ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ 7 ಮಂದಿಯ ಬಂಧನ
ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿಮೊಗರು ಗ್ರಾಮದ ಕಡೆಕಾರ್ ಎಂಬಲ್ಲಿರುವ ರಿವರ್ ಡೇಲ್ ಸಮೀಪ ನೇತ್ರಾವತಿ ನದಿ ಕಿನಾರೆ ಬಳಿ ಸಾರ್ವಜನಿಕ ಸ್ಧಳದಲ್ಲಿ ಉಲಾಯಿ ಪಿದಾಯಿ (ಅಂದರ್ ಬಾಹರ್) ಆಟ ಆಡುತ್ತಿದ್ದಾರೆಂದು ಬಂದ ಖಚಿತ ವರ್ತಮಾನದ ಮೇರೆಗೆ ಮಾಹಿತಿ ಬಂದ ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿ ಜುಗಾರಿ ಆಟವನ್ನು ಆಡುತ್ತಿದ್ದ ಏಳು ಮಂದಿಯನ್ನು ಪೋಲಿಸರು ಬಂಧಿಸಿದ್ದಾರೆ
ಬಂಧಿತರನ್ನು ಮಂಗಳೂರು ಸೋಮೇಶ್ವರ ನಿವಾಸಿ ನಾಸಿರ್ (52), ಉಳ್ಳಾಲ ಮಕ್ಕಚ್ಚೇರಿ ನಿವಾಸಿ ಫಾರೂಕ್ (58), ಕುಂಜತ್ ಬೈಲ್ ನಿವಾಸಿ ತಯ್ಯೂಬ್ ಹುಸೇನ್ (50), ಬೋಳೂರು ಕಟ್ಟೆ ಪ್ರಶಾಂತ್(34) ಉಳ್ಳಾಲ ನಿವಾಸಿ ಅಬ್ದುಲ್ ಲತೀಫ್(55), ಬೆಂದೂರು ನಿವಾಸಿ ನೈಜಿಲ್ ಮೊಂತೆರೋ (36), ಬೋಳಾರ ಎಮ್ಮೆಕೆರೆ ನಿವಾಸಿ ಜಮೀರ್ ಅಹ್ಮದ್ (42) ಎಂದು ಗುರುತಿಸಲಾಗಿದೆ.
ಆರೋಪಿತರ ಕೈಯಲ್ಲಿದ್ದ 6 ಮೊಬೈಲ್ ಹ್ಯಾಂಡ್ ಸೆಟ್ ಹಾಗೂ ಉಲಾಯಿ-ಪಿದಾಯಿ [ಅಂದರ್-ಬಾಹರ್] ಎಂಬ ಅದೃಪ್ಟದ ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ಒಟ್ಟು ಹಣ 30,090/- ರೂಪಾಯಿ ನಗದು ಮತ್ತು ಆಟಕ್ಕೆ ಬಳಸಿದ 52 ಇಸ್ಪೀಟ್ ಕಾರ್ಡ್ಗಳನ್ನು ಹಾಗೂ 04 ಮೋಟಾರ್ ಸೈಕಲ್ ಗಳನ್ನು ಕೂಡಾ ಪಂಚರುಗಳ ಸಮಕ್ಷಮ ಮಹಜರು ಮುಖೇನ ಸ್ವಾದೀನ ಪಡಿಸಿಕೊಂಡು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಲಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಪೊಲೀಸ್ ಸಹಾಯಕ ಆಯುಕ್ತರಾದ ರಾಮರಾವ್ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಅಶೋಕ್ ಪಿ., ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್. ರವರು ಠಾಣಾ ಸಿಬ್ಬಂದಿಗಳ ಸಹಯೋಗದೊಂದಿಗೆ ನಡೆಸಿರುತ್ತಾರೆ.