Home Mangalorean News Kannada News ಅಡ್ಡಪರಿಣಾಮ ಆರೋಪ: ಕೋವಿಶೀಲ್ಡ್​ ಲಸಿಕೆಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾದ ಅಸ್ಟ್ರಾಜೆನೆಕಾ!

ಅಡ್ಡಪರಿಣಾಮ ಆರೋಪ: ಕೋವಿಶೀಲ್ಡ್​ ಲಸಿಕೆಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾದ ಅಸ್ಟ್ರಾಜೆನೆಕಾ!

Spread the love

ಅಡ್ಡಪರಿಣಾಮ ಆರೋಪ: ಕೋವಿಶೀಲ್ಡ್​ ಲಸಿಕೆಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾದ ಅಸ್ಟ್ರಾಜೆನೆಕಾ!

ಕೋವಿಶೀಲ್ಡ್​ ಲಸಿಕೆ ತಯಾರಕಾ ಕಂಪನಿ ಅಸ್ಟ್ರಾಜೆನೆಕಾ ಇದೀಗ ಪ್ರಪಂಚದಾದ್ಯಂತ ಔಷಧ ಮಾರುಕಟ್ಟೆಗಳಿಂದ ಲಸಿಕೆಯನ್ನು ಹಿಂಪಡೆಯುವ ನಿರ್ಧಾರ ಮಾಡಿದೆ. ಕೋವಿಶೀಲ್ಡ್ಲ ಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದಾದ ಬಳಿಕ ಕಂಪನಿಯು ಈ ನಿರ್ಧಾರ ಮಾಡಿದೆ ಎಂದು ರಾಯ್ಟರ್ಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಾಂಕ್ರಾಮಿಕ ರೋಗಗಳ ಬಳಿಕ ಬೇಡಿಕೆಯು ಕಡಿಮೆಯಾಗಿದೆ. ಇದಲ್ಲದೆ ಉತ್ಪಾದನೆ ಹಾಗೂ ಪೂರೈಕೆಯನ್ನು ಕೂಡ ನಿಲ್ಲಿಸಲಾಗಿದೆ.

ಅಸ್ಟ್ರಾಜೆನೆಕಾ ಸ್ವೀಡಿಶ್ ಬಹುರಾಷ್ಟ್ರೀಯ ಔಷಧೀಯ ಮತ್ತು ಜೈವಿಕ ತಂತ್ರಜ್ಞಾನ ಕಂಪನಿಯಾಗಿದ್ದು, ಕೇಂಬ್ರಿಡ್ಜ್​ ಬಯೋಮೆಡಿಕಲ್ ಕ್ಯಾಂಪಸ್​ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಕಂಪನಿಯು ತನ್ನ ಕೋವಿಡ್ ಲಸಿಕೆಗಳನ್ನು ಪ್ರಪಂಚದಾದ್ಯಂತದ ಮಾರುಕಟ್ಟೆಗಳಿಂದ ಹಿಂಪಡೆಯುತ್ತಿದೆ. ಹೆಚ್ಚುವರಿಯಾಗಿ ಇದು ಯುರೋಪ್​ನಲ್ಲಿ ಮಾರ್ಕೆಟಿಂಗ್ ಅನುಮೋದನೆಯನ್ನು ಹಿಂಪಡೆಯಲು ಯೋಜಿಸಿದೆ.

TTS ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಮತ್ತು ಮಾನವರಲ್ಲಿ ಕಡಿಮೆ ರಕ್ತದ ಪ್ಲೇಟ್‌ಲೆಟ್ ಕಾರಣವಾಗುತ್ತದೆ ಮತ್ತು UK ನಲ್ಲಿ 81 ಕ್ಕೂ ಹೆಚ್ಚು ಸಾವುಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಆದರೆ ಕೋವಿಶೀಲ್ಡ್ ಅನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು ಅಸ್ಟ್ರಾಜೆನೆಕಾ ಹೇಳಿದೆ.

ಬ್ರಿಟಿಷ್ ಹೈಕೋರ್ಟ್​ನಲ್ಲಿ ಸಲ್ಲಿಸಿದ ದಾಖಲೆಗಳ ಪ್ರಕಾರ, ಕಂಪನಿಯು ತನ್ನ ಕೊರೊನಾ ಲಸಿಕೆ ಥ್ರಂಬೋಸಿಸ್, ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್​ಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿತ್ತು, ಇದು ತೀವ್ರತರವಾದ ಪ್ರಕರಣಗಳಲ್ಲಿ ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಹೇಳಿತ್ತು.


Spread the love

Exit mobile version