Home Mangalorean News Kannada News ಅತ್ಯಾಚಾರಿ ಕೊಲೆಗಡುಕರಿಗೆ ಮರಣ ದಂಡನೆ ನೀಡಲು ಆಗ್ರಹಿಸಿ ದಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಮನವಿ

ಅತ್ಯಾಚಾರಿ ಕೊಲೆಗಡುಕರಿಗೆ ಮರಣ ದಂಡನೆ ನೀಡಲು ಆಗ್ರಹಿಸಿ ದಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಮನವಿ

Spread the love

ಅತ್ಯಾಚಾರಿ ಕೊಲೆಗಡುಕರಿಗೆ ಮರಣ ದಂಡನೆ ನೀಡಲು ಆಗ್ರಹಿಸಿ ದಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಮನವಿ

ಮಂಗಳೂರು: ಇತ್ತೀಚೆಗೆ 4 ಜನ ನರ ರಾಕ್ಷಸರಿಂದ ಅತ್ಯಾಚಾರಕ್ಕೊಳಗಾಗಿ ಅಮಾನವೀಯವಾಗಿ ಕೊಲೆಯಾದ ವೈದ್ಯೆ ಪ್ರಿಯಾಂಕ ರೆಡ್ಡಿಯವರ ಸಾವಿಗೆ ನ್ಯಾಯ ದೊರೆಯಬೇಕಾದರೆ ಈ ಪ್ರಕರಣವು ಆದಷ್ಟು ಬೇಗ ನ್ಯಾಯಾಲಯದಲ್ಲಿ ಇತ್ಯರ್ಥವಾಗಿ ಅತ್ಯಾಚಾರಿ ಕೊಲೆಗಡುಕರಿಗೆ ಮರಣ ದಂಡನೆಯಾಗಬೇಕು. ಮಾತ್ರವಲ್ಲ ಇಷ್ಟರವರೆಗೆ ನಡೆದ ಎಲ್ಲಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಆದಷ್ಟು ಬೇಗ ಮರಣ ದಂಡನೆ ವಿಧಿಸಬೇಕೆಂದು ಒತ್ತಾಯಿಸಿ ದ.ಕ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳೂರು ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ದ.ಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋರವರು ಅಮಾನುಷವಾಗಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸಹೋದರಿ ಪ್ರಿಯಾಂಕ ರೆಡ್ಡಿಯವರ ಆತ್ಮಕ್ಕೆ ಶಾಂತಿ ದೊರೆಯಬೇಕಾದರೆ ಆರೋಪಿಗಳಿಗೆ ಕೂಡಲೇ ತ್ವರಿತ ನ್ಯಾಯಾಲಯದ ಮುಖಾಂತರ ಮರಣ ದಂಡನೆ ವಿಧಿಸಬೇಕು. ಇನ್ನು ಮುಂದೆ ಯಾರೂ ಕೂಡ ಇಂತಹ ಕುಕೃತ್ಯವನ್ನು ಮಾಡಬಾರದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ನ ಹಿಲ್ಡಾ ಆಳ್ವ, ಸುರೇಖಾ ಚಂದ್ರಹಾಸ್, ದ.ಕ. ಮಹಿಳಾ ಕಾಂಗ್ರೆಸ್ ನ ಶೋಭಾ ಕೇಶವ್ , ಶಶಿಕಲಾ ಪದ್ಮನಾಭ್, ಅಂಜುಮ್, ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಮಿತಾ ಡಿ.ರಾವ್, ಗೀತಾ ಸುವರ್ಣ, ವಿದ್ಯಾ , ಸರಳಾ ಕರ್ಕೇರಾ, ಕವಿತಾ ವಾಸು, ಮೇಬಲ್ ಡಿ ಸೋಜಾ, ಚಂದ್ರಕಲಾ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷೆ ಶಾಂತಲಾ ಗಟ್ಟಿ, ಸಬಿತಾ ಮಿಸ್ಕಿತ್, ನೇತ್ರಾವತಿ, ಚಂದ್ರಕಲಾ ಡಿ.ರಾವ್, ಮೇಘ್ನದಾಸ್, ಮಂಜುಳಾ ನಾಯಕ್, ಆಶಾಲತಾ, ಸರಸ್ವತಿ ಸಾಲಿಯಾನ್ , ಯೂತ್ ಕಾಂಗ್ರೆಸ್ ನ ಕಾರ್ಯದರ್ಶಿ ಸಮರ್ಥ್ ಭಟ್ , ಯಶವಂತ್ ಪ್ರಭು, ವರುಣ್ ನಾಯಕ್ , ಮನ್ಸೂರ್, ಪ್ರದೀಪ್, ಅಹ್ಮದ್ ಮೆಗ್ದಾದ್ ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version