Home Mangalorean News Kannada News ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ವತಿಯಿಂದ ಕಾನೂನು ವಿದ್ಯಾರ್ಥಿಗಳ ಕಾರ್ಯಾಗಾರ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ವತಿಯಿಂದ ಕಾನೂನು ವಿದ್ಯಾರ್ಥಿಗಳ ಕಾರ್ಯಾಗಾರ

Spread the love

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ವತಿಯಿಂದ ಕಾನೂನು ವಿದ್ಯಾರ್ಥಿಗಳ ಕಾರ್ಯಾಗಾರ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ವತಿಯಿಂದ ರಾಜ್ಯಮಟ್ಟದ ಕಾನೂನು ವಿದ್ಯಾರ್ಥಿಗಳ 2 ದಿನದ ಕಾರ್ಯಾಗಾರವನ್ನು ಬೆಳಗಾವಿಯ ವಿ.ಟಿ.ಯು ಕ್ಯಾಂಪಸಿನಲ್ಲಿ ದಿನಾಂಕ 16, 17 ನವೆಂಬರ್ 2019ರಂದು ನಡೆಯಲಿದೆ.

ಈ ಕಾರ್ಯಾಗಾರದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ
1. ಪ್ರಕರಣಗಳ ಬರವಣಿಗೆ ಕೌಶಲ್ಯ ಮತ್ತು ಪ್ರಸ್ತುತತೆ
2. ಅಣುಕು ನ್ಯಾಯಾಲಯದ ಮಾದರಿಯಲ್ಲಿ ಕ್ಲಾಸ್ ರೂಂ ಟು ಕೋರ್ಟ್ ರೂಂ ಮತ್ತು
3. ಸಂಸ್ಕೃತಿ, ಭಾಷೆ, ಅಭಿವೃದ್ಧಿ, ಆಹಾರ, ಧರ್ಮ ಮತ್ತು ಇತರೆ ವಿಷಯಗಳಲ್ಲಿ ಭಾರತವನ್ನು ವಿಭಜಿಸುತ್ತಿರುವ ಮತ್ತು ಶಕ್ತಿಯನ್ನು ಕಾನೂನು ರೀತಿಯಲ್ಲಿ ಎದುರಿಸುವಲ್ಲಿ ಯುವ ವಕೀಲರ ಪಾತ್ರ
4. ಕಾನೂನು ಯೋಧರು ಎಂಬ ವಿಷಯದ ಅಡಿಯಲ್ಲಿ ಆರ್.ಟಿ.ಐ, ಮಹಿಳೆ ಮತ್ತು ಮಕ್ಕಳ ಕಾನೂನು, ಮಾನವ ಹಕ್ಕುಗಳು, ಪರಿಸರ ಕಾನೂನು ಮತ್ತು ಸೈಬರ್ ಕಾನೂನು ಸೇರಿದಂತೆ ಸಮನಾಂತರ ಗೋಷ್ಟಿಗಳನ್ನು ನಡೆಸಲಾಗುವುದು.

ಕಾರ್ಯಾಗಾರದ ಪೆÇೀಸ್ಪರನ್ನು ನಗರದ ಪ್ರತಿಷ್ಟಿತ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ತಾರಾನಾಥ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಕಾರ್ಯದರ್ಶಿ ಮಣಿಕಂಠ ಕಳಸ, ನಗರ ಸಂಘಟನಾ ಕಾರ್ಯದರ್ಶಿ ವೀರೇಶ್, ಅಜ್ಜಣ್ಣನವರ, ನಗರ ಸಹಕಾರ್ಯದರ್ಶಿ ಶ್ರೇಯಸ್ ಹಾಗೂ ಅಭಿಲಾಷ್, ಚರಣ್ರಾಜ್ ಇತರರು ಇದ್ದರು.


Spread the love

Exit mobile version