ಅಕ್ಷಯ ಪಾತ್ರ ಮತ್ತು ವಿಶ್ವ ಕೊಂಕಣಿ ಕೇಂದ್ರ ಸಹಯೋಗದಲ್ಲಿ ಆಹಾರ ಧಾನ್ಯಗಳಕಿಟ್ ವಿತರಣೆ

Spread the love

ಅಕ್ಷಯ ಪಾತ್ರ ಮತ್ತು ವಿಶ್ವ ಕೊಂಕಣಿ ಕೇಂದ್ರ ಸಹಯೋಗದಲ್ಲಿ ಆಹಾರ ಧಾನ್ಯಗಳಕಿಟ್ ವಿತರಣೆ

ಮಂಗಳೂರು: ‘ಅಕ್ಷಯ ಪಾತ್ರ ಮತ್ತು ‘ವಿಶ್ವ ಕೊಂಕಣಿ ಕೇಂದ್ರ’ ಸಹಯೋಗದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಕೊಂಕಣಿ 2500 ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ಗಳನ್ನು ವಿತರಿಸಲಾಗಿದೆ.

ಮಣಿಪಾಲ ಗ್ಲೋಬಲ್ ಎಜುಕೇಶನ್ ಸರ್ವಿಸಸ್ ಚೆಯರ್ಮೆನ ಟಿ. ವಿ. ಮೋಹನದಾಸ ಪೈ ಹಾಗೂ ವಿಶ್ವ ಕೊಂಕಣಿ ಕೇಂದ್ರ ವಿದ್ಯಾರ್ಥಿ ವೇತನ ನಿಧಿ ಅಧ್ಯಕ್ಷ ರಾಮದಾಸ ಕಾಮತ್ ಯು ಹಾಗೂ ಕಾರ್ಯದರ್ಶಿ ಪ್ರದೀಪ ಜಿ. ಪೈ ಮಾರ್ಗಸೂಚಿಯಂತೆ ಉಪಯುಕ್ತವಾದ ಹಾಗೂ ಅಗತ್ಯವಾದ ರೂ. 18.75 ಲಕ್ಷ ಮೌಲ್ಯವುಳ್ಳ ಆಹಾರ ಧಾನ್ಯಗಳ ಕಿಟ್ಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಮಂಗಳೂರು ತಾಲೂಕಿನ ಎಡಪದವು, ಭಟ್ಕಳ ಜಿಲ್ಲೆಗಳಲ್ಲಿ ಕೊಂಕಣಿ ಕುಡುಬಿ, ಖಾರ್ವಿ, ವ್ಯಶ್ಯವಾಣಿ, ಚಪ್ಟೇಕಾರ, ಜಿ.ಎಸ.ಬಿ, ಚಾರೋಡಿ ಹಾಗೂ ದಿನಗೂಲಿ ಕಾರ್ಯಕರ್ತರಿಗೆ ವಿತರಣೆ ಮಾಡಲಾಗಿದೆ.

ವಿಶ್ವ ಕೊಂಕಣಿ ಕೇಂದ್ರ ವಿದ್ಯಾರ್ಥಿ ವೇತನ ನಿಧಿ ಫಲಾನುಭವಿ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಭಾಗವಹಿಸಿ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ಸಂಚಾಲಕರಾದ   ಸಿ. ಎ. ಗಿರಿಧರ ಕಾಮತ್, ಗುರುದತ್ತ ಬಂಟವಾಳಕರ ಮತ್ತು ಸಹನಾ ಕಿಣಿ ಮಾರ್ಗದರ್ಶನದಲ್ಲಿ ‘ಅಕ್ಷಯ ಪಾತ್ರ” ಲೇಬಲ್ ಇರುವ ಕಿಟ್ ತಯಾರಿಸಲಾಗಿದೆ. ಈ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ‘ಹಾಂಗ್ಯೊ ಐಸ್ಕ್ರೀಮ್ಸ್’ ಪ್ರೈ. ಲಿಮಿಟೆಡ್ ಕಂಪೆನಿ ವಾಹನಗಳ ಮೂಲಕ ಆಯಾ ಸಮುದಾಯಗಳ ಮುಖಂಡರುಗಳ ನೇತೃತ್ವದಲ್ಲಿ ವಿತರಿಸಲಾಯಿತು, ಎಂದು ವಿಶ್ವ ಕೊಂಕಣಿ ಕೇಂದ್ರದ ಪ್ರಕಟಣೆ ತಿಳಿಸಿದೆ.


Spread the love