Home Mangalorean News Kannada News ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ ಷಿಪ್ ನಡಿಗೆ, ಸ್ಟೀಪಲ್ ಚೇಸ್‍ನಲ್ಲಿ ದಾಖಲೆ

ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ ಷಿಪ್ ನಡಿಗೆ, ಸ್ಟೀಪಲ್ ಚೇಸ್‍ನಲ್ಲಿ ದಾಖಲೆ

Spread the love

ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಷಿಪ್ ನಡಿಗೆ, ಸ್ಟೀಪಲ್ ಚೇಸ್‍ನಲ್ಲಿ ದಾಖಲೆ

ಮೂಡುಬಿದಿರೆ: ಇಲ್ಲಿನ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ನ ಮೂರನೇ ದಿನವಾದ ಶನಿವಾರ ಮಹಿಳೆಯರ ವಿಭಾಗದ 20 ಕಿ.ಮೀ. ನಡಿಗೆ ಹಾಗೂ 3000 ಮೀ. ಸ್ಟೀಪಲ್ ಚೇಸ್‍ನಲ್ಲಿ ನೂತನ ಕೂಟ ದಾಖಲೆಗಳು ನಿರ್ಮಾಣಗೊಂಡವು.

20ಕಿ.ಮೀ. ನಡಿಗೆ:
20 ಸಾವಿರ ಮೀಟರ್ (20ಕಿ.ಮೀ.) ನಡಿಗೆಯಲ್ಲಿ ಉದಯ್‍ಪುರ್‍ನ ಮೋಹನ್‍ಲಾಲ್ ಸುಖಾದಿಯಾ ವಿವಿಯ ಸೋನಾಲ್ ಸುಖ್‍ವಾಲ್ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. 20ಕಿ.ಮೀ ದೂರವನ್ನು 1ಗಂಟೆ 38ನಿಮಿಷ 40.49ಸೆಕೆಂಡ್‍ಗಳಲ್ಲಿ ಕ್ರಮಿಸಿ ಮಹರ್ಷಿ ದಯಾನಂದ ವಿವಿಯ ಎಮ್ ಆರ್ ರವೀನ(1ಗಂಟೆ 43ನಿಮಿಷ 58.64ಸೆಕೆಂಡ್) ಅವರ ಹೆಸರಿನಲ್ಲಿದ್ದ ಹಿಂದಿನ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಬಾರಿಯ ಪ್ರಥಮ ನಾಲ್ಕು ಸ್ಥಾನ ಪಡೆದ ಕ್ರೀಡಾಪಟುಗಳು ಕಳೆದ ಬಾರಿಯ ಕೂಟ ದಾಖಲೆಯನ್ನು ಸರಿಗಟ್ಟಿದ್ದಾರೆ.

ಸ್ಟೀಪಲ್ ಚೇಸ್ ದಾಖಲೆ:
ಮಹಿಳೆಯರ ವಿಭಾಗದ 3000 ಮೀ. ಸ್ಟೀಪಲ್ ಚೇಸ್‍ನಲ್ಲಿ ಪುಣೆಯ ಸಾವಿತ್ರಿ ಬಾಯಿ ಪುಲೆ ವಿವಿಯ ಕೋಮಲ್ ಜಗದಾಲೆ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. 10ನಿ 23.658ಸೆಂಕಡ್‍ಗಳಲ್ಲಿ ಚೇಸ್ ಮಾಡಿ ಮಂಗಳೂರು ವಿವಿಯ ಭಗತ್ ಶೀತಲ್ ಜಾಮಜಿ (10ನಿಮಿಷ 34.53ಸೆಂಕೆಡ್) ಅವರ ಹೆಸರಲ್ಲಿದ್ದ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಮೆಹಬೂಬ್‍ನಗರದ ಪಲಿಮೂರ್ ವಿವಿ ಜಿ ಮಹೇಶ್ವರಿ 10ನಿ 54.961ಸೆಂಕೆಡ್ ಕ್ರಮಿಸಿ ಬೆಳ್ಳಿಯ ಪದಕ ಹಾಗೂ ಮಂಗಳೂರು ವಿವಿಯ ಜ್ಯೋತಿ ಜಗ್‍ಬಹುದ್ಧೂರ್ ಚೌಹಾರ್ 11ನಿ 3.246 ಸೆಂಕೆಡ್ ಕ್ರಮಿಸುವ ಮೂಲಕ ಕಂಚಿನ ಪದಕ ಪಡೆದಿದ್ದಾರೆ.

ದಾಖಲೆ ಮುರಿದರೂ ನಾಲ್ಕನೇ ಸ್ಥಾನ!
ಶನಿವಾರದ ಕ್ರೀಡಾಕೂಟಕ್ಕೆ ನಾಂದಿ ಹಾಡಿದ ಮಹಿಳೆಯರ ವಿಭಾಗದ 20.ಕಿ.ಮೀ ನಡಿಗೆ ವಿಶೇಷತೆಗೆ ಸಾಕ್ಷಿಯಾಯಿತು. ಇದರಲ್ಲಿ ಈ ಹಿಂದೆ ಕೂಟ ದಾಖಲೆ ಹೊಂದಿದ್ದ ಮಹರ್ಷಿ ದಯಾನಂದ ವಿವಿಯ ಎಂ ಆರ್ ರವೀನ(1ಗಂಟೆ 43ನಿಮಿಷ 58.64ಸೆಕೆಂಡ್) ಈ ಬಾರಿ (1ಗಂಟೆ 43ನಿಮಿಷ 27.74ಸೆಕೆಂಡ್) ತಮ್ಮ ದಾಖಲೆಯನ್ನು ಸರಿಗಟ್ಟಿರಾದರೂ ನಾಲ್ಕನೇ ಸ್ಥಾನ ಪಡೆಯುವಂತಾಯಿತು. ಇವರೊಟ್ಟಿಗೆ ಮೊದಲ ಮೂರು ಸ್ಥಾನ ಪಡೆದ ಕ್ರೀಡಾಪಟುಗಳು ಹಿಂದಿನ ಕೂಟ ದಾಖಲೆಯನ್ನು ಮುರಿದ ಕೀರ್ತಿಗೆ ಭಾಜನರಾದರು.

ದ್ವಿತೀಯ ಸ್ಥಾನ ಕಸಿದ ಮದ್ರಾಸ್
ಮೂರನೇ ದಿನದ ಅಂತ್ಯಕ್ಕೆ 86 ಅಂಕಗಳೊಂದಿಗೆ ಮಂಗಳೂರು ವಿವಿ ಕೂಟದಲ್ಲಿ ಅಗ್ರಸ್ಥಾನ ಪಡೆದಿದ್ದು, ಮದ್ರಾಸ್ ವಿವಿಯು 45 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಹರ್ಯಾಣದ ಮಹರ್ಷಿ ದಯಾನಂದ ವಿವಿಯು 29 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ನಿನ್ನೆ ದಿನದ ಅಂತ್ಯಕ್ಕೆ ಮದ್ರಾಸ್ ವಿವಿ ಹಾಗೂ ಹರ್ಯಾಣದ ಮಹರ್ಷಿ ದಯಾನಂದ ವಿವಿಯು 28 ಅಂಕಗಳೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿದ್ದವು.

3ನೇ ದಿನದ ಫಲಿತಾಂಶಗಳ ವಿವರ:
ಮಹಿಳೆಯರ ವಿಭಾಗ
20ಕಿಮೀ. ನಡಿಗೆ ಸ್ಪರ್ಧೆ
ಸೋನಲ್ ಸುಖ್‍ವಾಲ್ – (ಕಾಲ: 1ಗಂಟೆ 38ನಿಮಿ 40.49ಸೆ) – ಮೋಹನ್‍ಲಾಲ್ ಸುಖಾದಿಯಾ ವಿವಿ, ಉದಯ್‍ಪುರ್ – ನೂತನ ಕೂಟ ದಾಖಲೆ- 1
 ಎಮ್ ಆರ್ ರವೀನ- (ಕಾಲ: 1ಗಂಟೆ 43ನಿಮಿಷ 58.64ಸೆ)- ಮಹರ್ಷಿ ದಯಾನಂದ ವಿವಿ
ರಾಖಿ ಕುಷ್ಬಾಲ – (ಕಾಲ: 1ಗಂಟೆ 41ನಿ 09.752ಸೆ)- ಫ್ರೊ. ರಾಜೇಂದ್ರ ಸಿಂಗ್ ವಿವಿ – 2
ಬಂದನ್ ಪಾಟಿಲ್ – (ಕಾಲ: 1ಗಂಟೆ 42ನಿ 57.622ಸೆ) – ಮಂಗಳೂರು ವಿವಿ- 3

3000ಮೀ ಸ್ಟೀಪಲ್ ಚೇಸ್
ಕೋಮಲ್ ಜಗದಾಲೆ – (ಕಾಲ: 10ನಿ 23.658ಸೆ.)- ಸಾವಿತ್ರಿ ಬಾಯಿ ಫುಲೆ ವಿವಿ- 1 ನೂತನ ಕೂಟ ದಾಖಲೆ
 ಭಗತ್ ಶೀತಲ್ ಜಾಮಜಿ – ಕಾಲ: 10ನಿ 34.53ಸೆ- ಮಂಗಳೂರು ವಿವಿ 2018- ಹಳೆಯ ಕೂಟ ದಾಖಲೆ
ಜಿ ಮಹೇಶ್ವರಿ- (ಕಾಲ: 10ನಿ 54.961ಸೆ) ಪಲಮೂರ್ ವಿವಿ, ಮೆಹಬೂಬ್‍ನಗರ್ -2
ಜ್ಯೋತಿ ಜಗ್‍ಬಹುದ್ಧೂರ್ ಚೌಹಾರ್ – (ಕಾಲ: 11ನಿ 3.246ಸೆ)- ಮಂಗಳೂರು ವಿವಿ – 3
400ಮೀ ಓಟ
ಪಿ ಒ ಸಯನ – (ಕಾಲ: 54.574ಸೆ)- ಕೇರಳ ವಿವಿ-1
ಜ್ಯೋತಿಕಶ್ರೀ ಬಿ – (ಕಾಲ: 54.703) – ಕೃಷ್ಣ ವಿವಿ, ಮಚ್ಲಿಪಟ್ನಂ -2
ಗುಗ್ ಕೌರ್ – (ಕಾಲ: 55.517ಸೆ) – ಪಂಚಾಬ್ ವಿವಿ, ಚಂಢೀಗಡ್ – 3
ಎತ್ತರ ಜಿಗಿತ
ಗ್ರೆಸಿನ – (1.77ಮೀ) ಎಂಎಸ್ ವಿವಿ, ತಿರುನೇಲ್ವೆಲ್ಲಿ – 1
ಜಿಷ್ಣ ಎಂ- (1.77ಮೀ)- ಕ್ಯಾಲಿಕಟ್ ವಿವಿ – 2
ಗಾಯತ್ರಿ ಶಿವಕುಮಾರ್- (1.73ಮೀ) ಮಹಾತ್ಮಗಾಂಧಿ ವಿವಿ ಕಟ್ಟಾಯಂ – 3
400ಮೀ. ರಿಲೇ
ಮದ್ರಾಸ್ ವಿವಿ(47.21ಸೆಕೆಂಡ್)-1
ಮಹಾತ್ಮಗಾಂಧಿ ವಿವಿ, ಕೊಟ್ಟಾಯಂ(47.31 ಸೆಕೆಂಡ್ಸ್) – 2
ಕೇರಳ ವಿವಿ(47.72 ಸೆಕೆಂಡ್)-3

ಪುರುಷರ ವಿಭಾಗ

400ಮೀ ಓಟ
ರಾಜೇಶ್ ಆರ್ (ಕಾಲ: 46.938ಸೆ) ಮದ್ರಾಸ್ ವಿವಿ -1
ಜಶನ್‍ಪ್ರೀತ್ ಸಿಂಗ್ -(ಕಾಲ: 47.856)- ಲವ್ಲಿ ಫ್ರೊಫೆಶನಲ್ ವಿವಿ-2
ಪರಮ್‍ವೀರ್ ಸಿಂಗ್ -(ಕಾಲ: 47.906)- )-ಲವ್ಲಿ ಫ್ರೊಫೆಶನಲ್ ವಿವಿ-3

ಚಕ್ರ ಎಸೆತ
ಭಾನು ಶರ್ಮ- (51.48ಮೀ)- ರಾಜಸ್ಥಾನ್ ವಿವಿ – 1
ಅಂಕಿತ್ ದಹಿಯ – (50.98ಮೀ)- ಡಿಎವಿ ವಿವಿ ಜಲಂಧರ್ -2
ಪ್ರವೀಣ್ ಕುಮಾರ್ ಮೆಹೆರ –(50.75ಮೀ) ಮಹಾರಾಜ ಗಂಗಾಸಿಂಗ್ ವಿವಿ, ಬಿಕ್ನೇರ್ -3
ಉದ್ದ ಜಿಗಿತ
ಸ್ವಾಮಿನಾಥನ್ ಆರ್- (7.78ಮೀ) ಮದ್ರಾಸ್ ವಿವಿ- 1
ಪಿ ಎಸ್ ವಿಷ್ಣು – (7.47ಮೀ)- ಮಂಗಳೂರು ವಿವಿ- 2
ಅಖಿಲ್ ಟಿ ವಿ – (7.46ಮೀ)- ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ – 3
1500ಮೀ. ಡೆಕತ್ಲಾನ್
ಸಲ್ಮಾನ್ ಹ್ಯಾರಿಸ್ ಕೆ ಪಿ – (6645ಪಾಯಿಂಟ್ಸ್)- ಕ್ಯಾಲಿಕಟ್ ವಿವಿ -1
ಉಮೇಶ್ ಲಂಬ – (6498)- ರಾಜಸ್ಥಾನ್ ವಿವಿ – 2
ವಿ ನವೀನ್ ಕುಮಾರ್ –(6483)- ಪೆರಿಯಾರ್ ವಿವಿ, ಸೇಲಂ – 3


Spread the love

Exit mobile version