ಅನಧಿಕೃತ ಪಿಜಿ ಗೆ ಬೀಗ ಹಾಕಿದ ಪಾಲಿಕೆ ಅಧಿಕಾರಿಗಳು
ಮಂಗಳೂರು: ಅನಧಿಕೃತವಾಗಿ ನಡೆಸುತ್ತಿದ್ದ ಪಿಜಿಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದ್ದರೂ ತೆರವುಗೊಳಿಸದ ಹಿನ್ನಲೆಯಲ್ಲಿ ಶುಕ್ರವಾರ ಮಹಾನಗರ ಪಾಲಿಕೆಯ ಅಧಿಕಾರಿಗಳು ಬೀಗ ಹಾಕಿದ ಘಟನೆ ನಡೆದಿದೆ.
ನಗರದ ಶ್ರೀದೇವಿ ಕಾಲೇಜು ರಸ್ತೆಯಲ್ಲಿಇರುವ ಅಪಾಲ್ ಪಾರ್ಕ್ ಅಪಾರ್ಟ್ ಮೆಂಟಿನಲ್ಲಿರುವ ಅನಧಿಕೃತ ಪಿಜಿಯನ್ನು ತೆರವುಗೊಳಿಸದಂತೆ ನೋಟಿಸ್ ನೀಡಿದ್ದರೂ ತೆರವುಗೊಳಿಸದ ಹಿನ್ನಲೆಯಲ್ಲಿ ಪಾಲಿಕಯೆ ಆರೋಗ್ಯಾಧಿಕಾರಗಳಾದ ಮಂಜಯ್ಯ ಶೆಟ್ಟಿಯವರ ನೇತೃತ್ವದಲ್ಲಿ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ಯಶವಂತ್ ಕರುಣಾಕರ್ ದೀಪಿಕಾ ಸಂಜಿತ್, ರಕ್ಷಿತಾ ಹಾಗೂ ಪೊಲೀಸ್ ಬಂದೋಬಸ್ತಿನೊಂದಿಗೆ ಬೀಗ ಮುದ್ರೆ ಹಾಕಲಾಗಿದೆ ಎಂದು ಪಾಲಿಕೆಯ ಪ್ರಕಟಣೆ ತಿಳಿಸಿದೆ.