ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಚಳಿಗಾಲದ ವಿಹಾರ ಕೂಟ ನಕ್ಕುನಲಿದ ಸದಸ್ಯರ ಬಳಗ
ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಸದಸ್ಯರಿಗೆ ಆಯೋಜಿಸಲಾದ ಚಳಿಗಾಲದ ವಾರ್ಷಿಕ ವಿಹಾರಕೂಟ ಅಬುಧಾಬಿ ಯಾಸ್ ಐಲ್ಯಾಂಡ್ ನಲ್ಲಿರುವ ಯಾಸ್ ನಾರ್ಥ್ ಪಾರ್ಕಿನಲ್ಲಿ 2018 ಫೆಬ್ರವರಿ 9ನೇ ತಾರೀಕು ಶುಕ್ರವಾರ ಬೆಳಗಿನಿಂದ ಸಂಜೆಯವರೆಗೆ ಯಶಸ್ವಿಯಾಗಿ ನಡೆಯಿತು.
ಮಂಜು ಮುಸುಕಿದ ವಾತಾವರಣದಲ್ಲಿ ಎಳೆಯ ಮಕ್ಕಳ ಸಹಿತ ವಿವಿಧ ವಯೋಮಿತಿಯವರು ಅಬುಧಾಬಿಯ ಪ್ರತಿಷ್ಠಿತ ಉಧ್ಯಾನವನಗಳಲ್ಲಿ ಒಂದಾದಯಾಸ್ ನಾರ್ಥ್ ಪಾರ್ಕ್ ಹಸಿರು ಹುಲ್ಲುಹಾಸಿನಲ್ಲಿ ಬಂದು ಸಮಾವೇಶಗೊಂಡರು. ಬೆಳಗಿನ ಉಪಹಾರವನ್ನು ಹಸಿರು ವನಸಿರಿಯ ತಾಣದಲ್ಲಿ ಸವಿದರು.
ಅಬುಧಾಬಿ ಕರ್ನಾಟಕ ಸಂಘದಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಸರ್ವರನ್ನು ಹಾರ್ದಿಕವಾಗಿ ಸ್ವಾಗತಿಸಿದರು. ದಿನ ಪೂರ್ತಿ ನಡೆಯಲಿರುವ ವೈವಿಧ್ಯಮಯ ಚಟುವಟಿಕೆಗಳ ಬಗ್ಗೆ ವಿವರಣೆ ನೀಡಿ ವಿವಿಧ ತಂಡಗಳನ್ನು ರಚಿಸಿದರು. ತಂಡದ ಸದಸ್ಯರುಆಯ್ಕೆ ಮಾಡಿದ ನಾಯಕರಿಗೆ ಸ್ಪರ್ಧೆಗಳ ಬಗ್ಗೆ ಮಾಹಿತಿ ಹಾಗೂ ನಿಯಮಗಳನ್ನು ತಿಳಿಸಿ ಸ್ಪರ್ಧೆಗೆ ಚಾಲನೆ ನೀಡಿದರು.
ತಂಡಗಳನ್ನು ‘ಕರ್ನಾಟಕ”ಮಂಗಳೂರು’ ‘ಉಡುಪಿ’ ‘ಬೆಂಗಳೂರು’ ‘ಕುಂದಾಪುರ’ ಹೆಸರಿನಲ್ಲಿ ರಚಿಸಿದ ನಂತರಉತ್ಸಾಹಿ ತಂಡದ ಸದಸ್ಯರ ಪೈಪೋಟಿ ದಿನ ಪೂರ್ತಿ ನಡೆಯಿತು.
ಮಧ್ಯಾಹ್ನದ ಭೋಜನ, ಸಂಜೆಯ ಚಹಾ ಕಾಫಿ ಸ್ವೀಕರಿಸಿದ ಎಲ್ಲಾ ಸದಸ್ಯರ ಬಳಗ ದಿನಪೂರ್ತಿಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿ ಕೊಂಡವರು:
ಡಾಡ್ಜ್ ಬಾಲ್ : ಪುರುಷರು ಮತ್ತು ಮಹಿಳೆಯರು
ವಿಜೇತರು : ಅಶ್ವಿನ್ ಶೆಟ್ಟಿ, ವಿಕ್ರಂ ಆಚಾರ್, ಗುರುಪ್ರಸಾದ್ ಶೆಟ್ಟಿ, ಭವ್ಯ ಶೆಟ್ಟಿ, ಭಾರತಿ ಶೆಟ್ಟಿ ಮತ್ತು ಶ್ವೇತಾ ಶೆಟ್ಟಿ.
ಡಾಗ್‍ಅಂಡ್ ಬೋನ್, ಪಾಸಿಂಗ್ ಪಾರ್ಸಲ್ ಮಕ್ಕಳ ವಿಭಾಗ
ವಿಜೇತರು: ಟ್ವಿಶಾ ಗುರುಪ್ರಸಾದ್, ನತಾಶ ಮತ್ತು ನಿಕಿತ
ತಂಡಗಳಿಗಾಗಿ ಏರ್ಪಡಿಸಿದ್ದ ಸ್ಪರ್ಧೆಗಳು:
ಬಾಲ್ ಪಾಸಿಂಗ್, ರೋಪ್ ಪಾಸಿಂಗ್, ಬನಿಯನ್ ಪಾಸಿಂಗ್, ಮೂಕಾಭಿನಯ (ಮೈಮಿಂಗ್) ರಸಪ್ರಶ್ನೆ ಕರ್ನಾಟಕ ಬಗ್ಗೆ, ಕ್ವಿಝ್-ಜೆನ್ರಲ್, ಕಲ್ಲಂಗಡಿ ಹಣ್ಣಿನ ತೂಕ ಅಂದಾಜು, ಹಗ್ಗದ ಉದ್ದ ಅಂದಾಜು, ಬಾಟಲಿನಲ್ಲಿದ ಚಾಕೊಲೆಟ್ ಸಂಖ್ಯೆ ಅಂದಾಜು. ಸಮೂಹ ನೃತ್ಯ, ಮತ್ತು ಕ್ವೀನ್ಸ್ ಡಿಮಾಂಡ್ ಸ್ಪರ್ಧಾ ವಿಭಾಗಳಲ್ಲಿ ಅತ್ಯಂತ ಪೈಪೋಟಿ ನಡೆಯಿತು.
ಉಡುಪಿ ತಂಡ (43 ಅಂಕಗಳು) – ಪ್ರಥಮ ಸ್ಥಾನ
ಬೆಂಗಳೂರು (35 ಅಂಕಗಳು) ದ್ವಿತೀಯ ಸ್ಥಾನ
ಮಂಗಳೂರು (31) ಕುಂದಾಪುರ(27) ಕರ್ನಾಟಕ (13)
ದಿನಪೂರ್ತಿ ನಡೆದ ಕಾರ್ಯಕ್ರಮದ ಚಿತ್ರಿಕರಣವನ್ನು ಶಾರ್ಜ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈಯವರು ಚಿತ್ರಿಕರಿಸಿದರು.
ಶ್ರೀ ರೊನಾಲ್ಡ್ ಡಿ ಸೋಜರವರು ಛಾಯಚಿತ್ರಿಕರಣ ಜವಬ್ಧಾರಿಯನ್ನು ವಹಿಸಿಕೊಂಡಿದ್ದರು.
ಮಧ್ಯಾಹ್ನದ ರುಚಿರುಚಿಯಾದ ಊಟದ ಮತ್ತು ಸಂಜೆಯಚಹಾದ ವ್ಯವಸ್ಥೆಯನ್ನು ಶ್ರೀ ರಾಕೇಶ್ ಶೆಟ್ಟಿಯವರ – ಮಹಾರಾಜ ರೆಸ್ಟೊರೆಂಟ್ ತಂಡದರವರಿಂದ ಸ್ಥಳದಲ್ಲೆ ತಯಾರಿಸಿ ವಿತರಿಸುವ ವ್ಯವಸ್ಥೆ ಮಾಡಿದ್ದರು.
ಧ್ವನಿ ವರ್ಧಕದ ವ್ಯವಸ್ಥೆಯನ್ನು ಬ್ರಾಡ್ ವೇ ಅಬುಧಾಬಿ ನಿರ್ವಹಿಸಿದ್ದರು.
ವಿಹಾರಕೂಟದ ಸಮಾರೋಪದಲ್ಲಿ ಬಹುಮಾನಗಳ ವಿತರಣೆಯನ್ನು ಅತಿಥಿಗಳಾಗಿ ಆಗಮಿಸಿದ್ದ ಟಿ.ಎಂ.ಟಿ. ಗ್ರೂಪ್ ಅಬುಧಾಬಿ, ಮುಖ್ಯಸ್ಥರಾದ ಶ್ರೀ ಸಜನ್ ಶೆಟ್ಟಿ, ಶ್ರೀ ಜೀವನ್‍ರಾಜ್ ಶೆಟ್ಟಿ, ಶ್ರೀಮತಿ ಪವನಾ ಜೀವನ್‍ರಾಜ್ ಶೆಟ್ಟಿ ಮತ್ತು ಶ್ರೀ ಜಯರಾಂ ರೈಯವರು ನಡೆಸಿಕೊಟ್ಟರು.
ದಿನಪೂರ್ತಿ ನಡೆದ ವಿಹಾರಕೂಟದ ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ಸರ್ವೋತ್ತಮ ಶೆಟ್ಟಿ ಮತು ಶ್ರೀ ಮನೋಹರ್‍ತೋನ್ಸೆಯವರು ನಿರ್ವಹಿಸಿದ್ದರು.
ವಿಹಾರಕೂಟದ ಜವಬ್ಧಾರಿಯನ್ನು ಶ್ರೀ ಪ್ರದೀಪ್ ಕಿರೋಡಿಯನ್ ಮತ್ತು ಶ್ರೀಸುಧೀರ್ ಶೆಟ್ಟಿ ವಹಿಸಿಕೊಂಡಿದ್ದರು ಇವರಿಗೆ ಬೆಂಬಲವಾಗಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಶ್ರೀಯುತರುಗಳಾದ ಸರ್ವೋತ್ತಮ್ ಶೆಟ್ಟಿ, ಮನೋಹ ರ್‍ತೋನ್ಸೆ, ಯೊಗೇಶ್ ಪ್ರಭು, ರವಿ ರೈ, ಲೊಯೊಲಾ ಪಿಂಟೊ, ಉಮೇಶ್ ರಾವ್, ಅಲ್ತಾಫ್, ಮೆಲ್ವಿನ್ ಫೆರ್ನಾಂಡಿಸ್ ಮತ್ತು ವಿಜಯಾ ರಾವ್ ಇವರುಗಳ ಪೂರ್ವತಯಾರಿಯ ಫಲವಾಗಿ ವಿಹಾರಕೂಟ ಯಶಸ್ವಿಯಾಗಿ ನಡೆಯಿತು.
ಆಗಮಿಸಿದ ಎಲ್ಲಾ ಸದಸ್ಯರುಗಳ ಬಳಗದವರು ಹರ್ಷಚಿತ್ತರಾಗಿ ತೆರಳಿದರು.