ಅಂತರ್ ಜಿಲ್ಲಾ ದನಕಳ್ಳತನ ಮತ್ತು ಮಾರಾಟದ ಆರೋಪಿ ಬಂಧನ
ಮಂಗಳೂರು: ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ ಶ್ರೀನಿವಾಸ ಆರ್. ಗೌಡ ನೇತ್ರತ್ವದ ವಿಷೇಷ ಅಪರಾಧ ಪತ್ತೆ ದಳಕ್ಕೆ ದೊರೆತ ಖಚಿತ ವರ್ತಮಾನದ ಮೇರೆಗೆ ಮೂಡುಬಿದ್ರೆ ತೋಡಾರ್ ನಿವಾಸಿ ಹಲವಾರು ದನಕಳ್ಳತನ ಪ್ರಕರಣ ಗಳಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿತ ಮೂಡುಬಿದ್ರೆ ನಿವಾಸಿ ಬಶೀರ್ ಯಾನೆ ಆರ್ಗಾ ಬಶೀರ್ ಎಂಬಾತನನ್ನು ದಸ್ತಗಿರಿ ಮಾಡುವಲ್ಲಿ ವಿಷೇಷ ಅಪರಾಧ ಪತ್ತೆ ದಳ ಯಶಸ್ವೀಯಾಗಿದೆ.
ದನಕಳ್ಳತನವನ್ನೆ ಕಸುಬನ್ನಾಗಿಸಿಕೊಂಡಿದ್ದ ಮೂಡುಬಿದ್ರೆ ಸಮೀಪದ ನಿವಾಸಿ ಬಶೀರ್ ಯಾನೆ ಆರ್ಗಾ ಬಶೀರ್ ಈತ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದರೂ ಈತನ ಚಹಚರರು ದಸ್ತಿಗಿರಿಯಾದರೂ ಘಟನೆಯ ಬಳಿಕ ತಲೆ ಮರೆಸಿಕೊಂಡು ಬಳಿಕ ನ್ಯಾಯಾಲಯದಿಂದ ಮುಂಜಾಗ್ರತಾ ಜಾಮೀನು ಪಡೆದು ಬಳಿಕ ಅದೇ ಕೃತ್ಯದಲ್ಲಿ ತೊಡಗಿಸಿಕೊಂಡು ತಿರುಗುತ್ತಿದ್ದು ಇತ್ತೀಚಗೆ ಉಜಿರೆಯ ಬಳಿಯಲ್ಲಿ ದನಗಳನ್ನು ಕಳ್ಳತನಮಾಡಿ ಸಾಗಿಸ್ತುತ್ತಿದ್ದಾಗ ವಾಹನ ಅಡಿಮೇಲಾಗಿ ವಾಹನದಲ್ಲಿದ್ದ ದನಗಳೆಲ್ಲ ಸತ್ತಿದ್ದು ಈ ವಾಹನದಲ್ಲಿ ಈತನೇ ಚಾಲಕನಾಗಿ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದು ಅಲ್ಲದೆ ಸುರತ್ಕ್ಲಲ್ ಕೃಷ್ಣಾಪುರ ನೈತಂಗಡಿ ಬಳಿಯಲ್ಲಿ ಗೀತಾ ಎಂಬವರ ಮನೆಯಿಂದ ದನ ಕಳ್ಳತನ ಮಾಡಿದ ಆರೋಫಿಗಳ ಪೈಕಿ ಈತನೇ ಪ್ರಮುಖನಾಗಿರುತ್ತಾನೆ.
ಈತನ ವಿರುಧ್ದ ಈ ಕೆಳಗಿನ ಚಿಕ್ಕಮಗಳೂರು, ಕೊಡಗು ಮತ್ತು ದಕ ಜಿಲ್ಲೆಯ ಹಲವಾರು ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣ ದಾಖಲಾಗಿರುತ್ತದೆ.
ಈತ ಪ್ರಕರಣ ದಾಖಲಾಗಿ ದಸ್ತಗಿರಿಗೆ ಸಿಗದೇ ತಲೆ ಮರೆಸಿಕೊಂಡು ತಿರುಗುತ್ತಿದ್ದುದಾಗಿ ಮಾಹಿತಿಯಿದ್ದು ಈ ದಿನ ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ ಶ್ರೀನಿವಾಸ ಆರ್. ಗೌಡ ನೇತ್ರತ್ವದ ವಿಷೇಷ ಅಪರಾಧ ಪತ್ತೆ ದಳಕ್ಕೆ ದೊರೆತ ಖಚಿತ ವರ್ತಮಾನದ ಮೇರೆಗೆ ಆತನನ್ನು ಮೂಡುಬಿದ್ರೆಯ ತೋಡಾರ್ ಬಳಿ ಮೂಡುಬಿದ್ರೆ ಪೊಲೀಸರ ಸಹಕಾರದೊಂದಿಗೆ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಪೊಲೀಸು ಆಯುಕ್ತರಾದ ಸಂದೀಪ್ ಪಾಟಿಲ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ-ಆಯುಕ್ತರು (ಕಾ & ಸು) ಹನುಮಂತರಾಯ ಐ.ಪಿ.ಎಸ್. ಪೊಲೀಸ್ ಉಪ-ಆಯುಕ್ತರು(ಅಪರಾಧ & ಸಂಚಾರ) ಲಕ್ಮೀ ಗಣೇಶ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಆರ್ ಗೌಡ (ಐಪಿಎಸ್) ಇವರ ನೇತೃತ್ವ್ವದಲ್ಲಿ ಬಜಪೆ ಠಾಣಾ ಪೊಲೀಸ್ ನಿರೀಕ್ಷಕರಾದ ಪರಶಿವ ಮೂರ್ತಿ, ಸುರತ್ಕಲ್ ಪೊಲೀಸ್ ಠಾಣಾ ನಿರೀಕ್ಷಕರಾದ ರಾಮಕೃಷ್ಣ ಕೆ.ಜಿ.,ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆ ದಳದ ಅಧಿಕಾರಿ ಸಿಬ್ಬಂದಿಗಳಾದ ಮೊಹಮ್ಮದ್ ಎ.ಎಸ್.ಐ. ಕುಶಲ ಮಣಿಯಾಣಿ, ಸತೀಶ್. ಎಂ. ವಿಜಯ ಕಾಂಚನ್, ಇಸಾಕ್ ಮತ್ತು ಶರಣ್ ಕಾಳಿ,ಹಾಗೂ ಮೂಡುಬಿದ್ರೆ ಠಾಣಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಪರಿ ಶ್ರಮದಿಂದ ನಡೆದಿರುತ್ತದೆ.