ಅಮಲು ಮಾತ್ರೆ, ಸಿರಪ್ ಮಾರಾಟ ಜಾಲ ಪತ್ತೆ ಹಚ್ಚಿದ ನಗರ ಪೋಲಿಸರು
ಮಂಗಳೂರು: ನಗರದ ಶಾರದಾ ವಿದ್ಯಾಲಯ ರಸ್ತೆಯಲ್ಲಿರುವ ಮೆಡಿಕಲ್ ಅಂಗಡಿಯೊಂದರಲ್ಲಿ ವೈದ್ಯರ ಚೀಟಿ ಇಲ್ಲದೆ ದುಪ್ಪಟ್ಟು ಬೆಲೆಗೆ ಅಮಲು ಮಾತ್ರೆ ಹಾಗೂ ಸಿರಪ್ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ್ದಾರೆ.
ಬಜಿಲಕೇರಿಯ ಶಾಲೆಯ ಬಳಿಯ ನಿವಾಸಿ ಅಝರ್ ಯಾನೆ ಮಹಮ್ಮದ್ ಅಝರ್ ಸೆ. 25ರಂದು ತಣ್ಣೀರುಬಾವಿ ಬೀಚಿನಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಆತನನ್ನು ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅತಿಯಾದ ಅಮಲು ಮಾತ್ರೆ ಹಾಗೂ ಸಿರಪ್ ಸೇವಿಸಿದ್ದನ್ನು ಒಪ್ಪಿಕೊಂಡಿದ್ದ. ಅಲ್ಲದೆ ಅದನ್ನು ಖರೀದಿಸಿದ ಅಂಗಡಿಯ ವಿವರ ನೀಡದ್ದನು. ಅದರಂತೆ ಪೋಲಿಸರು ತನಿಖೆ ನಡೆಸಿ ಅಮಲು ಮಾತ್ರೆ ಮಾರಾಟದ ಅಂಗಡಿ ಪತ್ತೆ ಹಚ್ಚಿದ್ದಾರೆ.
ತಲಾ 15 ಮಾತ್ರೆ ಇರುವ 10 ಸ್ಟ್ರಿಪ್ ಗಳನ್ನು ಮತ್ತು 100 ಮಿ.ಲೀ. ನ 30 ಬಾಟ್ಲಿ ಸಿರಪ್ ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಉಪ ಔಷದ ಸಹಾಯಕ ನಿಯಂತ್ರಕರಿಗೆ ಹಸ್ತಾಂತರಿಸಿದ್ದಾರೆ.