ಅಪಘಾತ ಪರಿಹಾರ ಮೊತ್ತ ಕಾನೂನು ಹೋರಾಟದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಗೆ ಗೆಲುವು

Spread the love

ಅಪಘಾತ ಪರಿಹಾರ ಮೊತ್ತ ಕಾನೂನು ಹೋರಾಟದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಗೆ ಗೆಲುವು

ಮಸ್ಕತ್:ಒಮನ್ ರಾಜಧಾನಿ ಮಸ್ಕತ್ ಗೆ ಸಮೀಪದ ಸೂರ್ ಜಾಲಾನ್ ಎಂಬಲ್ಲಿಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಂಟ್ವಾಳದ ಮುಸ್ತಫಾ ಎಂಬ ಯುವಕನ ಕುಟುಂಬಕ್ಕೆ ಪರಿಹಾರಮೊತ್ತ ಬಿಡುಗಡೆಗೊಳಿಸುವಲ್ಲಿ ಕೊನೆಗೂ ಇಂಡಿಯನ್ ಸೋಶಿಯಲ್ ಫೋರಮ್ ಮಸ್ಕತ್ ಕರ್ನಾಟಕ ಚಾಪ್ಟರ್ ಯಶಸ್ವಿಯಾಗಿದೆ.

ನಿರಂತರ ಎರಡು ವರ್ಷಗಳ ಕಾಲ ಇಂಡಿಯನ್ ಸೋಶಿಯಲ್ ಫೋರಮ್ನಡೆಸಿದ ಕಾನೂನು ಹೋರಾಟದ ಫಲವಾಗಿ ಅನಾಥವಾಗಿದ್ದ ಕುಟುಂಬಕ್ಕೆ ಪರಿಹಾರ ಮೊತ್ತವಾಗಿ25,16,866 ರೂಪಾಯಿಗಳ ಚೆಕ್ ಹಸ್ತಾಂತರವಾಗಿದೆ.

2017ರ ಆಗಸ್ಟ್ 31ರಂದು ಪರಿಹಾರ ಮೊತ್ತದಚೆಕ್ ಕೈ ಸೇರಿರುವುದಾಗಿ ಮೃತ ಮುಸ್ತಫಾರವರ ತಾಯಿ ಬೀಫಾತಿಮಾ ಅವರು ಇಂಡಿಯನ್ ಸೋಶಿಯಲ್ಫೋರಮ್ ನಿಯೋಗಕ್ಕೆ ಖಾತರಿಪಡಿಸಿದ್ದಾರೆ.

ಮೃತ ಮುಹಮ್ಮದ್ ಮುಸ್ತಾಫ ಮೂವರು ಸಹೋದರಿ ಮತ್ತು ಅಸ್ವಸ್ಥೆ ತಾಯಿಯನ್ನು ಹೊಂದಿದ್ದರು. ತೀರಾಬಡ ಕುಟುಂಬದ ಏಕೈಕ ಆಸರೆಯಾಗಿದ್ದ ಮುಸ್ತಫಾ ಉದ್ಯೋಗಕ್ಕಾಗಿ ಒಮನ್ ನ ಮಸ್ಕತ್ ಗೆ ಬಂದಿದ್ದರು.

2015ರಲ್ಲಿ ಅವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಸರಕಾರಿರಜೆ ಇದ್ದರೂ ಇಂಡಿಯನ್ ಸೋಶಿಯಲ್ ಫೋರಮ್ ನ ಕ್ಷಿಪ್ರ ಕಾರ್ಯಾಚರ್ಣೆಯಿಂದಾಗಿ ಎರಡುದಿನಗಳೊಳಗಾಗಿ ಮೃತದೇಹವು ತವರೂರಾದ ಪರ್ಲಿಯಾಕ್ಕೆ ತಲುಪಿತ್ತು.

ಮೃತರ ಪರಿಹಾರ ಮೊತ್ತಕ್ಕಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಇಂಡಿಯನ್ ಸೋಶಿಯಲ್ ಫೋರಮ್ನಿರಂತರವಾಗಿ ಅಧಿಕಾರಿಗಳನ್ನು, ರಾಯಭಾರಿ ಕಚೇರಿಯನ್ನು ಹಾಗೂ ವಿಮಾ ಕಂಪೆನಿಯ ವಕೀಲರನ್ನು  ಸಂಪರ್ಕಿಸಿ ಕಾನೂನು ಹೋರಾಟವನ್ನು ನಡೆಸಿತ್ತು. ಅದೇ ರೀತಿ ಊರಿನಿಂದಲೂ ಅದಕ್ಕೆ ಬೇಕಾದದಾಖಲೆಗಳನ್ನೂ ತರಿಸಿಕೊಂಡು ಪರಿಹಾರ ಮೊತ್ತ ಪಡೆಯುವಲ್ಲಿ ಸಾಕಷ್ಟು ಪರಿಶ್ರಮ ವಹಿಸಿತ್ತು. ಇದೀಗಇಂಡಿಯನ್ ಸೋಶಿಯಲ್ ಫೋರಮ್ ನ ನಿರಂತರ ಪರಿಶ್ರಮಕ್ಕೆ ಜಯ ಸಿಕ್ಕಿದೆ.

ಇಂಡಿಯನ್ ಸೋಶಿಯಲ್ ಫೋರಮ್ ನ ಕಾನೂನು ಹೋರಾಟದ ನಿಯೋಗದಲ್ಲಿ ನಝೀರ್ ಕೋಡಿಂಬಾಡಿ, ಅನ್ವರ್ ಮೂಡಬಿದ್ರೆ ಹಾಗೂ ಸಲಾಮ್ ತುಂಬೆ ಸಹಕರಿಸಿದ್ದರು.


Spread the love