ಅಬುಧಾಬಿ ಕರ್ನಾಟಕ ಸಂಘ ರಾಜ್ಯೋತ್ಸವ ಬಿ. ಕೆ. ಗಣೇಶ್ ರೈಯವರಿಗೆ ದ. ರಾ. ಬೇಂದ್ರೆ ಪ್ರಶಸ್ತಿ ಪ್ರದಾನ

Spread the love

ಅಬುಧಾಬಿ ಕರ್ನಾಟಕ ಸಂಘ ರಾಜ್ಯೋತ್ಸವ ಬಿ. ಕೆ. ಗಣೇಶ್ ರೈಯವರಿಗೆ ದ. ರಾ. ಬೇಂದ್ರೆ ಪ್ರಶಸ್ತಿ ಪ್ರದಾನ

ಅಬುಧಾಬಿ: ಅಬುಧಾಬಿಯಲ್ಲಿರುವ ಇಂಡಿಯಾ ಸೋಶಿಯಲ್ ಸೆಂಟರ್ ಆಶ್ರಯದಲ್ಲಿ ನಡೆಸಲಾಗುವ ಪ್ರಾದೇಶಿಕ ಸಮಾರಂಭ ಕರ್ನಾಟಕ ರಾಜ್ಯೋತ್ಸವ ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. 2016 ನವೆಂಬರ್ 4ನೇ ತಾರೀಕು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಅಬುಧಾಬಿಯಲ್ಲಿರುವ ಇಂಡಿಯಾ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ಸರ್ವರ ಮನಸೆಳೆಯಿತು.

ಡಾ| ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ

ಸಮಾರಂಭದ ಉದ್ಘಾಟನೆಯನ್ನು ಯು.ಎ.ಇ. ಕನ್ನಡಿಗರ ಮಹಾಪೋಷಕರಾದ ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರು ಇಂಡಿಯಾ ಸೋಶಿಯಲ್ ಸೆಂಟರ್ ನ ಉಪಾಧ್ಯಕ್ಷರು ರಾಜನ್ ಜಕಾರಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಜಾನ್ ವೇಗಸ್ ರವರ ಸಮುಖದಲ್ಲಿ ಉದ್ಘಾಟಿಸಿದರು. ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಉಪಸ್ತಿತರಿದ್ದರು. ಸರ್ವರನ್ನು ಮನೋಹರ್ ತೋನ್ಸೆಯವರು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ganesh-rai-bendre-award-20161105-1 ganesh-rai-bendre-award-20161105-2 ganesh-rai-bendre-award-20161105-3 ganesh-rai-bendre-award-20161105-4 ganesh-rai-bendre-award-20161105-5 ganesh-rai-bendre-award-20161105-6 ganesh-rai-bendre-award-20161105-7 ganesh-rai-bendre-award-20161105-8

ದಿವ್ಯಾಶರ್ಮಾ ತಂಡದವರಿಂದ ಪ್ರಾರ್ಥನೆ, ಮತ್ತು ಮಹಿಳಾ ಸದಸ್ಯರ ತಂಡದಿಂದ ನಾಡಗೀತೆ, ವಿಧೂಷಿ ರೋಹಿಣಿ ಅನಂತ್ ನಿರ್ದೇಶನದಲ್ಲಿ ಮಕ್ಕಳ ತಂಡದ ಸ್ವಾಗತ ನೃತ್ಯ ಹಾಗೂ ಕರ್ನಾಟಕ ನವೋಲ್ಲಸ ರೂಪಕ,  ವಿಧೂಷಿ ಸ್ವಪ್ನಾ ಕಿರಣ್ ನಿರ್ದೇಶನದಲ್ಲಿ ಮಕ್ಕಳ ತಂಡದ ಶಿವತಾಂಡವ ನೃತ್ಯ ಮತ್ತು ಸಂಗೀತನಾದದೊಂದಿಗೆ ಜಾನಪದ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಕರ್ನಾಟಕದ ಉಡುಗೆ ತೊಡುಗೆಯ ಆಕರ್ಷಕ ಪ್ರದರ್ಶನ ಶ್ರೀಮತಿ ವೀಣಾ ಮಲ್ಯರವರ ನಿರ್ದೇಶನದಲ್ಲಿ ಪ್ರದರ್ಶನವಾಗಿ ಸರ್ವರ ಮನಸೆಳೆಯಿತು.

ಊರಿನಿನಿಂದ ಆಗಮಿಸಿದ ಹಿರಿಯ ಕಲಾವಿದ ವಿಧಾನ್ ಸಿ. ನಾವಡರವರ ತಂಡದ ಅದ್ಭುತ ಪ್ರದರ್ಶನ “ಕಂಸ ವಧೆ” ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರತಿಷ್ಠಿತ . ರಾ. ಬೇಂದ್ರೆ ಪ್ರಶಸ್ತಿ ಬಿ. ಕೆ. ಗಣೇಶ್ ರೈಯವರಿಗೆ ಪ್ರದಾನ

ಅಬುಧಾಬಿ ಕರ್ನಾಟಕ ಸಂಘ ಪ್ರತಿವರ್ಷ ರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುತಿರುವ ಪ್ರತಿಷ್ಠಿತ ದ. ರಾ. ಬೇಂದ್ರೆ ಪ್ರಶಸ್ತಿಯನ್ನು ಯು.ಎ.ಇ.ಯಲ್ಲಿ ಕಳೆದ ಎರಡು ದಶಕಗಳಿಂದ ಕನ್ನಡ ಭಾಷೆ, ಕಲೆ, ಸಂಸ್ಕೃತಿ ಮತ್ತು ಸಮಾಜಸೇವೆಯಲ್ಲಿ ಮಾಡಿರುವ ಸಾಧನೆಗೆ ಕ್ರಿಯಾತ್ಮಕ ಕಲಾ ನಿರ್ದೇಶಕರಾದ ಬಿ. ಕೆ. ಗಣೇಶ್ ರೈಯವರಿಗೆ ಸರ್ವ ಸದಸ್ಯರು ಹಾಗೂ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರು ಪ್ರದಾನಿಸಿದರು.

ಸಮಾರಂಭಕ್ಕೆ ಬೆಂಬಲ ಪ್ರೋತ್ಸಾಹ, ಸಹಕಾರ ನೀಡಿದ ಪ್ರಾಯೋಜಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಯು.ಎ.ಇ. ಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ, ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಇನ್ನಿತರ ವಿಭಾಗಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅವರ ಮಾತಾಪಿತರ ಸಮ್ಮುಖದಲ್ಲಿ ಪದಕ ನೀಡಿ ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರು ಗೌರವಿಸಿದರು.

ಮೃದುವಾಣಿ ತಂಡದವರಿಂದ ಕೋಲಾಟ ಮತ್ತು ಹನಿಗವನ ವಾಚನ ನಡೆಯಿತು. ಕವಿಗಳಾದ ಇರ್ಷಾದ್ ಮೂಡಬಿದರಿ, ಪ್ರಕಾಶ್ ರಾವ್ ಪಯ್ಯಾರು, ಗೋಪಿನಾಥ್ ರಾವ್, ಅರ್ಶದ್ ಹುಸ್ಸೈನ್, ಅವನೀಶ ಭಟ್, ಸತೀಶ್ ಕುಲಾಲ್ ಮತ್ತು ಆರತಿ ಘಟಿಕ್ಕಾರ್ ಭಾಗವಹಿಸಿದ್ದರು.

ganesh-rai-bendre-award-20161105-9 ganesh-rai-bendre-award-20161105-10 ganesh-rai-bendre-award-20161105-11 ganesh-rai-bendre-award-20161105-12 ganesh-rai-bendre-award-20161105-13 ganesh-rai-bendre-award-20161105-14 ganesh-rai-bendre-award-20161105-15 ganesh-rai-bendre-award-20161105-16 ganesh-rai-bendre-award-20161105-17 ganesh-rai-bendre-award-20161105-18 ganesh-rai-bendre-award-20161105-19 ganesh-rai-bendre-award-20161105-20 ganesh-rai-bendre-award-20161105-21 ganesh-rai-bendre-award-20161105-22 ganesh-rai-bendre-award-20161105-23 ganesh-rai-bendre-award-20161105-24 ganesh-rai-bendre-award-20161105-25 ganesh-rai-bendre-award-20161105-26 ganesh-rai-bendre-award-20161105-27 ganesh-rai-bendre-award-20161105-28 ganesh-rai-bendre-award-20161105-29 ganesh-rai-bendre-award-20161105-30 ganesh-rai-bendre-award-20161105-31

ಮನಗೆದ್ದ ಯು... ಮಟ್ಟದ ವಿವಿಧ ತಂಡಗಳ ಸಮೂಹ ಗೀತಾಗಾಯನ  ಸ್ಪರ್ಧೆ

ಹಲವಾರು ವರ್ಷಗಳಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿಕೊಂಡು ಬರುತ್ತಿದ್ದ ಅಬುಧಾಬಿ ಕರ್ನಾಟಕ ಸಂಘ ಈ ಬಾರಿ ಯು.ಎ.ಇ. ಮಟ್ಟದ ವಿವಿಧ ತಂಡಗಳ ಸಮೂಹ ಗೀತಾಗಾಯನ  ಸ್ಪರ್ಧೆಯನ್ನು ಏರ್ಪಡಿಸಿದ್ದು ಯು.ಎ.ಇ. ಯ ವಿವಿಧ ಭಾಗಗಳಿಂದ ಒಂಬತ್ತು ತಂಡಗಳು ಭಾಗವಹಿಸಿದ್ದು ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಥಮ ಸ್ಥಾನ : ದ. ರಾ. ಬೇಂದ್ರೆ ತಂಡ – ಸಂಗೀತಾ ಶೆಟ್ಟಿಯರ ತಂಡ ದುಬಾಯಿ

ದ್ವಿತೀಯ ಸ್ಥಾನ : ಮಾಸ್ತಿ ತಂಡ – ಅಬುಧಾಬಿ ಕರ್ನಾಟಕ ಸಂಘ ತಂಡ 2, ಪ್ರಶಾಂತ್ ಶೆಣೈಯವರ ತಂಡ

ತೃತಿಯ ಸ್ಥಾನ : ಕಾರಂತ ತಂಡ – ಅಬುಧಾಬಿ ಕರ್ನಾಟಕ ಸಂಘ ತಂಡ 1, ದಿವ್ಯಾ ಶರ್ಮಾ ರವರ ತಂಡ

ತೀರ್ಪುಗಾರರಾಗಿ ಸುಧಾಕರ್ ಪೇಜಾವರ, ವಿಜಯಾ ಭಟ್, ರವಿರಾಜ್ ತಂತ್ರಿ ಕಾರ್ಯನಿರ್ವಹಿಸಿದ್ದರು.

ಅದೃಷ್ಟ ಚೀಟಿ ಡ್ರಾ ಜೆಟ್ ಏರ್ ವೇಸ್ ನ ಕಾರ್ತಿಕ್ ರಾಮಲಿಂಗಮ್ , ಜಯರಾಮ್ ರೈ, ಶೇಖರ್ ಶೆಟ್ಟಿಯವರ ಸಮ್ಮುಖದಲ್ಲಿ ನಡೆಯಿತು.

ಬೆಳಗಿನಿಂದ ಸಂಜೆಯವರೆಗೆ ಅತ್ಯಂತ ಅಕರ್ಷಕ ಕಾರ್ಯಕ್ರಮ ವಿರೂಪಣೆಯನ್ನು ಊರಿನಿಂದ ಆಗಮಿಸಿದ್ದ ಅವನೀಶ್ ರವರು ನಡೆಸಿಕೊಟ್ಟರು. ಕೊನೆಯಲ್ಲಿ ಸರ್ವೋತ್ತಮ ಶೆಟ್ಟಿಯವರು ಸ್ಮರಣಿಕೆ ನೀಡಿ ಗೌರವಿಸಿದರು

ಅಬುಧಾಬಿ ಕರ್ನಾಟಕ ಸಂಘದ ಅದ್ಧೂರಿ ರಾಜ್ಯೋತ್ಸವ ಸಮಾರಂಭವನ್ನು ಸರ್ವರಿಗೂ ವಂದನೆಗಳನ್ನು ಅರ್ಪಿಸುವುದರ ಮೂಲಕ ಮುಕ್ತಾಯಗೊಳಿಸಲಾಯಿತು.

Pics by Vivek Anand, Team Mangalorean


Spread the love