Home Mangalorean News Kannada News `ಅರ್ಜುನ್ ವೆಡ್ಸ್ ಅಮೃತ’ ಸಿನಿಮಾವು ಜುಲೈ 21ರಂದು ಕರಾವಳಿದ್ಯಂತ ತೆರೆಗೆ

`ಅರ್ಜುನ್ ವೆಡ್ಸ್ ಅಮೃತ’ ಸಿನಿಮಾವು ಜುಲೈ 21ರಂದು ಕರಾವಳಿದ್ಯಂತ ತೆರೆಗೆ

Spread the love

`ಅರ್ಜುನ್ ವೆಡ್ಸ್ ಅಮೃತ’ ಸಿನಿಮಾವು ಜುಲೈ 21ರಂದು ಕರಾವಳಿದ್ಯಂತ ತೆರೆಗೆ

ಅಮೃತಾ ಮದುವೆ ದಿನ ಪಕ್ಕಾ ಆಗಿದ್ದು ಮುಂದಿನ ಜುಲೈ 21 ಕ್ಕೆ ಅರ್ಜುನ್ ಜೊತೆ ಮದುವೆಯೂ ನಡೆಯಲಿದೆ. ಇದೇನ್ ಕಥೆ ಅಂತೀರಾ? ಹೌದು… ಬಹುನಿರೀಕ್ಷಿತ ಅರ್ಜುನ್ ವೆಡ್ಸ್ ಅಮೃತಾ ತುಳು ಚಿತ್ರ 21ಕ್ಕೆ ಬಿಡುಗಡೆಯಾಗ್ತಾ ಇದೆ. ನವಿರಾದ ಪ್ರೇಮಕಥೆಯನ್ನೊಳಗೊಂಡ ಚಿತ್ರದ ಸಂಗೀತ ಈಗಾಗಲೇ ತುಳುವರಿಗೆ ಇಷ್ಟವಾಗಿದ್ದು ಚಿತ್ರ ಬಿಡುಗಡೆಗೆ ಕಾಯುವಂತೆ ಮಾಡಿದೆ. ಚಿತ್ರಕ್ಕೆ ಸುಮಾ ಎಲ್.ಎನ್. ಶಾಸ್ತ್ರಿ ಮೊದಲ ಬಾರಿಗೆ ಸಂಗೀತ ನೀಡಿರುವುದು ಚಿತ್ರದ ವಿಶೇಷತೆಯೂ ಆಗಿದೆ. ರಘು ಶೆಟ್ಟಿ ನಿರ್ದೇಶನವಿರೋ ಚಿತ್ರವನ್ನು ಬೆದ್ರ 9 ಕ್ರಿಯೇಷನ್ ನಿರ್ಮಿಸಿದ್ದು ಹಾಸ್ಯಮಿಶ್ರಿತ ಪ್ರೇಮಕಥೆ ಚಿತ್ರದಲ್ಲಿದೆ.

ಅನೂಪ್ ಸಾಗರ್-ಆರಾಧ್ಯ ಶೆಟ್ಟಿ ನಾಯಕ, ನಾಯಕಿಯರಾಗಿ ಚಿತ್ರಕ್ಕೆ ಬಣ್ಣ ಹಚ್ಚಿದ್ದರೆ ಜನರನ್ನು ರಂಜಿಸಲು ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್, ಸುಂದರ ರೈ ಮಂದಾರ ಜೊತೆ ಸೇರಿದ್ದಾರೆ. ನವೀನ್ ಡಿ. ಪಡೀಲ್ ಚಿತ್ರದಲ್ಲಿ ಗಂಭೀರ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಇನ್ನಷ್ಟು ವಿಶೇಷಗಳೇನು ಅನ್ನೋದನ್ನು ತಿಳಿಯಲು ಚಿತ್ರಪ್ರೇಮಿಗಳು 21 ರವರೆಗೆ ಕಾಯ್ಬೇಕು.

ಬೆದ್ರ 9 ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ಪತ್ರಕರ್ತ ರಘುಶೆಟ್ಟಿ ನಿರ್ದೇಶನದ `ಅರ್ಜುನ್ ವೆಡ್ಸ್ ಅಮೃತ’ ಸಿನಿಮಾವು ಜುಲೈ 21ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ರಘುಶೆಟ್ಟಿ ಚೊಚ್ಚಲ ನಿರ್ದೇಶನದ ಅರ್ಜುನ್ ವೆಡ್ಸ್ ಅಮೃತ ಸಿನಿಮಾಕ್ಕೆ ಕಳೆದ ನವಂಬರ್ 2ರಂದು ಕಟೀಲು ಕ್ಷೇತ್ರದಲ್ಲಿ ಮುಹೂರ್ತ ನೆರವೇರಿತು. ಬಳಿಕ ಸಿನಿಮಾದ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡಿದ ರಘುಶೆಟ್ಟಿ ಅವರಿಗೆ ತುಳು ಸಿನಿಮಾರಂಗದ ಹಲವು ಅನುಭವಗಳನ್ನು ನೀಡಿದೆ. ಅರ್ಜುನ್ ವೆಡ್ಸ್ ಅಮೃತ ಸಿನಿಮಾದಲ್ಲಿ ತುಳು ರಂಗಭೂಮಿಯ ಖ್ಯಾತ ಕಲಾವಿದರು ಅಭಿನಯಿಸಿದ್ದಾರೆ. ಜತೆಗೆ ಹೊಸಬರಿಗೂ ರಘು ಅವಕಾಶ ನೀಡಿದ್ದಾರೆ. ಮುಖ್ಯವಾಗಿ ಕುಸೇಲ್ದರಸೆ ನವೀನ್ ಡಿ ಪಡೀಲ್‍ರದ್ದು ಇಲ್ಲಿ ಡಿಫರೆಂಟ್ ಪಾತ್ರ.. ನಾಯಕನಟನಾಗಿ ಅನೂಪ್ ಸಾಗರ್ ಮತ್ತು ನಾಯಕಿಯಾಗಿ ಆರಾಧ್ಯ ಶೆಟ್ಟಿ ಮುಖ್ಯ ಪಾತ್ರದಲ್ಲಿದ್ದರೂ ನವೀನ್ ಪಡೀಲ್‍ರ ಸುತ್ತ ಕಥೆ ಸಾಗುತ್ತಿರುವುದು ಸಿನಿಮಾದ ಹೈಲೆಟ್ಸ್ ಆಗಿದೆ.

ಅರ್ಜುನ್ ವೆಡ್ಸ್ ಅಮೃತ ರೋಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು, ಆಕ್ಷ್ಯನ್ ಇಲ್ಲದ ಲವ್, ಸೆಂಟಿಮೆಂಟ್ ಹಾಗೂ ಹಾಸ್ಯ ಮಿಶ್ರಿತದಿಂದ ಕೂಡಿದೆ. ಸುಮಾ ಎಲ್.ಎನ್.ಶಾಸ್ತ್ರಿ ಅವರು ಸಂಗೀತ ನೀಡಿದ್ದಾರೆ. ಮಹಿಳೆಯೊಬ್ಬರು ಪ್ರಥಮ ಬಾರಿಗೆ ಸಂಗೀತ ನೀಡಿದ ಹೆಗ್ಗಳಿಕೆಗೆ ಸುಮಾಶಾಸ್ತ್ರಿ ಪಾತ್ರರಾಗಿದ್ದಾರೆ.

ರಾಜೇಶ್ ಶೆಟ್ಟಿ, ದಾಮೋದರ ದೊಂಡೋಲೆ ಲೋಕುಕುಡ್ಲ ಅವರ ಸಾಹಿತ್ಯ ಇದೆ. ಕಿರಣ್ ತರುಣ್‍ರಾಜ್ ಕೊರಿಯೋಗ್ರಾಫರ್ ಆಗಿದ್ದಾರೆ. ರಾಜೇಶ್ ಕೃಷ್ಣನ್. ಹೇಮಂತ್, ಎಲ್.ಎನ್. ಶಾಸ್ತ್ರಿ ಸುಪ್ರಿಯಾ ಮತ್ತು ಸುಮಾ ಎಲ್.ಎನ್ ಶಾಸ್ತ್ರಿ ಸ್ವರ ನೀಡಿದ್ದಾರೆ. ಚೇತನ್ ಮುಂಡಾಡಿ ಕಲಾ ನಿರ್ದೇಶಕರು ಆನಂದ ಸುಂದರೇಶ್ ಅವರು ಛಾಯಾಗ್ರಾಹಕರಾಗಿ ದುಡಿದಿದ್ದಾರೆ. ಸಹ ನಿರ್ದೇಶಕರಾಗಿ ತ್ರಿಶೂಲ್ ಶೆಟ್ಟಿ, ರಾಮ್‍ದಾಸ್ ಸಸಿಹಿತ್ಲು ದುಡಿದಿದ್ದಾರೆ. ಅನೂಪ್‍ಸಾಗರ್ ನಾಯಕನಟರಾಗಿ, ಆರಾಧ್ಯ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಇನ್ನುಳಿದಂತೆ ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜ ರಾಜ ವಾಮಂಜೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ರಮೇಶ್ ರೈ ಕುಕ್ಕುವಳ್ಳಿ, ಸುನೀಲ್ ನೆಲ್ಲಿಗುಡ್ಡೆ, ಸುಧೀರ್ ರಾಜ್ ಉರ್ವಾ, ಸತೀಶ್ ಬಂದಲೆ, ಪವಿತ್ರ ಶೆಟ್ಟಿ ಕಟಪಾಡಿ, ಹರಿಣಿ ಕಾರ್ಕಳ ಆರ್.ಜೆ.ಅನುರಾಗ್, ಪ್ರಜ್ವಲ್ ಪಾಂಡೇಶ್ವರ್ ಮೊದಲಾದವರಿದ್ದಾರೆ. ರಘು ಶೆಟ್ಟಿ ಅವರದೇ ಕಥೆ, ಚಿತ್ರಕಥೆ ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.


Spread the love

Exit mobile version