ಅಣ್ಣ-ತಂಗಿಯರನ್ನು ಸಹೋದರತೆಯ ಸೂತ್ರದಲ್ಲಿ ಬೆಸೆದರಾಖಿಹಬ್ಬ

Spread the love

ಜೈನ ಮುನಿಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜರ ನೇತೃತ್ವದಲ್ಲಿ ವಿಶ್ವದಾಖಲೆಗೆ ಅಂತರ್ಮನ ‘ರಕ್ಷಾಬಂಧನ’

ಅಣ್ಣ-ತಂಗಿಯರನ್ನು ಸಹೋದರತೆಯ ಸೂತ್ರದಲ್ಲಿ ಬೆಸೆದರಾಖಿಹಬ್ಬ ವಿಶ್ವಕ್ಕೆ ಸ್ನೇಹದ ಸಂದೇಶ ಸಾರಿದ ನ್ಯಾಷನಲ್‍ಕಾಲೇಜು ಮೈದಾನ

ಬೆಂಗಳೂರು: ಅಲ್ಲಿಅಸೂಯೆ ಬದಲು ಸ್ನೇಹ ಮನೆಮಾಡಿತ್ತು. ಅಹಂ ಬದಲು ವಿನಮ್ರತೆ ಮೇಳೈಸಿತ್ತು.ದ್ವೇಷಿಸುವ ಬದಲು ಪ್ರೀತಿಸುವ ಸಾವಿರಾರು ಹೃದಯಗಳು ಒಂದೆಡೆ ಸೇರಿದ್ದವು. ಹೀಗೆ ಸಾವಿರಾರುಮನಸ್ಸುಗಳನ್ನು ಒಂದೆಡೆಸೇರಿದ್ದು, ಒಂದಾಗಿಸಿದ್ದು ಸ್ನೇಹದಸೂತ್ರವಾಗಿರುವ, ಸಹೋದರತೆಯ ಶ್ರೋತವಾಗಿರುವರಾಖಿಹಬ್ಬ

ಹೌದು, ಶ್ರಾವಣಹುಣ್ಣಿಮೆಯ ಪವಿತ್ರ ದಿನವಾದಗುರುವಾರ ಬಸವನಗುಡಿಯ ನ್ಯಾಷನಲ್‍ಕಾಲೇಜು ಮೈದಾನಅಭೂತಪೂರ್ವ ಸ್ನೇಹಪರ್ವಕ್ಕೆ, ಅಣ್ಣ-ತಂಗಿಯರ ಸಹೋದರತೆಗೆ ಸಾಕ್ಷಿಯಾಯಿತು. ಪರಮಪೂಜ್ಯ ದಿಗಂಬರ ಸಂತಶ್ರೇಷ್ಠ ಅಂತರ್‍ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜರ ನೇತೃತ್ವದಲ್ಲಿರಾಖಿ ಹಬ್ಬ ವಿಶ್ವದಾಖಲೆ ಸೇರಿತು.

rakshabandhan rakshabandhan1 rakshabandhan2 rakshabandhan3

ಮುನಿಶ್ರೀ 108 ಪಿಯೂಷ ಸಾಗರಜೀ ಮಹಾರಾಜ್‍ಅವರ ಮಾರ್ಗದರ್ಶನಲ್ಲಿಒಡಹುಟ್ಟಿದ ನೂರಾರುಅಣ್ಣ-ತಂಗಿಯರು ಪರಸ್ಪರರಾಖಿಕಟ್ಟುವ ಮೂಲಕ ಸಹೋದರತೆಯ ಸಂದೇಶ ಸಾರಿದರು.

ಅಣ್ಣ-ತಂಗಿಯರ ಸಹೋದರತೆ ಸಾರುವರಾಖಿಹಬ್ಬದ ಪ್ರಯುಕ್ತತ್ಯಾಗಿ ಸೇವಾ ಸಮಿತಿಟ್ರಸ್ಟ್ ಈ ವಿಶೇಷ ರಾಖಿ ಹಬ್ಬವನ್ನು ಆಯೋಜಿಸಿತ್ತು. ಈ ಅಭೂತಪೂರ್ವಕಾರ್ಯಕ್ರಮವನ್ನು ವಿಶ್ವದಾಖಲೆಗೆ ಸೇರಿಸಲೆಂದೇ ಅಧಿಕಾರಿಗಳ ತಂಡ ಬೆಂಗಳೂರಿಗೆ ಆಗಮಿಸಿತ್ತು. ರಕ್ಷಾಬಂಧನದ ಮೊದಲ ಸುತ್ತಿನಲ್ಲಿ 500ಕ್ಕೂ ಹೆಚ್ಚು ಯುವತಿಯರು ಏಕಕಾಲಕ್ಕೆ ತಮ್ಮಒಡಹುಟ್ಟಿದಅಣ್ಣಂದಿರಿಗೆರಾಖಿಕಟ್ಟಿದಾಖಲೆ ಬರೆದರೆ, 2ನೇ ಸುತ್ತಿನಲ್ಲಿ 500ಕ್ಕೂ ಹೆಚ್ಚು ಅಣ್ಣಂದಿರುತಮ್ಮಒಡಹುಟ್ಟಿದ ಪ್ರೀತಿಯತಂಗಿಯರಿಗೆರಕ್ಷೆಕಟ್ಟಿ ಸಹೋದರತೆಯ ಸಂದೇಶ ಸಾರಿದರು. 3ನೇ ಸುತ್ತಿನಲ್ಲಿ 400ಕ್ಕೂ ಹೆಚ್ಚು ಸಹೋದರಿಯರುತಮ್ಮ ಸಹೋದರಿಯರಿಗೆರಕ್ಷೆಕಟ್ಟಿದರೆ, ಜೈನಬಂಧುಗಳು, ಸಾರ್ವಜನಿಕರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಮಂದಿಗೆ ಈ ಪವಿತ್ರ ದಿನಕ್ಕೆ ಸಾಕ್ಷಿಯಾದರು. ಪರಸ್ಪರರಾಖಿ ಧರಿಸಿ ಸ್ನೇಹ ಭಾವದಲ್ಲಿತೇಲಿದರು.

ಧರ್ಮಧ್ವಜಾರೋಹಣದೊಂದಿಗೆ ವಿಶ್ವದಾಖಲೆಯ ರಕ್ಷಾಬಂಧನ:

ಕಾರ್ಯಕ್ರಮಕ್ಕೂ ಮುನ್ನಅಂತರ್‍ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜ್, ಮುನಿಶ್ರೀ 108 ಪಿಯೂಷ ಸಾಗರಜೀ ಮಹಾರಾಜ್, ಕ್ಷುಲ್ಲಕ 105 ಶ್ರೀ ಪರ್ವಸಾಗರ್‍ಜೀ ಮಹಾರಾಜ್‍ ಅವರಿಂದ` ಅಹಿಂಸಾ ಸಂಸ್ಕಾರ ಪಾದಯಾತ್ರೆ’ ನಡೆಯಿತು. ವಿವಿಪುರಂನ ಮಹಾವೀರಧರ್ಮಶಾಲಾದಿಂದಆರಂಭಗೊಂಡ ಈ ಪವಿತ್ರಯಾತ್ರೆಬಸವನಗುಡಿಯನ್ಯಾಷನಲ್‍ಕಾಲೇಜು ಮೈದಾನದಲ್ಲಿ ಮುಕ್ತಾಯಗೊಂಡಿತು. ನಂತರಜೈನ ಮನಿಶ್ರೀಗಳಿಂದ ಧರ್ಮ ಧ್ವಜಾರೋಹಣ ನಡೆಯಿತು. ಈ ಮೂಲಕ ವಿಶ್ವದಾಖಲೆಯ `ಅಂತರ್ಮನರಕ್ಷಾಬಂಧನ ಮಹೋತ್ಸವ’ಕ್ಕೆ ಚಾಲನೆ ದೊರೆಯಿತು.

ಇದೇವೇಳೆ, ಅಂತರ್‍ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜ್‍ಜೀಅವರಿಗೆಜೈನ ಬಂಧುಗಳು ಚಿನ್ನ ಮತ್ತ ಬೆಳ್ಳಿಯ ಎಳೆಗಳಿಂದ ಮಾಡಿದರಾಖಿಯನ್ನುಕಟ್ಟಿ ಆಶೀರ್ವಾದ ಪಡೆದರು. ಬಳಿಕ ರಕ್ಷಾಬಂಧನದ ಮಹತ್ವದ ಬಗ್ಗೆ ಮಾತನಾಡಿದ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜ್‍ಜೀ,    ವಿವಿಧತೆಯಲ್ಲಿ ಏಕತೆ ನಮ್ಮ ವಿಶೇಷತೆ. ಪರಸ್ಪರರು ವ್ಯಕ್ತಿ ಗೌರವ ನೀಡುವ ಮೂಲಕ ಸಹೋದರರಂತೆ ಬಾಳಬೇಕು. ಅಸೂಯೆ ಬದಲು ಸ್ನೇಹ, ಅಹಂ ಬದಲು ವಿನಮ್ರತೆ, ನಮ್ಮ ಹೃದಯದಲ್ಲಿ ಮನೆಮಾಡಲಿ ಎಂದು ಹಾರೈಸಿದರು.

ಈ ಬೃಹತ್ ವಿಶೇಷ ರಕ್ಷಾಬಂಧನಕಾರ್ಯಕ್ರಮದಲ್ಲಿನೂರಾರು ಸಂಖ್ಯೆಯಲ್ಲಿಭಾಗವಹಿಸಿದ್ದರು.


Spread the love