Home Mangalorean News Kannada News ಅಕ್ರಮ ಗಾಂಜಾ ಮಾರಾಟ ಯತ್ನ – ಒರ್ವನ ಬಂಧನ, ರೂ 3.23 ಲಕ್ಷ ಮೌಲ್ಯದ ಸೊತ್ತು...

ಅಕ್ರಮ ಗಾಂಜಾ ಮಾರಾಟ ಯತ್ನ – ಒರ್ವನ ಬಂಧನ, ರೂ 3.23 ಲಕ್ಷ ಮೌಲ್ಯದ ಸೊತ್ತು ವಶ

Spread the love

ಅಕ್ರಮ ಗಾಂಜಾ ಮಾರಾಟ ಯತ್ನ – ಒರ್ವನ ಬಂಧನ, ರೂ 3.23 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಲಾಡ್ಜಿನಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ಇಟ್ಟುಕೊಂಡಿದ್ದ ಆರೋಪಿಯನ್ನು ಡಿ.ಸಿ.ಐ.ಬಿ ಪೊಲೀಸರು ಬಂಧಿಸಿ 10 ಕೆಜಿ 600 ಗ್ರಾಂ ಗಾಂಜಾ ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.

ಬಂಧಿತ ಆರೋಪಿಯನ್ನು ಮಹಾರಾಷ್ಟ್ರ ಥಾಣೆ ನಿವಾಸಿ ವಿನೋದ್ ರಾಮ್ ಸೇವಕ್ ಯಾದವ್ (26) ಎಂದು ಗುರುತಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್ ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ.ಆರ್.ಜೈ ಶಂಕರ್ ಅವರ ಮಾರ್ಗದರ್ಶನದಲ್ಲಿ, ಉಡುಪಿ ಡಿಸಿಐಬಿ ಪೊಲೀಸ್ ಇನ್ಸ್ಪೆಕ್ಟರ್ ಸಿ.ಕಿರಣ್ ಅವರು ಖಚಿತ ಮಾಹಿತಿ ಮೇರೆಗೆ ಉಡುಪಿ ಡಿಸಿಐಬಿ ಸಿಬ್ಬಂದಿಯವರೊಂದಿಗೆ ಉಡುಪಿ ಕಲ್ಪನಾ ಲಾಡ್ಜ್ ಬಿಲ್ಡಿಂಗ್ ಬಳಿ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಇಟ್ಟುಕೊಂಡಿದ್ದ ಆರೋಪಿ ವಿನೋದ್ ರಾಮ್‌ಸೇವಕ್ ಎಂಬವನನ್ನು ಪತ್ರಾಂಕಿತ ಅಧಿಕಾರಿ ಹಾಗೂ ಪಂಚರೊಂದಿಗೆಹೋಗಿ ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ 10 ಕೆ.ಜಿ 600 ಗಾಂಜಾ, 2 ಮೊಬೈಲ್ ಫೋನ್, ಬ್ಯಾಗ್, ಬಟ್ಟೆ, ನಗದು ಹಣ ಇತ್ಯಾದಿಗಳನ್ನು ಸ್ವಾಧೀನಪಡಿಸಿಕೊಂಡು ಸೆನ್ ಅಪರಾಧ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ಸುಮಾರು 3,23,300/- ರೂಪಾಯಿ ಆಗಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಡಿ.ಸಿ.ಐ.ಬಿ ಘಟಕದ ಎಎಸ್‌ಐ ರವಿಚಂದ್ರ ಹಾಗೂ ಸಿಬ್ಬಂದಿಯವರಾದ ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ, ಸಂತೋಷ ಕುಂದರ್, ರಾಘವೇಂದ್ರ ಉಪ್ಪುಂದ, ರಾಜ್‌ಕುಮಾರ್, ದಯಾನಂದ ಪ್ರಭು, ಶಿವಾನಂದ ಹಾಗೂ ಚಾಲಕ ರಾಘವೇಂದ್ರ ರವರು ಸಹಕರಿಸಿರುತ್ತಾರೆ. ಪತ್ತೆ ತಂಡಕ್ಕೆ ಪೊಲೀಸ್ ಅಧೀಕ್ಷಕರು ರೂಪಾಯಿ 20,000/-ನ್ನು ನಗದು ಪಾರಿತೋಷಕವಾಗಿ ಘೋಷಿಸಿರುತ್ತಾರೆ.


Spread the love

Exit mobile version