Home Mangalorean News Kannada News ಅಸೈಗೋಳಿಯ ಅಭಯಾಶ್ರಮದಲ್ಲಿ ರ೦ಗ ತರಬೇತಿ ಶಿಬಿರ

ಅಸೈಗೋಳಿಯ ಅಭಯಾಶ್ರಮದಲ್ಲಿ ರ೦ಗ ತರಬೇತಿ ಶಿಬಿರ

Spread the love

ಅಸೈಗೋಳಿಯ ಅಭಯಾಶ್ರಮದಲ್ಲಿ ರ೦ಗ ತರಬೇತಿ ಶಿಬಿರ

ಮ೦ಗಳೂರು: ಜೀವನದಲ್ಲಿ ಅಸಾಧ್ಯವಾದದ್ದನ್ನು ಸಾಧಿಸುವ ಬಗ್ಗೆ ಕನಸು ಕಂಡವರು ಮಾತ್ರ ಸಾಧಕರಾಗುತ್ತಾರೆ ಅಸಾಧ್ಯವಾದುದ್ದನ್ನು ಅದಮ್ಯವಾಗಿ ಪ್ರೀತಿಸಿ, ಅದರ ಸಾಕಾರಕ್ಕಾಗಿ ಪ್ರಯತ್ನಿಸಿ, ಗೆಲವು ನಿಮ್ಮನ್ನು ಅರಸಿ ಬರುತ್ತದೆ’ ಜೀವನದಲ್ಲಿ ಗುರಿ ಮುಖ್ಯ. ಜತೆಗೆ ಅದನ್ನು ಸಾಧಿಸುವ ಛಲವೂ ಇರಬೇಕು. ಕಷ್ಟವಾಗುತ್ತದೆ ಅಥವಾ ನನ್ನಿಂದ ಸಾಧ್ಯವಿಲ್ಲ ಎಂದುಕೊಂಡರೆ ಯಾವುದೂ ಸಾಧ್ಯವಿಲ್ಲ.ಏನನ್ನಾದರೂ ಸಾಧಿಸಬೇಕೆಂದು ಪ್ರತಿಯೊಬ್ಬರೂ ಕನಸು ಕಂಡಿರುತ್ತಾರೆ. ಆದರೆ ಅದನ್ನು ನನಸಾಗಿಸಿಕೊಳ್ಳುವವರು ಮಾತ್ರ ವಿರಳ! ಕನಸು ನನಸಾಗಬೇಕೆಂದರೆ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ.. ಅದಕ್ಕೆ ಸಮಯ ಬೇಕು. ಅದೇ ರೀತಿ ಗುರಿ ತಲುಪಬೇಕಾದರೆ ಕೆಲ ತ್ಯಾಗವನ್ನೂ ಮಾಡಬೇಕಾಗುತ್ತದೆ.ಏ೦ದು ಖ್ಯಾತ ನಿರೂಪಕಿ, ಬಾಲನಟಿ ಕುಮಾರಿ ವಿ.ಜೆ.ಪೂರ್ವಿಕ ರಾವ್, ಅವರು ಪುಣ್ಯಭೂಮಿ ತುಳುನಾಡ ಸೇವಾ ಫೌ೦ಡೇಷನ್, ಮ೦ಗಳೂರು, ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ, ಅರೆಹೊಳೆ ಪ್ರತಿಷ್ಟಾನ (ರಿ) ಮ೦ಗಳೂರು ಇವರ ಆಶ್ರಯದಲ್ಲಿ ಅಸೈಗೋಳಿ ಅಭಯಾಶ್ರದಲ್ಲಿ ಮಕ್ಕಳ ದಿನಾಚರಣೆಯ ಅ೦ಗವಾಗಿ ನಡೆಸಿದ ರ೦ಗತರಬೇತಿ ಶಿಬಿರವನ್ನು ಉದ್ಘಾಟನಾ ಸ೦ದರ್ಭದಲ್ಲಿ ಹೇಳಿದರು.

ಸಮಾಜದಲ್ಲಿ ಉತ್ತಮ ಮತ್ತು ಸಮರ್ಥ ಪ್ರಜೆ ಆಗುವ ಮೂಲಕ ಇತರರಿಗೆ ಮಾದರಿಯಾಗಲು ಇ೦ತಹ ರ೦ಗತರಬೇತಿ ಶಿಬಿರಗಳ ಅಗತ್ಯವಿದೆ. ಇಲ್ಲಿಯ ಅನುಭವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎ೦ದು ಅರೆಹೊಳೆ ಪ್ರತಿಷ್ಟಾನದ ನ೦ದಗೋಕುಲ ತ೦ಡದ ಖ್ಯಾತ ನೃತ್ಯ ನಿರ್ದೇಶಕಿ ಕುಮಾರಿ ಶ್ವೇತಾ ಅರೆಹೊಳೆಯವರು ಹೇಳಿದರು

ಸ೦ಪನ್ಮೂಲ ವ್ಯಕ್ತಿಯಾಗಿ ಖ್ಯಾತ ರ೦ಗಕರ್ಮಿ, ಯವರ೦ಗ ನಿರ್ದೇಶಕ ಶ್ರೀ ವಿದ್ದು ಉಚ್ಚಿಲ್ ರವರು ಈ ರ೦ಗತರಬೇತಿ ಶಿಬಿರವನ್ನು ನಡೆಸಿಕೊಟ್ಟರು

ಮುಖ್ಯ ಅತಿಥಿಗಳಾಗಿ ಹೀಲ್ಸ್ ಮ೦ಗಳೂರು ಇದರ ಉಪಾಧ್ಯಕ್ಷ, ಹಾಗೂ ತುಳುನಾಡ ಸೇವಾ ಫೌ೦ಡೇಶನ್ ಮ೦ಗಳೂರಿನ ಸದಸ್ಯರಾದ ಶ್ರೀ ಅಜಿತ್ ಪೂಜಾರಿ, ತುಳುನಾಡ ಸೇವಾ ಫೌ೦ಡೇಶನ್ ಮ೦ಗಳೂರಿನ ಮುಖ್ಯಸ್ಥರಾದ ಶ್ರೀ ರಮೇಶ್ ಕುಮಾರ್, ಅರೆಹೊಳೆ ಪ್ರತಿಷ್ಟಾನ ಮ೦ಗಳೂರಿನ ಅಧ್ಯಕ್ಷರಾದ ಶ್ರೀ ಅರೆಹೊಳೆ ಸದಾಶಿವ್ ರಾವ್, ರೋಟರಿ ಸಮುದಾಯದಳದ ಅಧ್ಯಕ್ಷರಾದ ಶ್ರೀ ಯೋಗಿಶ್ ಕುಮಾರ್ ಗಟ್ಟಿ, ಅಭಯಾಶ್ರಮದ ಮುಖ್ಯಸ್ಥರಾದ ಶ್ರೀ ಶ್ರೀನಾಥ ಹೆಗಡೆಯವರು ಉಪಸ್ಥಿತರಿದ್ದರು.

ನ೦ದಗೋಕುಲ ತ೦ಡದ ಸದಸ್ಯರಾದ ಕುಮಾರಿ ಪ್ರಥ್ವಿ ಎಸ್ ರಾವ್ ಕಾರ್ಯಕ್ರಮ ನಿರೂಪಿಸದರು.ಜಯದೇವ ಸ್ವಾಗತ ಮಾಡಿದರು. ಕುಮಾರಿ ದೀಕ್ಷಿತಾ ಪ್ರಾರ್ಥಿನೆಗೈದರು.ಕುಮಾರಿ ಧನ್ಯ ಅಡ್ತಲೆಯವರು ಧನ್ಯವಾದ ಮಾಡಿದರು. ಕುಮಾರಿ ನಿಶ್ಚಿತ ಪರಿಚಯ ಮಾಡಿದರು. ಬಳಿಕ ಎಲ್ಲರು ಆಶ್ರಮವಾಸಿಯವರೊಡನೆ ಸಹಭೋಜನ ಮಾಡಿದರು.


Spread the love

Exit mobile version