‘ಅಮರ ಚೇತನ ಸಂತ ಜುಜೆ ವಾಜ್’ ಕನ್ನಡ ಚಿತ್ರದ ಲೋಕಾರ್ಪಣೆ

Spread the love

ಮಂಗಳೂರಿನ ಸಂತ ಜೋಸೆಫ್ ವಾಜ್ ಕೇಂದ್ರವು ನಿರ್ಮಿಸಿದ ಹಾಗೂ ವಿನೋದ್ ಗಂಗೊಳ್ಳಿ ನಿರ್ದೇಶಿಸಿರುವ ಕನ್ನಡ ಚಿತ್ರ ‘ಅಮರ ಚೇತನ ಸಂತ ಜುಜೆ ವಾಜ್’ ಇದರ ಲೋಕಾರ್ಪಣೆ ಹಾಗೂ ಪ್ರಥಮ ಪ್ರದರ್ಶನವು ಮಂಗಳೂರಿನ ಇತಿಹಾಸ ಪ್ರಸಿಧ್ಧ ರೋಸಾರಿಯೊ ಕೆಥೆಡ್ರಲ್‍ನಲ್ಲಿ ಜರುಗಿತು.

ಮಂಗಳೂರಿನ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ, ಶಾಸಕರಾದ ಜೆ.ಆರ್.ಲೋಬೊ, ಕೆಥೆಡ್ರಲ್‍ನ ಮುಖ್ಯ ಧರ್ಮಗುರು ಅ.ವಂ.ಜೆ.ಬಿ. ಕ್ರಾಸ್ತ, ಸಹಾಯಕ ಧರ್ಮಗುರು ವಂ. ಪಾವ್ಲ್ ಡಿ’ಸೋಜ, ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡೋಲ್ಫಿ ಡಿ’ಸೋಜ, ಚಿತ್ರದ ನಿರ್ದೇಶಕ ವಿನೋದ್ ಗಂಗೊಳ್ಳಿ ಹಾಗೂ ಚಿತ್ರದ ಪ್ರಮುಖ ಪಾತ್ರಧಾರಿ ಆಶ್ವಿನ್ ಮೊಂತೆರೊ ಈ ಸಂಭ್ರಮದಲ್ಲಿ ಹಾಜರಿದ್ದರು.

1-Rosario 2-Rosario-001 3-Rosario-002 4-Rosario-003 5-Rosario-004 6-Rosario-005 7-Rosario-006

ಅ.ವಂ. ಜೆ.ಬಿ. ಕ್ರಾಸ್ತಾರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಚಿತ್ರದ ಕಿರು ಪರಿಚಯ ನೀಡಿದರು. ಬಿಶಪ್ ಅಲೋಶಿಯಸ್ ಪಾವ್ಲ್ ಡಿ’ಸೋಜರವರು ಚಿತ್ರವನ್ನು ಲೋಕಾರ್ಪಣೆಗೊಳಿಸಿ ಕ್ರಿ.ಶ. 1681ರಿಂದ 1684ರ ತನಕ ನಮ್ಮ ಕರಾವಳಿಯಲ್ಲಿ ಯೇಸು ಸ್ವಾಮಿಯ ಸಂದೇಶವನ್ನು ಸಾರಿದ ಸಂತ ಜೋಸೆಫ್ ವಾಜರ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪವಾಗಲಿ ಹಾಗೂ ಚಿತ್ರವು ಎಲ್ಲರ ಮೆಚ್ಚುಗೆಗೊಳಿಸಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕ ಜೆ.ಆರ್. ಲೋಬೊರವರು ಜೋಸೆಪ್ ವಾಜ್ ಕೇಂದ್ರದ ಚೊಚ್ಚಲ ಪ್ರಯತ್ನವನ್ನು ಶ್ಲಾಘಿಸಿ ಚಿತ್ರ ತಂಡಕ್ಕೆ ಶುಭಹಾರೈಸಿದರು. ಈ ಸಂದರ್ಬದಲ್ಲಿ ಚಿತ್ರದ ನಿರ್ದೇಶಕರಾದ ವಿನೋದ್ ಗಂಗೊಳ್ಳಿಯವರನ್ನು ಗೌರವಿಸಲಾಯಿತು. ಜೋನ್ ಡಿ’ಸಿಲ್ವಾರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ವಂ. ಪಾವ್ಲ್ ಡಿ’ಸೋಜರವರು ವಂದನಾರ್ಪಣೆಗೈದರು. ನಂತರ ಜರುಗಿದ ಚಿತ್ರದ ಪ್ರಥಮ ಪ್ರದರ್ಶನವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.


Spread the love