ್ಠ ಫೋಟೊಗ್ರಫಿ ಪ್ರಶಸ್ತಿಗಳನ್ನು ಪಡೆದವರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದರೆ ಅದು ಉಡುಪಿ ಜಿಲ್ಲೆ ಮಾತ್ರವಲ್ಲ ಕರ್ನಾಟಕ ರಾಜ್ಯ ಮತ್ತು ದೇಶಕ್ಕೂ ಹೆಮ್ಮೆಯ ಸಂಗತಿ.
೧೯೯೭ ರಲ್ಲಿ ವೃತ್ತಿಪರ ಫೊಟೊಗ್ರಾಫರ್ ಆಗಿ ವೃತ್ತಿಜೀವನ ಆರಂಭಿಸಿದ ಸಂತೋಷ್ ಅವರಿಗೆ ವೃತ್ತಿಯ ಜೊತೆಗೆ ತನ್ನ ಸುತ್ತಮುತ್ತಲಿನ ಪರಿಸರ, ಕೀಟಗಳು, ಪಕ್ಷಿ ಸಂಕುಲದ ಕುರಿತು ಅವರಿಗಿದ್ದ ಅಪಾರ ಆಸಕ್ತಿ, ಕಾಳಜಿ ಅವರನ್ನು ಇಂದು ಅಂತರಾಷ್ಟಿçÃಯ ಮಟ್ಟದಲ್ಲಿ ಹೆಸರು ಗಳಿಸಿದ ವನ್ಯಜೀವಿ ಮತ್ತು ಪಕ್ಷಿಗಳ ಫೋಟೊಗ್ರಾಫರ್ ಆಗಿ ರೂಪಿಸಿದೆ. ದೇಶದಾದ್ಯಂತ ಹಬ್ಬಿರುವ ಅರಣ್ಯಗಳು, ಪಕ್ಷಿಧಾಮಗಳು, ಅಭಯಾರಣ್ಯಗಳು, ಊರ ಸುತ್ತಮುತ್ತಲಿನ ಸಣ್ಣ ಕಾಡುಗಳು, ನದಿ, ಸಾಗರ, ತೊರೆಗಳು ಹೀಗೆ ಸಂತೋಷ್ ಸುತ್ತದ ಜಾಗಗಳಿಲ್ಲ. ಅಲ್ಲೆಲ್ಲ ಸುತ್ತಾಡುವಾಗ ಸಂತೋಷ್ ಅವರ ಕೈಯ್ಯಲ್ಲಿ ಕ್ಯಾಮೆರಾ ಇದ್ದರೆ ಮನದಲ್ಲಿ ಇದ್ದದ್ದು ವನ್ಯಜೀವ, ಪಕ್ಷಿಗಳು, ಸಣ್ಣ ಸಣ್ಣ ಕೀಟಗಳನ್ನೂ ಒಳಗೊಂಡAತೆ ಪರಿಸರದ ಕುರಿತು ಅಗಾಧವಾದ ವ್ಯಾಮೋಹ ಮತ್ತು ಅಪಾರವಾದ ಕಾಳಜಿ. ಬಾಂದೋಗಡ್, ರಣಥಂಬೋರ್, ಕಾನಾ, ಗಿರ್, ಭರತ್ಪುರ್, ತೋಲ್, ಬಂಡೀಪುರ, ನಾಗರಹೊಳೆ ಹೀಗೆ ಹತ್ತಾರು ಕಡೆಗಳಲ್ಲಿ ದಿನಗಟ್ಟಲೆ ಕಾದು ಕೂತು ಅಪರೂಪದ ವಲಸೆ ಹಕ್ಕಿಗಳೂ ಸೇರಿದಂತೆ ಸಂತೋಷ್ ಸೆರೆಹಿಡಿದ ಪಕ್ಷಿಗಳ ಒಟ್ಟು ಸಂಖ್ಯೆ ೩೬೦ಕ್ಕೂ ಮೀರಿದೆ. ಕೇವಲ ಒಂದೇ ಒಂದು ಹಕ್ಕಿಯ ಒಂದು ನೋಟಕ್ಕಾಗಿ ಮೈಸೂರಿನ ನಗೂನಹಳ್ಳಿ ಎಂಬಲ್ಲಿ ಸಂತೋಷ್ ಸತತ ೨೧ ದಿನ ಕಾದು ಕೂತಿದ್ದರು ಎಂದರೆ ವನ್ಯಜೀವದ ಕುರಿತು ಅವರ ಬದ್ದತೆ ಮತ್ತು ಫೋಟೊಗ್ರಫಿಯ ಕುರಿತ ಉತ್ಕಟತೆಗೆ ಅದಕ್ಕಿಂತ ಸಾಕ್ಷಿ ಬೇರೆ ಬೇಕಿಲ್ಲ.
ಡಾ. ಡಿ. ವಿ. ರಾವ್ ಬಳಿಕ ಮೊದಲ AFIAP ಪುರಸ್ಕಾರ
ಫೋಟೊಗ್ರಫಿ ಇಂದು ಅಗಾಧವಾಗಿ ಬೆಳೆಯುತ್ತಿರುವ ಹವ್ಯಾಸ. ತಂತ್ರಜ್ಞಾನ ಫೋಟೊಗ್ರಫಿಯನ್ನು ಹಿಂದೆAದಿಗಿAತಲೂ ಸರಳ ಮತ್ತು ಸುಲಭವಾಗಿಸಿದೆ. ಆದರೆ ಸಂತೋಷ್ ಅವರ ಈ ಹವ್ಯಾಸ ಆರಂಭಗೊAಡಿದ್ದು ರೀಲ್ ಕ್ಯಾಮೆರಾಗಳ ಕಾಲದಲ್ಲಿ ಮತ್ತು ಅವರಿಗೆ ಸಂದ ಮೊದಲ ಪುರಸ್ಕಾರ ಸಾಗರ್ ಫೊಟೊಗ್ರಫಿಕ್ ಸೊಸೈಟಿ ಅವರು ೨೦೦೨ರಲ್ಲಿ ನಡೆಸಿದ ರಾಜ್ಯಮಟ್ಟದ ಫೊಟೊಗ್ರಫಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ “ಇತಿಹಾಸಕ್ಕೊಂದು ಚೌಕಟ್ಟು’ ಎಂಬ ಶೀರ್ಷಿಕೆಯ ಛಾಯಾಚಿತ್ರಕ್ಕೆ. ಆ ಫೋಟೊ ರೀಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿತ್ತು ಮತ್ತು ಸಾಗರ್ ಫೊಟೊಗ್ರಫಿಕ್ ಸೊಸೈಟಿ ಅವರು ಪ್ರಕಟಿಸುವ ಫೋಟೊಗ್ರಫಿ ಪುರವಣಿಯ ಮುಖಪುಟದಲ್ಲಿ ಆ ಚಿತ್ರ ಪ್ರಕಟಗೊಂಡಿತು. ಅಲ್ಲಿಂದ ಆರಂಭವಾದ ಸಂತೋಷ್ ಅವರ ಪುರಸ್ಕಾರಗಳ, ಸಾಧನೆಗಳ ಮ್ಯಾರಥಾನ್ ಓಟ ರಾಷ್ಟಿçÃಯ, ಅಂತರಾಷ್ಟಿçÃಯ ಮಟ್ಟಕ್ಕೆ ತಲುಪಿತು. ಅವರಿಗೆ ಸಂದ ಫೊಟೊಗ್ರಫಿ ಬಹುಮಾನಗಳ, ಅವರ ಸಾಧನೆಗಳ ಪಟ್ಟಿಯನ್ನು ಮುಂದೆ ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಅವರಿಗೆ ದೊರೆತ ಪ್ರತಿಯೊಂದು ಬಹುಮಾನವೂ ವಿಭಿನ್ನ, ವಿಶಿಷ್ಟ. ಆದರೆ ಅದರಲ್ಲಿ ಮುಖ್ಯವಾಗಿ ಇಲ್ಲಿ ಉಲ್ಲೇಖಿಸಲೇಬೇಕಾದ ಒಂದು ಪುರಸ್ಕಾರವೆಂದರೆ ೨೦೧೨ರಲ್ಲಿ ಸಂತೋಷ್ ಅವರ ಒಟ್ಟು ಸಾಧನೆಗೆ ದೊರೆತ ಂಈIAP ಪುರಸ್ಕಾರ. ೧೯೫೮ ರಲ್ಲಿ ಭಾರತದ ಶ್ರೇಷ್ಠ ಫೋಟೊಗ್ರಫಿ ತಜ್ಞರಾಗಿದ್ದ ಕರ್ನಾಟಕದ ಡಾ. ಡಿ. ವಿ. ರಾವ್ ಅವರಿಗೆ ಈ ಪುರಸ್ಕಾರ ಬಂದ ಬಳಿಕ ದಕ್ಷಿಣ ಕರ್ನಾಟಕದಲ್ಲಿ ಈ ಪುರಸ್ಕಾರ ಪಡೆದ ಏಕೈಕ ಫೊಟೊಗ್ರಾಫರ್ ಸಂತೋಷ್ ಎಂಬುದು ಅವರ ಸಾಧನೆಗೆ ಸಾಕ್ಷಿ.