ಅಬಕಾರಿ ಇಲಾಖೆ – ಅಕ್ರಮ ಮದ್ಯ ವಶ

Spread the love

ಅಬಕಾರಿ ಇಲಾಖೆ – ಅಕ್ರಮ ಮದ್ಯ ವಶ

ಉಡುಪಿ : ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಹಾಪ ತಿರುನೆಲ್ ವೆಳ್ಳಿ ಎಕ್ಸ್‍ಪ್ರೆಸ್ ರೈಲಿನ (ರೈಲು ಸಂಖ್ಯೆ (19578) ಮುಂಭಾಗದ ಸಾಮಾನ್ಯ ಭೋಗಿಯ ಶೌಚಾಲಯದ ಒಳಗಡೆ ಗುಪ್ತವಾಗಿ ಅಡಗಿಸಿಟ್ಟು ಅರಮವಾಗಿ ಸಾಗಾಟ ಮಾಡುತ್ತಿದ್ದ 60 ಲೀಟರ್ ಗೋವಾ ಮದ್ಯವನ್ನು ಉಡುಪಿ ಉಪವಿಭಾಗದ ಅಬಕಾರಿ ಉಪನಿರೀಕ್ಷಕರು ಹಾಗೂ ಸಿಬ್ಬಂದಿಯವರು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡ ಸೊತ್ತುಗಳ ಅಂದಾಜು ಮೊತ್ತ 16000 ರೂ. ಆಗಿರುತ್ತದೆ.

ಮಂಗಳೂರು ವಿಭಾಗದ ಜಂಟಿ ಆಯುಕ್ತರು ಎಸ್ ಎಲ್ ರಾಜೇಂದ್ರ ಪ್ರಸಾದ್‍ರವರ ಮಾರ್ಗದರ್ಶನ, ಕೆ ಎಸ್ ಮುರಳಿ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ ಉಡುಪಿ ಇವರ ನಿರ್ದೇಶನದಂತೆ, ಉಡುಪಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಕೆ.ವಿನೋದ್ ಕುಮಾರ್ ರವರ ನೇತೃತ್ವದ ಈ ಜಂಟಿ ಕಾರ್ಯಾಚರಣೆಯಲ್ಲಿ ಉಡುಪಿ ಕೊಂಕಣ ರೈಲ್ವೇ ಸುರಕ್ಷಾ ದಳದ ಪೊಲೀಸ್ ನಿರೀಕ್ಷಕರಾದ ಶಿವರಾಮ್ ಜಿ ರಾಠೋಡ್ ಸಿಬ್ಬಂದಿಯವರಾದ ಎಸ್ ಜಿ ಕುರುಪ್, ಪ್ರಮೋದ್, ವಿಷ್ಣುರಾಜ್ ರವರ ಸಹಕಾರದೊಂದಿಗೆ ಉಡುಪಿ ಉಪವಿಭಾಗದ ಅಬಕಾರಿ ಉಪನಿರೀಕ್ಷಕರಾದ ಬಿ ಬಾಲಕೃಷ್ಣ ಜೋಗಿ ಹಾಗೂ ಸಿಬ್ಬಂದಿಯವರಾದ ಕೃಷ್ಣ ಮತ್ತು ಹೆಚ್ ಸುಧಾಕರ್ ಹಾಗೂ ಹಿರಿಯ ವಾಹನ ಚಾಲಕರಾದ ದಿನೇಶ್ ರವರು ಭಾಗವಹಿಸಿದ್ದರು. ಪ್ರಕರಣವನ್ನು ಉಡುಪಿ ಉಪವಿಭಾಗದ ಅಬಕಾರಿ ಉಪನಿರೀಕ್ಷಕರಾದ ಬಿ ಬಾಲಕೃಷ್ಣ ಜೋಗಿ ರವರು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.


Spread the love