ಅಭಿವೃದ್ಧಿ ವಿಚಾರದಲ್ಲಿ ಚರ್ಚೆಯಾಗಬೇಕು, ವೈಯಕ್ತಿಕ ದೂಷಣೆಯಲ್ಲ: ಕೆ. ಜಯಪ್ರಕಾಶ್ ಹೆಗ್ಡೆ

Spread the love

ಅಭಿವೃದ್ಧಿ ವಿಚಾರದಲ್ಲಿ ಚರ್ಚೆಯಾಗಬೇಕು, ವೈಯಕ್ತಿಕ ದೂಷಣೆಯಲ್ಲ: ಕೆ. ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ಜನರ ಮಧ್ಯೆಯಿದ್ದು ಜನಪ್ರತಿನಿಧಿಯಾಗಿ ಸಮಸ್ಯೆಗೆ ಸ್ಪಂದಿಸುವವರಾಗಿರಬೇಕು. ರಾಜಕೀಯದಲ್ಲಿ ಠೀಕೆ ಅತಿಯಾಗಬಾರದು. ಅಭಿವೃದ್ಧಿ ವಿಚಾರದಲ್ಲಿ ಚರ್ಚೆಯಾಗಬೇಕು ಹೊರತು ವೈಯಕ್ತಿಕ ದೂಷಣೆ ಸರಿಯಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಸಾಲಿಗ್ರಾಮದಲ್ಲಿರುವ ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸಾಲಿಗ್ರಾಮ ಸ್ಥಾನೀಯ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ನಾನು ಸಂಸದ, ಸಚಿವ, ಶಾಸಕ ಆಗಿದ್ದೇ ಎನ್ನುವುದಕ್ಕಿಂತ ಆ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕೆಲಸಗಳಾಗಿದೆ ಎಂಬುವ ಅರಿವಿರಬೇಕು. ಶಾಸಕನಾಗಿ, ಸಚಿವನಾಗಿ, ಸಂಸದನಾಗಿ ಹಲವಾರು ಹುದ್ದೆಗಳನ್ನು ನಿಭಾಯಿಸಿ ಕೆಲಸ ಮಾಡಿದ್ದು ಕ್ಷೇತ್ರದ ಸಮಸ್ಯೆಗಳಿಗೂ ಸ್ಪಂದಿಸಿ, ಹೋರಾಡಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ನಾಯಕರ ಹೆಸರಿನಲ್ಲಿ ಮತವನ್ನು ಕೇಳಿ ಗೆದ್ದು ಬಂದರೆ ಅವರು ಮತ್ತು ಬರುವುದು 5 ವರ್ಷಗಳ ಬಳಿಕ. ಅಲ್ಲಿಯವರೆಗೆ ಮತದಾರರ ಕಡೆಗೆ ತಿರುಗಿಯೂ ನೋಡುವುದಿಲ್ಲ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಪಕ್ಷದ ಅಭ್ಯರ್ಥಿ ಮಾತನಾಡಿ, ಪುಸ್ತಕದಲ್ಲಿ ಇಟ್ಟ ನವಿಲು ಗರಿ ಎಂದು ಲೇವಡಿ ಮಾಡಿದ್ದರು ಆದರೆ ಈಗ ನವಿಲು ಗರಿ ಮರಿಹಾಕಿದ್ದಾ ಅಥವಾ ನವಿಲು ಮೊಟ್ಟೆ ಇಟ್ಟು ಮರಿ ಹಾಕಿದ್ದಾ ಎನ್ನುವುದಕ್ಕೆ ಅವರೇ ಉತ್ತರ ನೀಡಬೇಕಾಗಿದೆ ಎಂದರು. ಕಾಂಗ್ರೆಸ್ ಸರಕಾರದ ಸಾಧನೆಗಳ ಬಗ್ಗೆ ಪ್ರತಿ ಮನೆಗಳಿಗೆ ತೆರಳಿ ಜನರಿಗೆ ಮನದಟ್ಟು ಮಾಡುವ ಕೆಲಸವಾಗಬೇಕೆಂದರು.

ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಸರಕಾರ ನೀಡಿದ ಭರವಸೆಗಳನ್ನು ಈಡೇರಿಸಿದೆ. ಇದರಿಂದ ಅರ್ಥಿಕ ನಷ್ಟವಾಗುತ್ತದೆಂಬ ಬಿಜೆಪಿಯವರ ಹೇಳಿಕೆ ಸರಿಯಲ್ಲ. ಕೇಂದ್ರ ಸರಕಾರ 11 ಲಕ್ಷ ಕೋಟಿ ಉದ್ದಿಮೆದಾರರ ಸಾಲ ಮನ್ನಾ ಮಾಡಿದಾಗ ನಷ್ಟವಾಗಿಲ್ಲವೇ ಎಂದವರು ಪ್ರಶ್ನಿಸಿದರು.
ಬೈಂದೂರಿನ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಮಾತನಾಡಿ ಕೋಟ ಶ್ರೀನಿವಾಸ ಪೂಜಾರಿಯವರು ಕಲ್ಲಡ್ಕ ಪ್ರಭಾಕರ್ ಭಟ್ಟರ ಏಜೆಂಟ್. ಅಧಿಕಾರವಿದ್ದಾಗ ಬಿಲ್ಲವರ ಪರ ಕೆಲಸ ಮಾಡುವ, ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ನನ್ನನ್ನು ಭಯೋತ್ಪಾದಕ ಎಂದು ಬೈಂದೂರು ಕ್ಷೇತ್ರಕ್ಕೆ ಬಂದು ಹೇಳಿಕೆ ನೀಡಿದರು. ನಾನು 30 ವರ್ಷದ ರಾಜಕಾರಣದಲ್ಲಿ ಯಾವುದೇ ಅನ್ಯಾಯದ ಕೆಲಸ ಮಾಡಿಲ್ಲ. ಮನೆ ಮಾರಿ, ಆಸ್ತಿ ಮಾರಿ ನಾನು ರಾಜಕಾರಣ ಮಾಡಿರುವೆ. ಆದರೆ ಬಿಜೆಪಿ ಅಭ್ಯರ್ಥಿಯು ತಾನು ಬಡವ, ಏನೂ ಇಲ್ಲ ಎಂದು ಸುಳ್ಳು ಹೇಳುತ್ತಾ ಮತದಾರರಿಗೆ ಮೋಸ ಮಾಡುವ ಕೆಲಸ ಮಾಡುತ್ತಿದ್ದಾರೆ. ನನ್ನನ್ನು ಭಯೋತ್ಪಾದಕ ಎಂದು ಕರೆದರೂ ಕೂಡ ಶುಭ ಕಾರ್ಯದ ಆಮಂತ್ರಣ

ಈ ಸಂದರ್ಭ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಮಹಿಳಾ ಕಾಂಗ್ರೆಸ್ನ ರೇಖಾ, ಪ್ರಮುಖರಾದ ಶ್ರೀನಿವಾಸ ಅಮೀನ್, ತಿಮ್ಮ ಪೂಜಾರಿ, ವಿನಯಕುಮಾರ್ ಕಬ್ಯಾಡಿ, ಆಮ್ ಆದ್ಮಿ ಪಕ್ಷದ ಆಶ್ಲಿ ಸೀನ್ ಕರ್ನೆಲಿಯೋ ಮೊದಲಾದವರಿದ್ದರು.


Spread the love