Home Mangalorean News Kannada News ಅಡ್ಯಾರು ಕಟ್ಟೆ ಯುವಕನ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಸೆರೆ

ಅಡ್ಯಾರು ಕಟ್ಟೆ ಯುವಕನ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಸೆರೆ

Spread the love

ಅಡ್ಯಾರು ಕಟ್ಟೆ ಯುವಕನ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಸೆರೆ

ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರುಪದವಿನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಫರಂಗಿಪೇಟೆ ನಿವಾಸಿ ನಿತಿನ್ ಪೂಜಾರಿ (21), ಪ್ರಾಣೇಶ್ ಪೂಜಾರಿ ಅಡ್ಯಾರ್ (21), ಕಿಶನ್ ಪೂಜಾರಿ (21) ಎಂದು ಗುರುತಿಸಲಾಗಿದೆ.

ಜುಲೈ 7 ರಂದು ನೌಶದ್ ಎಂಬಾತನು ತನ್ನ KA-19 Y-8437 ನೇ ಬೈಕ್ ನಲ್ಲಿ ಆತನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕೇರಳದ ಮಲಪುರಂ ನಿವಾಸಿ ಮಹಮ್ಮದ್ ಸಜೀದ್ ಎಂಬವನೊಂದಿಗೆ ಅಡ್ಯಾರ್ ನಲ್ಲಿ ಚಹಾ ಕುಡಿದು ವಾಪಸ್ಸು ಅಡ್ಯಾರ್ ನಿಂದ ಬಿತ್ತು ಪಾದೆಯ ತನ್ನ ಮನಗೆ ಹೋಗುತ್ತಿರುವಾಗ ಸಂಜೆ 4-15 ಗಂಟೆಗೆ ಅಡ್ಯಾರ್ ಪದವಿನಿಂದ ಸ್ವಲ್ಪ ಹಿಂದೆ ರಸ್ತೆ ಬದಿಯಲ್ಲಿ 3 ಮಂದಿ ಯುವಕರು ಇವರನ್ನು ನಿಲ್ಲಿಸಿ ಆ ಯುವಕರು ಬಂದಿದ್ದ ಸ್ಕೂಟರ್ ಸ್ಟಾರ್ಟ್ ಆಗುವುದಿಲ್ಲ ಎಂದು ಹೇಳಿ ಇವರ ಬಳಿಗೆ ಬಂದು ಅವರ ಪೈಕಿ ಒಬ್ಬಾತನು ನೌಫಲ್ ಗೆ ಹೊಡೆಯಲು ಪ್ರಯತ್ನಿಸಿದಾಗ ಆತನು ತಪ್ಪಿಸಿಕೊಂಡಾಗ ಜೊತೆಯಲ್ಲಿದ್ದ ಸಾಜಿದ್ ಎಂಬಾತನ ಕೈಗೆ ಹಾಗೂ ಬೆನ್ನಿಗೆ ತೀವ್ರ ತರಹದ ಗಾಯವುಂಟು ಮಾಡಿ ಕೊಲೆಗೆ ಪ್ರಯತ್ನಿಸಿ ನಂತರ ಅಲ್ಲಿಂದ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದುರು. ಗಾಯಗೊಂಡ ಸಾಜಿದ್ ನನ್ನು ಮಂಗಳೂರು ನಗರದ ಹೈಲ್ಯಾಂಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡು ಹೋಗಿದ್ದು, ಈಗ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾನೆ.

ಆರೋಪಿಗಳ ಪೈಕಿ ನಿತಿನ್ ಪೂಜಾರಿ ಮತ್ತು ಪ್ರಾಣೇಶ್ ಪೂಜಾರಿ ವಿರುದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ಆರೋಪಿತರಾಗಿದ್ದು, ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಹನುಮಂತರಾಯ ಮತ್ತು ಎಸಿಪಿ ಸಿಸಿಆರ್ ಬಿ ವೆಲೆಂಟೈನ್ ಡಿ ಸೋಜಾ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love

Exit mobile version