ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಯಿತು
ಮಂಗಳೂರು: ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ಪುನರ್ ನಿರ್ಮಾಣ ಎಂಬ ಉದಾತ್ತ ಚಿಂತನೆಯೊಂದಿಗೆ ವಿದ್ಯಾರ್ಥಿ ಸಮೂದಾಯದಲ್ಲಿ ರಾಷ್ಟ್ರೀಯತೆ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜುಲೈ 09 ರಿಂದ 1949ರಂದು ಅಧಿಕೃತವಾಗಿ ಪ್ರಾರಂಭವಾಯಿತು ಅಂದಿನಿಂದ ಸ್ಥಾಪನೆ ಆದ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ.
ಅಂತೆಯೇ ಇಂದು ಪರಿಷತ್ತಿನ 69ನೇ ಸ್ಥಾಪನದಿನದ ಅಂಗವಾಗಿ ಪರಿಷತ್ ಕಾರ್ಯಾಲಯ ವಿವೇಕದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಗರ ಸಂಘಟನಾ ಕಾರ್ಯದರ್ಶಿ ಶ್ರೀ ಕಿರಣ್ ಬೇವಿನಹಳ್ಳಿರವರು ಭಾರತ ಎನ್ನುವುದು ಕೇವಲ ಹೆಸರಲ ಆ ಹೆಸರಿನಲ್ಲಿಯೇ ಒಂದು ಶಕ್ತಿ. ಇದೇ ಭಾರತವು ವಿಜಯನಗರ ಕಾಲದಿಂದಲೂ ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಸಾಂಸ್ಕೃತಿಕ ಶಿಲ್ಪಕಲೆಗೆ ಹೆಸರುವಾಸಿಯಾದ ರಾಷ್ಟ್ರ ಹಾಗೆಯೇ ಇಂದು ಸಹ ಭಾರತವು ತನ್ನ ಅಭಿವೃದ್ಧಿಯಿಂದ ಹೆಸರುವಾಸಿಯಾಗುತ್ತಿರುವಂತಹ ರಾಷ್ಟ್ರ. ಅಣ್ಣ ಹಜಾರೆಯಂತಹ ರಾಷ್ಟ್ರಭಕ್ತರನ್ನು ನಾವು ಪ್ರಸ್ತುತತೆಯಲ್ಲಿ ನೋಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಜ್ಞಾನ ಶೀಲ, ಏಕತೆ ಎಂಬ ಮೂರು ತತ್ವಗಳಡಿಯಲ್ಲಿ 69 ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ ಮೂಡಿಸುವ ಕೆಲಸ ಮಾಡುತ್ತಿದ್ದು ಸ್ವಾಮಿ ವಿವೇಕಾನಂದರು ಭಗತ್‍ಸಿಂಗ್ ರಂತಹ ಉದಾತ್ತ ವ್ಯಕ್ತಿಗಳೇ ನಮಗೆ ಆದರ್ಶ ಎಂದು ಹೇಳಿದರು. ಎ.ಬಿ.ವಿ.ಪಿ ಕೇವಲ ಹೋರಾಟಕ್ಕೆ ಸೀಮಿತವಲ್ಲದೆ, ವಿದ್ಯಾರ್ಥಿಗಳಿಗೆ ದೇಶಾಭಿಮಾನ ಮೂಡಿಸುತ್ತ ಬಡ ವಿದ್ಯಾರ್ಥಿಗಳಿಗೆ, ಉಚಿತ ಸಿ.ಇ.ಟಿ ಕೋರ್ಸ್, ಉಚಿತ ಕಂಪ್ಯೂಟರ್, ಆಯುರ್ವೇದಿಕ ವಿದ್ಯಾರ್ಥಿಗಳಿಗೆ ಜಿಜ್ಞಾಸ, ಮೆಡಿಕಲ್ ವಿದ್ಯಾರ್ಥಿಗಳಿಗೆ ಮೆಡಿವಿಷನ್ ಎಂಬ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಎ.ಬಿ.ವಿ.ಪಿ ಬೆಂಬಲಿತ ಸರ್ವ ಕಾಲೇಜು ಸಂಘದ ಅಧ್ಯಕ್ಷರಾದ ವಿಕಾಸ್‍ರವರು ಉಪಸ್ಥಿತರಿದ್ದರು. ಹಾಗೆಯೇ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಲಾ, ಎಸ್.ಡಿ.ಎಂ ಬಿ.ಬಿ.ಎಂ, ಯುನಿವರ್ಸಿಟಿ ಕಾಲೇಜು, ಕೆನರಾ ಕಾಲೇಜು, ಗೋಕರ್ಣನಾಥೇಶ್ವರ, ಕೆ.ಪಿ.ಟಿ ಕಾಲೇಜು, ಶ್ರೀನಿವಾಸ ಕಾಲೇಜು ಸೇರಿದಂತೆ ನಗರದ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.