Home Mangalorean News Kannada News ಅಣಬೆ ಬೇಸಾಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ

ಅಣಬೆ ಬೇಸಾಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ

Spread the love

ಅಣಬೆ ಬೇಸಾಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಸಂಸ್ಥೆ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರವು ಭಾರತೀಯ ಕೃಷಿ ಸಂಶೋಧನಾ ಪರಿಷತ್‍ನ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಾಬಂದಿರುತ್ತದೆ. ಆಸಕ್ತ ರೈತ, ರೈತಮಹಿಳೆ, ನಿರುದ್ಯೋಗ ಯುವಕ-ಯುವತಿಯರ ಬೇಡಿಕೆಯಮೇರೆಗೆ ಬೆಳ್ತಂಗಡಿ ತಾಲ್ಲೂಕಿನ ಕಲ್ಲೇರಿ ಗ್ರಾಮದ ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ, ಉರುವಾಲು ಗ್ರಾಮೋತ್ಥಾನ ಸೇವಾ ಸಂಸ್ಥೆ ಹಾಗೂ ತಣ್ಣೀರುಪಂತದ ಗ್ರಾಮ ಪಂಚಾಯತ್‍ಗಳ ಸಹಭಾಗಿತ್ವದಲ್ಲಿ ಡಿಸೆಂಬರ್ 19 ರಂದು ಅಣಬೆ ಬೇಸಾಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು, ಅಣಬೆಯ ಪೌಷ್ಟಿಕತೆಯ ಬಗ್ಗೆ ಮಾಹಿತಿ ನೀಡಿ, ದೀರ್ಘಾವಧಿಯ ಜೀವನಶೈಲಿ-ಸಂಭಂಧಿತ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ಅಣಬೆ ಸೇವನೆ ಅಗತ್ಯವಾದುದೆಂದು ಹೇಳಿದರು. ಬೇರೆ ಅಹಾರ ಪದಾರ್ಥಗಳನ್ನು ಹೋಲಿಸಿದರೆ, ಅಣಬೆ ಸೇವನೆಯಿಂದ ಬೊಜ್ಜು ಕರಗಿಸಲು, ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ಹೃದಯ ಸಂಭಂದಿತ ಕಾಯಿಲೆ ಇರುವವರು ಅವುಗಳ ಪ್ರಮಾಣ ಮೊಟಕುಗಳಿಸಿ ಆರೋಗ್ಯಕರ ಮೈಬಣ್ಣ ಮತ್ತು ಕೂದಲಿನ ದಟ್ಟಪುಷ್ಟ ಕಾಪಾಡುವುದಲ್ಲದೇ ದೇಹದ ತೂಕವನ್ನು ಕಡಿಮೆ ಮಾಡಲು ಸಹಕರಿಸುತ್ತದೆಂದು ತಿಳಿಸಿದರು.

ಆಣಬೆಯಲ್ಲಿ ನಾರಿನ ಅಂಶ, ಪೆÇಟ್ಯಾಷಿಯಂ ಮತ್ತು ವಿಟಮಿನ್-ಸಿ ಗಳ ಪ್ರಮಾಣ ಹೆಚ್ಚಾಗಿದ್ದು ಆರೋಗ್ಯ ದೃಷ್ಟಿಯಿಂದ ನೋಡಿದರೆ ಅಣಬೆ ಸೇವನೆಯಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗುವುದಲ್ಲದೇ ಹೃದಯರಕ್ತನಾಳದ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಅಣಬೆಯಲ್ಲಿ ಕ್ಯಾಲೋರಿಯ ಪ್ರಮಾಣ ಕಡಿಮೆಯಿದ್ದು ಪ್ರಮುಖ ಜೀವಸತ್ವಗಳಿದ್ದು ಖನಿಜಾಂಷದ ಲಭ್ಯತೆ ಹೆಚ್ಚಾಗಿದೆಯೆಂದು ತಿಳಿಸಿದರು. ಅಲ್ಲದೇ, ಸರ್ಕರಪಿಷ್ಟಗಳ ಪ್ರಮಾಣವೂ ಕೂಡ ಯೆಥೇಚ್ಚವಾಗಿರುವುದರಿಂದ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಪ್ರಾಭಲ್ಯಹೊಂದಿದ್ದು ಔಷದಿಗಳ ಗುಣ ಹೆಚ್ಚಾಗಿರುತ್ತದೆಂದು ಹೇಳಿದರು.

ಈ ಸಂದರ್ಭದಲ್ಲಿ, ಸಮಗ್ರ ಕೃಷಿ ಪದ್ದತಿಗಳಿಂದ ರೈತರಿಗೆ ದೊರಕುವ ಉಪಯೋಗಗಳು ಮತ್ತು ಅದಕ್ಕೆ ಸಂಭಂದಿತ ವಿಷಯಗಳಲ್ಲಿ ಆಸಕ್ತರಿರುವರಿಗೆ ಕೃಷಿ ವಿಜ್ಞಾನ ಕೇಂದ್ರದಿಂದ ಕೊಡಬಹುದಾದ ತಾಂತ್ರಿಕ ಮಾಹಿತಿಗಳ ಬಗ್ಗೆ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಣ್ಣೀರುಪಂತದ ಗ್ರಾಮ ಪಂಚಾಯತ್‍ನ ಅಧ್ಯಕ್ಷ ಜಯವಿಕ್ರಮ್ ರವರು, ಈ ತರಬೇತಿಯು ಸ್ಥಳಿಯ ರೈತರಿಗೆ ಉಪಯೋಗವಾಗಲಿದ್ದು ಕಡಿಮೆ ಜಾಗವಿರುವ ಮನೆಗಳಲ್ಲೂ ಸಹ ಅಣಬೆ ಬೆಳೆಸಬಹುದಾಗಿದೆಯೆಂದು ಹೇಳಿದರು. ಈ ತರಬೇತಿಯಿಂದ ಆಸಕ್ತರು ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಕೃಷಿ ಪ್ರಾರಂಭಿಸಿದರೆ ಸ್ವ ಉದ್ಯೋಗ ಮಾಡಿ ಪ್ರಗತಿಯಾಗಬಹುದೆಂದು ಅಭಿಪ್ರಾಯಪಟ್ಟರು.

ಗ್ರಾಮೋತ್ಪಾನ ಇಂಡಿಯ ಫೌಂಡೇಶನ್‍ನ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್‍ರವರು ಮಾತನಾಡಿ, ವಿಜ್ಞಾನಿಗಳ ಸಹಾಯದಿಂದ ಸಣ್ಣಪ್ರಮಾಣದಲ್ಲಿ ಅಣಬೆ ಕೃಷಿಯನ್ನು ಪ್ರಾರಂಭಿಸಿದರೆ ಜೀವನೋಪಾಯಕ್ಕೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಲ್ಲೇರಿಯ ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತದ ಅಧ್ಯಕ್ಷ ದುಗ್ಗಪ್ಪ ಗೌಡರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು ಈ ಗ್ರಾಮದಲ್ಲಿ ತರಬೇತಿ ನಡೆಸಲು ಪೆÇ್ರೀತ್ಸಾಹ ನೀಡಿ ಕಾರ್ಯಗತವಾಗಿಸಲು ಸಹಕರಿಸಿದುದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ರೈತರು ಈ ಕಾರ್ಯಕ್ರಮದ ಪ್ರಯೋಜನ ಪಡೆದು ಪ್ರಗತಿಸಾಧಿಸಿದರೆ ಅದಕ್ಕಿಂತ ಉನ್ನತಮಟ್ಟದ ಸಾಧನೆ ಬೇರೊಂದಿಲ್ಲ ಮತ್ತು ಸುತ್ತಮುತ್ತಲಿನ ಆಸಕ್ತ ಯುವಕರಿಗೆ ಇದರ ಪ್ರಯೋಜನೆ ಸಹಕಾರಿಯಾಗಲಿದೆಯೆಂದು ಹೇಳಿದರು.

ಕಾಸರಗೋಡಿನ ಕೃಷಿ ವಿಜ್ಞಾನ ಕೇಂದ್ರದವತಿಯಿಂದ ಪಾಂಡುರಂಗ ಕೆ. ರವರು ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿಯಲ್ಲಿ ಪ್ರ್ರಾತ್ಯಕ್ಷಿಕೆಯ ಮೂಲಕ ತರಬೇತುದಾರರಿಗೆ ಅಣಬೆ ಬೇಸಾಯದ ವಿಧಾನವನ್ನು ತಿಳಿಸಿಕೊಟ್ಟರು. ಅಣಬೆಯಲ್ಲಿರುವ ವಿವಿಧ ತಳಿಗಳ ಪರಿಚಯ ಮಾಡಿ, ಅವುಗಳ ಕೃಷಿಯ ಪದ್ದತಿಗಳನ್ನು ಕೂಲಂಕುಶವಾಗಿ ಚರ್ಚೆಯ ಮೂಲಕ ಮಾಹಿತಿ ನೀಡಿದರು.

ಅರುಣಾಚಲ ಪ್ರದೇಶ ಲೋವರ್ ದಿಬಾಂಗ್ ವ್ಯಾಲಿ ಜಿಲ್ಲೆ ರೋಯಿಂಗನ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಟಿ.ಜೆ. ರಮೇಶ ರವರು ಈ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಅಣಬೆ ಬೇಸಾಯದಿಂದ ಸಿಗಬಹುದಾದ ಪ್ರಯೋಜನಗಳನ್ನು ಪ್ರಸ್ಥಾಪಿಸಿದರು. ಅಲ್ಲದೇ, ಕೃಷಿಗೆ ಪೂರಕವಾಗಿ ಇತರೆ ಬೆಳೆಗಳ ಬಗ್ಗೆ ಮಾಹಿತಿಗಳನ್ನು ತಿಳಿಯಪಡಿಸಿದರು.

ಒಟ್ಟು 60 ಜನ ರೈತರು, ರೈತ ಮಹಿಳೆಯರು, ನಿರುದ್ಯೋಗಿ ಯುವಕ-ಯುವತಿಯರು ಈ ಕಾರ್ಯಾಗಾರದ ಪ್ರಯೋಜನ ಪಡೆದರು.

ಉರುವಾಲು ಗ್ರಾಮದ ಗ್ರಾಮೋಥ್ಥಾನ ಸೇವಾ ಸಂಸ್ಥೆಯ ಸಂಚಾಲಕ ದುರ್ಗಾಪ್ರಸಾದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಕೇಶವ ಉಪಸ್ಥಿತರಿದ್ದರು.


Spread the love

Exit mobile version