ಅ. 25: ಶಾರದೋತ್ಸವ ಮೆರವಣಿಗೆ ಪ್ರಯುಕ್ತ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಬಂದ್

Spread the love

ಅ. 25: ಶಾರದೋತ್ಸವ ಮೆರವಣಿಗೆ ಪ್ರಯುಕ್ತ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಬಂದ್

ಕುಂದಾಪುರ: ಗಂಗೊಳ್ಳಿ ಶಾರದೋತ್ಸವ ಮೆರವಣಿಗೆ ಪ್ರಯುಕ್ತ ಸಂಬಂಧಪಟ್ಟ ಪೊಲೀಸ್ ಠಾಣ ಸರಹದ್ದಿನ ಗಂಗೊಳ್ಳಿ, ಗುಜ್ಜಾಡಿ ಹಾಗೂ ತ್ರಾಸಿ ಗ್ರಾಮದ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್ ಶಾಪ್ಗಳ ಮದ್ಯ ಮಾರಾಟವನ್ನು ಅಕ್ಟೋಬರ್ 25 ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಮುಚ್ಚಲು ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಆದೇಶಿಸಿದ್ದಾರೆ.

ಅಕ್ಟೋಬರ್ 25ರಂದು ಗಂಗೊಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ 4.00 ಗಂಟೆಗೆ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಸೇವಾ ಸಂಘ(ರಿ) ಗಂಗೊಳ್ಳಿ ವತಿಯಿಂದ ಶಾರದಾ ಮಂಟಪದಿಂದ ಪುರಮರವಣಿಗೆ ಹಮ್ಮಿಕೊಂಡಿದ್ದು, ಸದ್ರಿ ಮೆರವಣಿಗೆಯಲ್ಲಿ ಸುಮಾರು 2,000 ಕ್ಕೂ ಅಧಿಕ ಊರ-ಪರ ಊರ ಹಿಂದೂ ಭಾಂದವರು ಸೇರಲಿದ್ದು, ಸದ್ರಿ ಗಂಗೊಳ್ಳಿ ಗ್ರಾಮವು ಅತ್ಯಂತ ಕೋಮುಸೂಕ್ಷ್ಮ ಪ್ರದೇಶವಾಗಿದ್ದು, ಅಲ್ಪಸಂಖ್ಯಾತರು ಗ್ರಾಮದ ಆಯಾಕಟ್ಟಿನ ಸ್ಥಳದಲ್ಲಿ ವ್ಯಾಪಾರ ವಾಣಿಜ್ಯ ಕೇಂದ್ರಗಳನ್ನು ಹೊಂದಿದ್ದು, ಅಲ್ಲದೇ ಶಾಲೆ, ಮನೆ ಇತ್ಯಾದಿಗಳು ಪೇಟೆಯ ಹೃದಯ ಭಾಗದಲ್ಲಿಯೇ ಹಾದು ಹೋಗಲಿದ್ದು, ಈ ಸಮಯ ಗಂಗೊಳ್ಳಿ ಪರಿಸರದಲ್ಲಿರುವ ಬಾರ್, ವೈನ್ ಶಾಪ್ ಹಾಗೂ ಗಂಗೊಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಗುಜ್ಜಾಡಿ, ತ್ರಾಸಿ ಗ್ರಾಮಗಳು ಗಂಗೊಳ್ಳಿಯಿಂದ ಸುಮಾರು 1 ಕಿಮೀ ಅಂತರದ ಅಸುಪಾಸಿನಲ್ಲಿ ಇರುವುದರಿಂದ ಜನರು ಸದ್ರಿ ಸ್ಮಳಗಳಲ್ಲಿನ ಬಾರ್, ವೈನ್ ಶಾಪ್ಗಳಿಗೆ ಹೋಗಿ ಮದ್ಯಪಾನ ಮಾಡಿ ಗಲಾಟೆ ಮಾಡುವ ಸಾಧ್ಯತೆ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಅಕ್ಟೋಬರ್ 25 ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಗಂಗೊಳ್ಳಿ ಪೊಲೀಸ್ ಠಾಣಾ ಸರಹದ್ದಿನ ಗಂಗೊಳ್ಳಿ, ಗುಜ್ಜಾಡಿ ಹಾಗೂ ತ್ರಾಸಿ, ಗ್ರಾಮದ ಎಲ್ಲಾ ಬಾರ್, ವೈನ್ಶಾಪ್ ಮತ್ತು ಮದ್ಯಪಾನದ ಅಂಗಡಿಗಳಲ್ಲಿ ಮದ್ಯಪಾನ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.


Spread the love