ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕೋರೋನಾ ಕಂಟಕ; 2 ವೈದ್ಯರು ಹಾಗೂ ಇತರ ಸಿಬಂದಿಗಳಿಗೆ ಪಾಸಿಟಿವ್

Spread the love

ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕೋರೋನಾ ಕಂಟಕ; 2 ವೈದ್ಯರು ಹಾಗೂ ಇತರ ಸಿಬಂದಿಗಳಿಗೆ ಪಾಸಿಟಿವ್

ಉಡುಪಿ : ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋರನಾ ವಾರಿಯರ್ಸ್ ಗಳಾಗಿ ಹಗಲಿರುಳು ದುಡಿಯುತ್ತಿರುವ ವೈದ್ಯರಿಗೆ ಹಾಗೂ ಸಿಬಂದಿಗಳಿಗೆ ಕೊರೋನಾ ಕಂಟಕ ಎದುರಾಗಿದೆ.

ಉಡುಪಿ ಅಜ್ಜರಕಾಡುವಿನಲ್ಲಿ ಇರುವ ಜಿಲ್ಪಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎರಡು ಮಂದಿ ವೈದ್ಯರು ಇತರ ಸಿಬಂದಿಗಳಿಗೆ ಪಾಸಿಟಿವ್ ಹಾಗೂ ಒರ್ವ ಅಡುಗೆ ಸಿಬಂದಿಗೆ ಕೋವಿಡ್-19 ಪಾಸಿಟಿವ್ ದೃಢವಾಗಿದೆ.

ಕೆಲವು ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಮತ್ತೆ ಕೆಲವು ಸೋಂಕಿತರಿಗೆ ಹೋಮ್ ಐಸೋಲೇಷನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ವೈದ್ಯರು ಮತ್ತು ಸಿಬಂದಿಗಳಿಗೆ ಕೋವಿಡ್ ಪಾಸಿಟವ್ ದೃಢಗೊಂಡಿರುವ ಹಿನ್ನಲೆಯಲ್ಲಿ ಆಸ್ಪತ್ರೆ ಯನ್ನು ಸ್ಯಾನಿಟೈಸ್ ಮಾಡುವ ಕುರಿತು ಮಹತ್ವದ ಸಭೆ ನಡೆಸಲಾಗಿದೆ.


Spread the love