ಅಗೋಸ್ತ್ 11ರಂದು ತುಳು ಸಿನಿಮಾ ಅರೆಮರ್ಲೆರ್ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ
ಮಂಗಳೂರು: ಬೊಳ್ಳಿ ಮುವೀಸ್ ಲಾಂಛನದಲ್ಲಿ ತಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿಕಾಪಿಕಾಡ್, ಮುಖೇಶ್ ಹೆಗ್ಡೆ, ದಿನೇಶ್ ಶೆಟ್ಟಿ ನಿರ್ಮಿಸಿರುವ ಅರೆಮರ್ಲೆರ್ ತುಳು ಸಿನಿಮಾ ಅಗೋಸ್ತ್ 11ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಪ್ರದರ್ಶನಗೊಳ್ಳಲಿದೆ.
ಮಂಗಳೂರಿನ ಪ್ರಭಾತ್, ಸಿನಿಪೊಲಿಸ್, ಬಿಗ್ ಸನೆಮಾಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಅರುಣಾ, ಸುರತ್ಕಲ್‍ನಲ್ಲಿ ನಟರಾಜ್, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್ ಹಾಗೂ ಮಣಿಪಾಲದಲ್ಲಿ ಐನಾಕ್ಸ್ ಚಿತ್ರಮಂದಿರ ದಲ್ಲಿ `ಅರೆಮರ್ಲೆರ್’ ತೆರೆಕಾಣಲಿದೆ. ಅವಳಿ ಜಿಲ್ಲೆ ಯಲ್ಲಿ ಒಟ್ಟು 13 ಟಾಕೀಸ್‍ಗಳಲ್ಲಿ `ಅರೆಮರ್ಲೆರ್’ ಬಿಡುಗಡೆಗೊಳ್ಳಲಿದ್ದು, ಸಿನಿಮಾ ಸಂಪೂರ್ಣ ಹಾಸ್ಯ ಮನರಂಜನೆಯಿಂದ ಕೂಡಿದೆ.
ಬೊಳ್ಳಿ ಮೂವೀಸ್ ಲಾಂಛನದಲ್ಲಿ ಈ ಹಿಂದೆ ತೆಲಿಕೆದ ಬೊಳ್ಳಿ, ಚಂಡಿಕೋರಿ, ಬರ್ಸ, ಸಿನಿಮಾ ತಯಾರಾ ಗಿದ್ದು, ಇದೀಗ ಅದೇ ಬ್ಯಾನರ್ ನಲ್ಲಿ ಮೂಡಿ ಬರು ತ್ತಿರುವ `ಅರೆ ಮರ್ಲೆರ್’ ಸಿನಿಮಾದ ಬಗ್ಗೆ ಪ್ರೇಕ್ಷಕರು ಬಹಳಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿ ದ್ದಾರೆ. ಮುಖ್ಯವಾಗಿ ಈಗಾಗಲೇ ಬಿಡುಗಡೆಗೊಂಡಿರುವ ಅರೆಮರ್ಲೆರ್ ಸಿನಿಮಾದ ಪೋಸ್ಟರ್‍ಗಳು ಜನರನ್ನು ಆಕರ್ಷಿಸಿದೆ.
ಅರೆಮರ್ಲೆರ್ ಚಿತ್ರದಲ್ಲಿ ತುಳುನಾಡ ಚಕ್ರವರ್ತಿ ಆ್ಯಕ್ಷನ್ ಕಿಂಗ್ ಅರ್ಜುನ್ ಕಾಪಿ ಕಾಡ್ ಈ ಬಾರಿ ಡಿಫರೆಂಟ್ ಪಾತ್ರದ ಮೂಲಕ ಗಮನ ಸೆಳೆಯಲಿದ್ದಾರೆ. ಅವರಿಗೆ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜ ರಾಜ ವಾಮಂಜೂರು ಸಾಥ್ ನೀಡಿದ್ದಾರೆ.
ಶರ್ಮಿಳಾ ಡಿ. ಕಾಪಿಕಾಡ್, ಮುಖೇಶ್ ಹೆಗ್ಡೆ, ದಿನೇಶ್ ಶೆಟ್ಟಿ ಚಿತ್ರದ ನಿರ್ಮಾಪಕರಾಗಿದ್ದು, ಕ್ಯಾಮರಾಮ್ಯಾನ್ ಆಗಿ ಉದಯ ಬಲ್ಲಾಳ್, ಸುಜೀತ್ ನಾಯಕ್ ಸಂಕಲನಕಾರರಾಗಿ, ಮಣ Âಕಾಂತ್ ಕದ್ರಿ ಹಿನ್ನೆಲೆ ಸಂಗೀತದಲ್ಲಿ ದುಡಿದಿದ್ದಾರೆ. ಅದೇ ರೀತಿ ಸಚಿನ್ ಎ.ಎಸ್. ಉಪ್ಪಿನಂಗಡಿ ಕಾರ್ಯಕಾರಿ ನಿರ್ಮಾಣ, ರಾಜೇಶ್ ಕುಡ್ಲ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ದೇಶ Àನದ ಜವಾಬ್ದಾರಿಯನ್ನು ದೇವದಾಸ್ ಕಾಪಿಕಾಡ್ ವಹಿಸಿದ್ದಾರೆ. ಅರೆಮರ್ಲೆರ್ ಅಗೋಸ್ತ್ 11ರಂದು ತೆರೆ ಕಾಣಲಿದೆ. ಸಿನಿಮಾದಲ್ಲಿ ಲಕ್ಷ್ಮಣ ಕುಮಾರ್ ಮಲ್ಲೂರು, ಸರೋಜಿಣಿ ಶೆಟ್ಟಿ, ಗೋಪಿನಾಥ್ ಭಟ್, ಅರ್ಜುನ್ ಕಜೆ, ಚೇತನ್ ರೈ, ಸಾಯಿಕೃಷ್ಣ ಹರೀಶ್ ವಾಸುಶೆಟ್ಟಿ ಮುಂಬಯಿ, ಗಿರೀಶ್ ಶೆಟ್ಟಿ ಕಟೀಲು, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಸುನೀಲ್ ನೆಲ್ಲಿಗುಡ್ಡೆ, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಸತೀಶ್ ಬಂದಲೆ, ಪಾಂಡುರಂಗ ಅಡ್ಯಾರ್, ಚಿದಾನಂದ ದುಬಾಯಿ ಅಭಿಯಿಸಿದ್ದಾರೆ. ಅರ್ಜುನ್ ಕಾಪಿಕಾಡ್ ಮತ್ತು ಪ್ರಶಾಂತ್ ಕಲ್ಲಡ್ಕ ಸಹ ನಿರ್ದೇಶಕರಾಗಿ ದುಡಿದಿದ್ದಾರೆ.