Home Mangalorean News Kannada News ಅಂತರ್ ರಾಜ್ಯ ಕಳವು ಪ್ರಕರಣದ ಆರೋಪಿಗಳ ಬಂಧನ

ಅಂತರ್ ರಾಜ್ಯ ಕಳವು ಪ್ರಕರಣದ ಆರೋಪಿಗಳ ಬಂಧನ

Spread the love

ಅಂತರ್ ರಾಜ್ಯ ಕಳವು ಪ್ರಕರಣದ ಆರೋಪಿಗಳ ಬಂಧನ

ಮಂಗಳೂರು : ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಕೇರಳರಾಜ್ಯದ ಕೊಯಿಲಾಂಡಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಕನ್ನಕಳವು ಪ್ರಕರಣದ ಆರೋಪಿಗಳಾದ ಚಿಕ್ಕಮಗಳೂರು ಕೊಪ್ಪ ನಿವಾಸಿ ಅನಿಲ್ ಕುಮಾರ್ (28), ಮಂಗಳೂರು ಬೋಳಿಯಾರ್ ನಿವಾಸಿ ವಿರೇಂದ್ರ ಶೆಟ್ಟಿ (46) ಮತ್ತು ಮಂಗಳೂರು ಬೆಂಗರೆ ಕಸಬಾ ನಿವಾಸಿ ಅಬ್ದುಲ್ ರಹೀಂ @ ಚಪ್ಪೆ ತಣ್ಣಿ ರಹೀಂ (42) ರವರನ್ನು ದಿನಾಂಕ 26-03-2019 ರಂದು ಬಂಧಿಸಿ, ಕಳವು ಮಾಡಿದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ದಸ್ತಗಿರಿಯಾದ ಆರೋಪಿಗಳಿಂದ ಕೇರಳದ ರಾಜ್ಯದ ಕೊಯಿಲಾಂಡಿಯಲ್ಲಿರುವ ಮನೆಯಿಂದ ಕಳವು ಮಾಡಿದ ಚಿನ್ನಾಭರಣಗಳನ್ನು, ಕೇರಳ ರಾಜ್ಯದ ಕೊಯಿಲಾಂಡಿಯ ಇನ್ನೊಂದು ಮನೆಯಿಂದ ಕಳವು ಮಾಡಿದ ಸೋನಿ ಕಂಪನಿಯ ಟಿವಿ ಮತ್ತು ಮಂಗಳೂರಿನ ಕುಲಶೇಖರದಲ್ಲಿರುವ ಮನೆಯಿಂದ ಕಳವು ಮಾಡಿದ ಓನೀಡಾ ಕಂಪನಿಯ ಟಿವಿ ಮತ್ತು ತಾಮ್ರದ ಹಂಡೆ ಒಟ್ಟು ಸುಮಾರು 4,40,000/-ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತು.

ವಶಪಡಿಸಿಕೊಂಡ ಸೊತ್ತುಗಳ ವಿವರ
ಸುಮಾರು 136 ಗ್ರಾಂ ತೂಕದ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿ, ಟಿವಿ-2 ಹಾಗೂ ತಾಮ್ರದ ಹಂಡೆ
ಅಂದಾಜು ಒಟ್ಟು 4,40,000/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಆರೋಪಿಗಳ ಪೈಕಿ ಅನಿಲ್ ಕುಮಾರ್ ಎಂಬಾತನ ಮೇಲೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ 3 ಕಳ್ಳತನ ಪ್ರಕರಣ, ಉಡುಪಿ ನಗರ ಠಾಣೆಯಲ್ಲಿ 2 ಕಳ್ಳತನ ಪ್ರಕರಣ, ಕ್ಯಾಲಿಕಟ್ ಮೆಡಿಕಲ್ ಕಾಲೇಜು ಪೊಲೀಸ್ ಠಾಣೆಯಲ್ಲಿ 3 ಕಳ್ಳತನ ಪ್ರಕರಣ, ಕ್ಯಾಲಿಕಟ್ಪೊಪೊಲೀಸ್ ಠಾಣೆಯಲ್ಲಿ 01 ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳ ಪೈಕಿ ವಿರೇಂದ್ರಶೆಟ್ಟಿ ಎಂಬಾತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ದರೋಡೆ ಪ್ರಕರಣ, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ 1 ದರೋಡೆ ಪ್ರಕರಣ, ಕೊಣಾಜೆ ಪೊಲೀಸ್ ಠಾಣೆಯಲ್ಲಿ 01 ಕೊಲೆಯತ್ನ ಪ್ರಕರಣ, ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 01 ದರೋಡೆ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಗಳ ಪೈಕಿ .ಅಬ್ದುಲ್ ರಹೀಂ, @ ಚಪ್ಪೆ ತಣ್ಣಿ ರಹೀಂ, ಎಂಬಾತನ ಮೇಲೆ ಉತ್ತರ ಪೊಲೀಸ್ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣ , ಬರ್ಕೆ ಪೊಲೀಸ್ ಠಾಣೆ, ಪಣಂಬೂರು ಪೊಲೀಸ್ ಠಾಣೆ, ಕರಾವಳಿ ಕಾವಲುಪಡೆ ಪೊಲೀಸ್ ಠಾಣೆ, ಮಂಗಳೂರು ಪೂರ್ವ ಪೊಲೀಸ್ ಠಾಣೆ ತಲಾ ಒಂದೊಂದು ಗಾಂಜಾ ಪ್ರಕರಣ ದಾಖಲಾಗಿರುತ್ತದೆ, ಈತನು ಮೇಲೆ 2017 ನೇ ಸಾಲಿನಲ್ಲಿ ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್, ಐಪಿಎಸ್. ರವರ ನಿರ್ದೇಶನದಲ್ಲಿ ಉಪ ಪೊಲೀಸ್ ಆಯುಕ್ತರಾದ (ಕಾನೂನು ಮತ್ತು ಸುವ್ಯವಸ್ಥೆ) ಹನುಮಂತರಾಯ, ಐಪಿಎಸ್ ಉಪ ಪೊಲೀಸ್ ಆಯುಕ್ತರಾದ (ಅಪರಾಧ ಮತ್ತು ಸಂಚಾರ) ಉಮಾಪ್ರಶಾಂತ್, ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಸುಧೀರ್ ಹೆಗ್ಡೆರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಕುಮಾರ್ ಆರಾಧ್ಯ ರವರ ನಿರ್ದೇಶನದಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಮಂಜುಳಾ.ಎಲ್ ರವರು ಠಾಣಾ ಸಿಬ್ಬಂದಿಗಳ ಸಹಕಾರದಿಂದ ಆರೋಪಿಗಳನ್ನು ದಸ್ತಗಿರಿ ಮಾಡಿರುವುದಾಗಿದೆ..


Spread the love

Exit mobile version