ಅತ್ಯುತ್ತಮ ಪ್ರಾಜೆಕ್ಟ್ ಪುರಸ್ಕಾರ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

Spread the love

ಅತ್ಯುತ್ತಮ ಪ್ರಾಜೆಕ್ಟ್ ಪುರಸ್ಕಾರ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ವಳಚ್ಚಿಲ್‍ನ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ, ಮಾಹಿತಿ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಕು. ಕೃತಿಕ, ಕು. ನವ್ಯಶ್ರಿ, ಕು. ಅನೀಶ ಹಾಗೂ ಕು. ರೋಶನ್ ಸುನೈನ ಪ್ರದರ್ಶಿಸಿದ ಸಂಶೋಧನ ಯೋಜನೆ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ನೀಡುವ ರಾಜ್ಯ ಮಟ್ಟದ ಅತ್ಯುತ್ತಮ ಪ್ರಾಜೆಕ್ಟ್ ಪುರಸ್ಕಾರಕ್ಕೆ ಪಾತ್ರವಾಗಿದೆ.

ವಿಭಿನ್ನ ನಿಲುವು ಹಾಗು ಬೆಳಕು ವ್ಯತ್ಯಾಸವಿದ್ದಾಗಲೂ ವ್ಯಕ್ತಿಯ ಮುಖವನ್ನು ಗುರುತಿಸುವ ಫೇಸ್ ರೆಕಗ್ನೀಶನ್ ಸಿಸ್ಟಮ್ ಅನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಅಭಿವೃಧ್ದಿಪಡಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಕು.ಸ್ವಾತಿ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಶ್ರೀ. ರಾಜೇಶ್ ಡಿ.ಎಸ್. ಇವರ ಮಾರ್ಗದರ್ಶನದಲ್ಲಿ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಶ್ರೀ. ಆತ್ಮರಂಜನ್ ಕೆ. ಇವರ ಸಂಯೋಜನೆಯಲ್ಲಿ ಅಭಿವೃಧ್ಧಿಪಡಿಸಿದ “ಪೋಸ್ ಇನ್‍ವೇರಿಯೆನ್ಟ್ ಕೀ ಪಾೈಂಟ್ ಬೇಸ್ಡ್ ಫೇಸ್ ರೆಕಗ್ನಿಶನ್ ಸಿಸ್ಟಮ್” ಎನ್ನುವ ಸಂಶೋಧನೆಗೆ ಈ ಪುರಸ್ಕಾರ ಲಭಿಸಿದೆ.

ಆ.10 ಮತ್ತು 11 ರಂದು ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಕೆಎಸ್ಸಿಎಸ್ಟಿ ಯು ಆಯೋಜಿಸಿದ್ದ ಅಂತಿಮ ಹಂತದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಇಂಜಿನಿಯರಿಂಗ್ ಕಾಲೇಜಿನ 33 ತಂಡಗಳು ಭಾಗವಹಿಸಿದ್ದವು.

ಶ್ರೀನಿವಾಸ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಮಯ್ಯ ಡಿ., ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ. ಜನಾರ್ಧನ ಭಟ್ ಕೆ. ಇವರು ವಿದ್ಯಾರ್ಥಿನಿಯರ ಈ ಸಾಧನೆಯನ್ನು ಪ್ರಶಂಸಿರುತ್ತಾರೆ.


Spread the love