ಅಮೃತಧಾರ ಗೋಶಾಲೆಯಿಂದ ಗೋ ಕಳ್ಳತನ; ಆರೋಪಿಗಳ ಬಂಧನಕ್ಕೆ ಕಾರ್ಣಿಕ್ ಆಗ್ರಹ
ಮಂಗಳೂರು: ಕೈರಂಗಳದ ಪುಣ್ಯಕೋಟಿ ನಗರದ ಅಮೃತಧಾರ ಗೋಶಾಲೆಯಿಂದ ಗೋ ದರೋಡೆ ಮಾಡಿರುವ ಘಟನೆಯನ್ನು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತೀವ್ರವಾಗಿ ಖಂಡಿಸಿದ್ದಾರೆ.
ಹಾಡುಹಗಲೇ ಆಯುಧಧಾರಿಗಳು ರಾಜರೋಷವಾಗಿ ದನದ ಹಟ್ಟಿಗೆ ನುಗ್ಗಿ ಗೋ ದರೋಡೆ ಮಾಡಿರುವುದು ಅತ್ಯಂತ ದುರದೃಷ್ಟಕರ. ಗೋಹಂತಕರ ಬಂಧನಕ್ಕೆ ಆಗ್ರಹಿಸಿ ಹಾಗೂ ಸಮಾಜದಲ್ಲಿ ವ್ಯಾಪಕವಾಗಿ ಹಬ್ಬಿರುವ ಗೋ ದರೋಡೆಕೋರರ ವಿರುದ್ಧದ ಆಕ್ರೋಶವನ್ನು ಪ್ರತಿಬಿಂಬಿಸಿ ಅಮೃತಧಾರ ಗೋಶಾಲ ಸಮಿತಿ ಅಧ್ಯಕ್ಷ ಟಿ.ಜಿ ರಾಜಾರಾಮ್ ಭಟ್ ಅವರು ಆರಂಬಿಸಿದ ಉಪವಾಸ ಸತ್ಯಾಗ್ರಹಕ್ಕೆ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ
ಚುನಾವಣಾ ನೀತಿ ಸಂಹಿತೆಯ ಹೆಸರಿನಲ್ಲಿ ಚಿಕ್ಕಪುಟ್ಟ ಕೆಲಸಗಳಿಗೂ ತೊಂದರೆ ಮಾಡುವ ಪೆÇಲೀಸ್ ಇಲಾಖೆ ಘಟನೆ ನಡೆದು ಕೆಲದಿನಗಳಾದರೂ ಗೋಹಂತಕರನ್ನು ಬಂಧಿಸಲಾಗದಿರುವುದು ವಿಪರ್ಯಾಸ. ಕೊಣಾಜೆ ಮತ್ತು ಉಳ್ಳಾಲ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಆಕ್ರಮ ಗೋಕಳ್ಳ ಸಾಗಣಿಕೆ ಆಕ್ರಮ ಕಸಾಯಿಖಾನೆಗ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಬಹುಸಂಖ್ಯಾತ ಹಿಂದೂ ಸಮಾಜದ ಹಿತಾಸಕ್ತಿಯನ್ನು ಕಡೆಗಣಿಸುವಲ್ಲಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಕಾನೂನು ಸುವ್ಯವಸ್ಥೆಯ ಅವ್ಯವಸ್ಥೆಗೆ ಕಾರಣವಾಗಿದ್ದು ಪೊಲೀಸ್ ಇಲಾಖೆಯ ಈ ಬೇಜಾವಬ್ದಾರಿತನವನ್ನು ಖಂಡಿಸುತ್ತೇನೆ. ಪೆÇಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಗೋ ದರೋಡೆಕೋರರನ್ನು ಶೀಘ್ರದಲ್ಲಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ