ಅನುಮತಿಯಿಲ್ಲದೆ ಲವ್ ಜಿಹಾದ್ ವಿರುದ್ದ ಜಾಗೃತಿ; ಹಿಂದೂ ನಾಯಕರ ವಿರುದ್ದ ಪ್ರಕರಣ ದಾಖಲು

Spread the love

ಅನುಮತಿಯಿಲ್ಲದೆ ಲವ್ ಜಿಹಾದ್ ವಿರುದ್ದ ಜಾಗೃತಿ; ಹಿಂದೂ ನಾಯಕರ ವಿರುದ್ದ ಪ್ರಕರಣ ದಾಖಲು

ಉಡುಪಿ: ನಗರದ ಎಂಜಿಎಮ್ ಕಾಲೇಜಿನ ಬಸ್ ನಿಲ್ದಾಣದ ಬಳೀ ಜನವರಿ 22 ರಂದು ಅನುಮತಿ ಇಲ್ಲದೆ ಲವ್ ಜಿಹಾದ್  ವಿರುದ್ದ ಜಾಗೃತಿ ಅಭಿಯಾನ ನಡೆಸಿದ ವಿಎಚ್ ಪಿ, ಬಜರಂಗದಳ, ಹಾಗೂ ದುರ್ಗಾವಾಹಿನಿಯ ಪ್ರಮುಖರ ವಿರುದ್ದ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾರಾಯಣ, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ ಇವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ನಾರಾಯಣ ಅವರು ತಮ್ಮ  ಸಿಬ್ಬಂದಿಯವರೊಂದಿಗೆ  ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಮಧ್ಯಾಹ್ನ 12:15 ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ಬಸ್ ನಿಲ್ದಾಣದ ಬಳಿ ತಲುಪಿದಾಗ ಅಲ್ಲಿ   ವಿಲಾಸ್ ನಾಯಕ್ –ವಿ.ಹಿ.ಪ ಅಧ್ಯಕ್ಷರು, ವ ಸುನೀಲ್ ಕೆ ಆರ್, ಪ್ರಾಂತ ಸಂಚಾಲಕರು ಬಜರಂಗದಳ ,  ದಿನೇಶ್ ಮೆಂಡನ್ ,ಜಿಲ್ಲಾ ಸಂಚಾಲಕರು ಬಜರಂಗದಳ , ಸಂತೋಷ್ ಸುವರ್ಣ ವಿ,ಹಿ,ಪ ನಗರ ಅಧ್ಯಕ್ಷರು,  ದಿನೇಶ್ ಶೆಟ್ಟಿ – ಬಜರಂಗದಳ ಹೆಬ್ರಿ,    ಸುರೇಂದ್ರ ಕೋಟೇಶ್ವರ –ಜಿಲ್ಲಾ ಸಂಪರ್ಕ ಪ್ರಮುಖ್ ಬಜರಂಗದಳ,   ಪದ್ಮ ರತ್ನಾಕರ ಪ್ರಮುಖರು ದುರ್ಗಾ ವಾಹಿನಿ,   ಭಾಗ್ಯಶ್ರೀ ಐತಾಳ್ ಪ್ರಮುಖರು ದುರ್ಗಾವಾಹಿನಿ ,   ಲೋಕೇಶ ಶೆಟ್ಟಿಗಾರ ನಗರ ಸಂಚಾಲಕ ಬಜರಂಗದಳರವರುಗಳು ಇತರ ಸುಮಾರು 40 ಜನರನ್ನು ಸೇರಿಸಿದ್ದರು  ಅವರಲ್ಲಿ  ಸ್ಥಳದಲ್ಲಿ ಅವರುಗಳ ಇರುವಿಕೆಯ ಬಗ್ಗೆ ವಿಚಾರಿಸಿದಾಗ ಅವರುಗಳು ಲವ್‌ಜಿಹಾದ್‌ ವಿರುದ್ದ ಜಾಗೃತಿ ಅಭಿಯಾನವನ್ನು ವಿದ್ಯಾರ್ಥಿನಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ನಡೆಸುತ್ತಿರುವುದಾಗಿ  ತಿಳಿಸಿದರು.

ಅವರನ್ನು ಅವರೆಲ್ಲೆರೂ ಅಲ್ಲಿ ಸೇರಿದ ಬಗ್ಗೆ ಅಧಿಕೃತ ಅನುಮತಿ ಇರುತ್ತದೆಯೇ ಎಂದು ವಿಚಾರಿಸಿದಾಗ ಅನುಮತಿ ಇಲ್ಲ ಎಂದು ತಿಳಿಸಿದ್ದು,  ಅಭಿಯಾನ ನಡೆಸುವ ಸದ್ರಿ ವ್ಯಕ್ತಿಗಳು ಕೈಯಲ್ಲಿ “ ಲವ್ ಜಿಹಾದ್ ವಿರುದ್ದ ಜಾಗೃತಿ ಅಭಿಯಾನ “  ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿ ಉಡುಪಿ ಜಿಲ್ಲೆ  ಎಂಬ ಮುದ್ರಿತ ಕರಪತ್ರಗಳನ್ನು ಕಾಲೇಜಿನ ವಿದ್ಯಾರ್ಥಿನಿಯರುಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹಂಚುತ್ತಿದ್ದು ಅವರು ಜಿಲ್ಲಾಡಳಿತದ, ಯಾವುದೇ ಪ್ರಾಧಿಕಾರದ ಅಧಿಕೃತ ಅನುಮತಿಯನ್ನು ಪಡೆಯದೆ ಅಕ್ರಮ ಕೂಟ ಸೇರಿ ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ  ಜನ , ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯನ್ನು ಮದ್ಯಾಹ್ನ 12:15 ಗಂಟೆಯಿಂದ 13:15 ಗಂಟೆಯವರೆಗೆ ಮಾಡಿದ್ದು ಜನರಿಗೆ ತೊಂದರೆ ಉಂಟು ಮಾಡಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2018 ಕಲಂ : 143,290 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.


Spread the love