Home Mangalorean News Kannada News ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದಿಂದ ಕೈದಿಗಳಿಗೆ ಕ್ರಿಸ್ಮಸ್ ಊಟ ನೀಡಲು ಪರವಾನಿಗೆ ಕೋರಿ ಮನವಿ

ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದಿಂದ ಕೈದಿಗಳಿಗೆ ಕ್ರಿಸ್ಮಸ್ ಊಟ ನೀಡಲು ಪರವಾನಿಗೆ ಕೋರಿ ಮನವಿ

Spread the love

ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದಿಂದ ಕೈದಿಗಳಿಗೆ ಕ್ರಿಸ್ಮಸ್ ಊಟ ನೀಡಲು ಪರವಾನಿಗೆ ಕೋರಿ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಕ್ರಿಸ್ಮಸ್ ದಿನದಂದು ಜಿಲ್ಲಾ ಕಾರಾಗೃಹದ ಕೈದಿಗಳಿಗೆ ಆಹಾರ ವಿತರಣೆ ಮಾಡಲು ಪರವಾನಿಗೆ ನೀಡುವಂತೆ ಕೋರಿ ಜೈಲಿನ ಅಧಿಕ್ಷಕರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್ ಎಸ್ ಕರೀಮ್ ಮತ್ತು ಪ್ರಧಾನ ಕಾರ್ಯದರ್ಶಿ ಲೋರೆನ್ಸ್ ಡಿಸೋಜಾ ಹಾಗೂ ಇತರ ಸದಸ್ಯರು ಜೈಲಿನ ಅಧಿಕ್ಷಕರಾದ ಪರಮೇಶ್ವರ್ ಅವರಿಗೆ ಮನವಿಯನ್ನು ಸಲ್ಲಿಸಿದರು.

ಈ ವೇಳೆ ಮಾತನಾಡಿದ ಲಾರೆನ್ಸ್ ಡಿಸೋಜ ಹಬ್ಬದ ಸಂದರ್ಭದಲ್ಲಿ ಆಹಾರವನ್ನು ಸಿದ್ದಪಡಿಸಿ ಕಾರಾಗೃಹದ ಕೈದಿಗಳಿಗೆ ನೀಡಲು ನಿರ್ಧರಿಸಿದ್ದು, ಮನೆಯವರಿಂದ ದೂರವಿದ್ದು ಹಬ್ಬಗಳ ಆಚರಣೆಯಿಂದ ವಂಚಿತರಾಗಿರುವ ಕೈದಿಗಳಿಗೆ ಈ ಮೂಲಕ ಹಬ್ಬದ ಸಂತೋಷ ನೀಡಲು ನಿರ್ಧರಿಸಲಾಗಿದೆ. ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ನಮ್ಮ ಸಹೋದರ ಕೈದಿಗಳಿಗೆ ಹಬ್ಬದ ಉಟವನ್ನು ಒದಗಿಸಲು ಜೈಲಿನ ಅಧಿಕ್ಷಕರಿಗೆ ಮನವಿ ಸಲ್ಲಿಸಿದ್ದು, ಅಧೀಕ್ಷಕರು ಅವಕಾಶ ನೀಡುವ ಭರವಸೆ ನೀಡಿದ್ದಾರೆ ಎಂದರು.


Spread the love

Exit mobile version