Home Mangalorean News Kannada News ಅನಧಿಕೃತ ದನದ ಮಾಂಸದ ಅಡ್ಡೆಗೆ ಕಾಪು ಪೊಲೀಸರ ದಾಳಿ; ಜಾನುವಾರುಗಳ ರಕ್ಷಣೆ

ಅನಧಿಕೃತ ದನದ ಮಾಂಸದ ಅಡ್ಡೆಗೆ ಕಾಪು ಪೊಲೀಸರ ದಾಳಿ; ಜಾನುವಾರುಗಳ ರಕ್ಷಣೆ

Spread the love

ಅನಧಿಕೃತ ದನದ ಮಾಂಸದ ಅಡ್ಡೆಗೆ ಕಾಪು ಪೊಲೀಸರ ದಾಳಿ; ಜಾನುವಾರುಗಳ ರಕ್ಷಣೆ

ಉಡುಪಿ: ಮಾಂಸಕ್ಕಾಗಿ ಅನಧಿಕೃತವಾಗಿ ದನವನ್ನು ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ದನಗಳನ್ನು ಕಾಪು ಪೊಲೀಸರು ಗುರುವಾರ ರಾತ್ರಿ ರಕ್ಷಣೆ ಮಾಡಿದ್ದಾರೆ.

ಗುರುವಾರ ರಾತ್ರಿ 8:30 ಗಂಟೆಗೆ ರಾಜಶೇಖರ್ ಬಿ ಸಾನಗೂರ್, ಪೊಲೀಸ್ ಉಪನಿರೀಕ್ಷಕರು ಕಾಪು ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಳೂರು ಗ್ರಾಮದ ಸುನ್ನಿ ಸೆಂಟರ್ ಹಿಂಬದಿ ಹಮ್ಮಬ್ಬ ಎಂಬುವವರ ಮನೆಯ ಸಮೀಪ ದನವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ದನವನ್ನು ತಂದಿರುವುದಾಗಿ ಮಾಹಿತಿ ಬಂದಿತ್ತು.

ಬಂದ ಮಾಹಿತಿಯಂತೆ ಸ್ಥಳಕ್ಕೆ ತಲುಪಿ ನೋಡಿದಲ್ಲಿ ಮೂಳೂರು ಗ್ರಾಮದ ಸುನ್ನಿ ಸೆಂಟರ್ ಹಿಂಬದಿ ಹಮ್ಮಬ್ಬ ಎಂಬುವವರ ಮನೆ ಹತ್ತಿರ ಪಿಕ್ಅಪ್ ವಾಹನ ಒಂದು ನಿಲ್ಲಿಸಿದ್ದು ಅದರಲ್ಲಿ ಹಿಂಸಾತ್ಮಕವಾಗಿ ಕಟ್ಟಿದ ದನಗಳನ್ನು ಹಮ್ಮಬ್ಬ ಕಬೀರ್ ಮತ್ತು ರಿಜ್ವಾನ್ ರವರುಗಳು ವಾಹನದಿಂದ ಕೆಳಗೆ ಇಳಿಸಲು ತಯಾರಿ ಮಾಡುತ್ತಿದ್ದು ಆ ಸಮಯ ಪೊಲಿಸರ ತಂಡ ದಾಳಿ ನಡೆಸಿದ್ದು ಮೂರು ಜನ ಆರೋಪಿಗಳು ವಾಹನವನ್ನು ಮತ್ತು ದನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ

ನಂತರ ವಾಹನದಲ್ಲಿದ್ದ ನಾಲ್ಕು ದನ, ಮೂರು ಕರುಗಳು, ಮಹೀಂದ್ರಾ ಕಂಪನಿಯ ಬಿಳಿ ಬಣ್ಣದ ಪಿಕ್ಅಪ್ವಾಹನ ನಂಬ್ರ KA-31-8657 ನೇದನ್ನು ಹಾಗೂ ಅದರಲ್ಲಿದ್ದ ನೀಲಿ ಬಣ್ಣದ ಟರ್ಪಾಲ್ ಮತ್ತು ದನಕಟ್ಟಲು ಬಳಸಿದ ಮೂರು ನೈಲನ್ ಹಗ್ಗ ಗಳನ್ನು ಕಾಪು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version