ಆಕೆಯದ್ದು ಅಪ’ರೂಪ’ದ ಸಾಧನೆ! ಬಲಗೈಗೆ ಆಘಾತ: ಎಡಗೈಯಲ್ಲೇ ಪರೀಕ್ಷೆ ಬರೆದು ಡಿಸ್ಟಿಂಕ್ಷನ್
ಬರಹ: ಗಣೇಶ್ ಕಾಮತ್ ಮೂಡುಬಿದಿರೆ
ಮೂಡುಬಿದಿರೆ: ಆಕೆ ಎಂಜಿನಿಯರಿಂಗ್ ಕಾಲೇಜೊಂದರದಲ್ಲಿ ಅಂತಿಮ ವರ್ಷದ ಬಿ.ಇ. ಕಂಪ್ಯೂಟರ್ ಸೈನ್ಸ್ ವಿದ್ಯಾಥರ್ಿನಿ. ರಜೆ ಕಳೆದು ಮತ್ತೆ ಕಾಲೇಜಿಗೆ ಬಸ್ಸಿನಲ್ಲಿ ಬರುತ್ತಿದ್ದಾಗ ಅನಿರೀಕ್ಷಿತ ಆಕ್ಸಿಡೆಂಟ್ಗೆ ಆಕೆ ಮಾತ್ರ ಸಿಲುಕೊಂಡು ಬಲಗೈ ಮುದ್ದೆಯಾಗುತ್ತದೆ. ಅಲ್ಲಿಗೆ ಆಕೆ ಚೇತರಿಸಿಕೊಳ್ಳುತ್ತಾಳಾ ಎನ್ನುವ ಮಾತು ಹಾಗಿರಲಿ ಪದವಿ ಶಿಕ್ಷಣ ಮುಗಿಸಿ ಎಂಜಿನಿಯರ್ ಆಗುವ ಕನಸು ನನಸಾಗಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ. ಆದರೆ ಹೆಣ್ಣಿನ ಛಲ, ಆತ್ಮ ವಿಶ್ವಾಸದ ನಡೆ ಅದೆಂತಹ ಸಾಧನೆಗಳಿಗೆ ಹಾದಿಯಾಗುತ್ತದೆ ಎನ್ನುವುದಕ್ಕೆ ಆಕೆಯೇ ಒಂದು ಉದಾಹರಣೆಯಾಗಿ ನಿಂತಿದ್ದಾಳೆ.
ಒಂದು ವರ್ಷದ ಅವಧಿಯಲ್ಲಿ ಹಲವು ಶಸ್ತ್ರ ಚಿಕಿತ್ಸೆಗೆ ಸ್ಪಂದಿಸಿ.. ಅದರ ನಡುವೆಯೇ ಕಾಲ ಹರಣ ಮಾಡದೇ ಎಡಗೈಯಲ್ಲಿ ಬರೆಯುವುದನ್ನು ಕಲಿತು, ಬರೆದು ಮತ್ತೆ ಪರೀಕ್ಷೆಗೆ ಹಾಜರಾಗಿ ನಿಗದಿತ ಅವಧಿಯಲ್ಲೇ ಎಡಗೈಯಲ್ಲಿ ಉತ್ತರ ಬರೆದು ಶೇ 70ರ ಡಿಸ್ಟಿಂಕ್ಷನ್ ರಿಸಲ್ಟ್ ತನ್ನದಾಗಿಸಿಕೊಂಡಿದ್ದಾಳೆ. ಅಂದ ಹಾಗೆ ಈ ಅಪರೂಪದ ಸಾಧಕಿ ಕುಂದಾಪುರದ ದಿನಕರ ಹಲಗೇರಿ ಪ್ರತಿಮಾದೇವಿ ದಂಪತಿಯ ಸುಪುತ್ರಿ ದೀಪಾ ಡಿ.ಹಲಗೇರಿ. ಹಲಗೇರಿಯವರ ಇಬ್ಬರು ಪುತ್ರಿಯರ ಪೈಕಿ ರೂಪಾ ಮಂಗಳೂರಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾಥರ್ಿನಿಯಾಗಿದ್ದವರು.
ಅದೇನಾಯಿತೆಂದರೆ…
ಅಂದು 2015ರ ಫೆ 16 ಕಾಲೇಜಿಗೆಂದು ಕುಂದಾಪುರದಿಂದ ಬಸ್ಸಿನಲ್ಲಿ ಹೊರಟಿದ್ದ ರೂಪಾ ಎಮರ್ಾಳಿಗೆ ತಲುಪಿದಾಗ ಲಾರಿಯೊಂದು ಬಸ್ಸಿನ ಬದಿಗೆ ಢಿಕ್ಕಿಯಾಗಿ ಕೇವಲ ರೂಪಾಳ ಬಲಗೈ ಜಜ್ಜಿ ಹೋಗಿ ರಕ್ತದ ಒಕುಳಿಯಾಗುತ್ತದೆ. ಆ ಕ್ಷಣಕ್ಕೆ ಬಸ್ಸಿನಲ್ಲಿದ್ದ ಎಲ್ಲರೂ ಎದ್ದು ಪರಾರಿಯಾಗುತ್ತಾರೆ. ನೀರು ಕೊಡುವುದು ಬಿಡಿ ಕೇಳುವವರಿಲ್ಲ. ಕೇವಲ ಚರ್ಮಕ್ಕೆ ಅಂಟಿಕೊಂಡಿದ್ದ ಬಲಗೈ ಪರಿಸ್ಥಿತಿ ನೋಡಿದವರೂ ಮೂಛರ್ೆ ಹೋಗುತ್ತಿದ್ದರೇನೋ. ಆದರೆ ಆತ್ಮವಿಶ್ವಾಸ ಪುಟಿದೇಳುತ್ತಿದ್ದ ರೂಪಾ ಧೃತಿಗೆಡಲಿಲ್ಲ. ಆಗ ಬಸ್ಸಿನಲ್ಲಿದ್ದ ನಿವೇದಿತಾ ಎಂಬಾಕೆ ಮಾತ್ರ ಈಕೆಯನ್ನು ಉಡುಪಿಯ ಖಾಸಗಿ ಆಸ್ಪತ್ರೆ ಅಲ್ಲಿಂದ ಮಣಿಪಾಲಕ್ಕೆ ಬಳಿಕ ಚಿಕಿತ್ಸೆ,ತನ್ನ ಸಹೋದರನನ್ನೇ ಕರೆಸಿ ಅಗತ್ಯ ರಕ್ತದಾನ ಮಾಡಿದ್ದು ಅದು ಮಾನವೀಯತೆಯ ನಿಜವಾದ ಮುಖ.
ಆಸ್ಪತ್ರೆಯಲ್ಲಿ ವೈದ್ಯರೂ ಕ್ಷಣಕಾಲ ಇದು ಕೈಲಾಗದ್ದು ಎಂದೆಣಿಸಿದ್ದರೋ ಏನೋ. ಆದರೆ ರೂಪಾಳ ಸ್ಪಂದನ ಗಮನಾರ್ಹವಾಗಿತ್ತು. ಮುಂದಿನ ಒಂದೂವರೆ ತಿಂಗಳಲ್ಲಿ 5ರಿಂದ 6 ಸರ್ಜರಿಗಳಾದವು. ಒಂದು ವಾರ ಮನೆಗೆ ಬಳಿಕ ಮತ್ತೆ ಆಸ್ಪತ್ರೆ ಮತ್ತೆ ಚಿಕಿತ್ಸೆ, ಸರ್ಜರಿ ಈಗಾಗಲೇ ಹದಿಮೂರು ಸರ್ಜರಿಗಳಾಗಿವೆ. ಇನ್ನೊಂದು ಬಾಕಿ ಇದೆ. ಮಣಿಪಾಲ ಕೆ.ಎಂ.ಸಿಯ ಡಾ. ಅನಿಲ್ ಭಟ್ ಮತ್ತವರ ತಂಡದ ಪ್ರಯತ್ನ ಮತ್ತು ಆಕೆಯ ಆತ್ಮವಿಶ್ವಾಸದ ಫಲ ಎಂಬಂತೆ ಬಲಗೈ ಚೇತರಿಸಿಕೊಳ್ಳುತ್ತಿದೆ.
ಇಷ್ಟರಲ್ಲೇ ನಾಲ್ಕೈದು ಲಕ್ಷಕ್ಕೂ ಮಿಕ್ಕಿ ಖಚರ್ಾಗಿದ್ದು ಆರಂಭಿಕ ಚಿಕಿತ್ಸೆಯ ಎರಡು ಲಕ್ಷ ರೂ ನೆರವನ್ನು ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾಥರ್ಿಗಳೆಲ್ಲ ಕೂಡಿ ಭರಿಸಿರುವುದೂ ಗಮನಾರ್ಹವಾಗಿದೆ.
ರೋಚಕ ಅಧ್ಯಾಯ…..
ಇನ್ನೇನು ಎರಡು ಮೂರು ತಿಂಗಳು ಕಳೆದರೆ ಆಕೆಯ ಪದವಿ ವ್ಯಾಸಂಗ ಪೂರ್ಣವಾಗುತ್ತಿತ್ತು. ಆದರೆ ಆಘಾತದಿಂದಾಗಿ ಆಕೆ ವರ್ಷವೊಂದನ್ನು ಕಳೆದುಕೊಂಡಳು. ಆದರೂ ಮನೆಯಲ್ಲಿ ಸುಮ್ಮನಿರಲಿಲ್ಲ. ತಾಯಿಯ ಬೆಂಬಲದೊಂದಿಗೆ ನಿಧಾನವಾಗಿ ಎಡಗೈಯಲ್ಲಿ ಹೋಂವಕರ್್ ಬರವಣಿಗೆ ಆರಂಭಿಸಿದ ರೂಪಾಳ ಆತ್ಮವಿಶ್ವಾಸ ಮತ್ತೆ ಆಕೆಗೆ ಸಾಥ್ ನೀಡಿತ್ತು. ವರ್ಷ ಕಳೆಯುವಷ್ಟರಲ್ಲೇ ಮತ್ತೆ ಆಕೆ ತರಗತಿಗೆ ಹಾಜರಾದಳು..
ಪರೀಕ್ಷೆ ಎದುರಾದಾಗ ಎಲ್ಲರಲ್ಲಿಯೂ ಆತಂಕವಿತ್ತು. ಆದರೆ ಎಡಗೈಯಲ್ಲಿ ನಿರಾಳವಾಗಿ ನಿಗದಿತ ಅವಧಿಯಲ್ಲೇ ಉತ್ತರ ಬರೆದು ಮುಗಿಸಿದ್ದ ಆಕೆಯ ರಿಸಲ್ಟ್ ಏನಾಗುತ್ತೋ ಎಂಬ ಕುತೂಹಲವಿತ್ತು. ಕೊನೆಗೂ ಆಕೆಗೆ 70% ಡಿಸ್ಟಿಂಕ್ಷನ್ ರಿಸಲ್ಟ್ ದೊರೆತಿದೆ. ಇನ್ನೊಂದೆಡೆ ಆಕೆಗೆ ಜಾಬ್ ಆಫರ್ ನೀಡುವಾಗಲೂ ಪರಿಸ್ಥಿತಿ ನೋಡಿ ಹಿಂದೇಟು ಹಾಕಿದ್ದವರಿಗೆ ಆಕೆ ಸವಾಲೆಸೆದಳು. ನಾನು ದುಡಿಯಬಲ್ಲೆ. ಅವಕಾಶ ಕೊಡುವುದಾದರೆ ಕೊಡಿ ಎಂದಿದ್ದಳು. ಅವರಿಗೂ ಇದೊಂದು ವಿಶೇಷ ಅನ್ನಿಸಿರಬೇಕು. ಈಗ ರೂಪಾ ತನಗೆ ಬಂದಿದ್ದ ಎರಡು ಆಫರ್ಗಳ ಪೈಕಿ ಬೆಂಗಳೂರಿನ ಇಎಂಸಿ ಸ್ಕ್ವ್ಯಾರ್ ಉದ್ಯೋಗಿ.
ನನ್ನ ಬಗ್ಗೆಯೇ ನನಗೆ ಅಭಿಮಾನ ಎನಿಸುತ್ತಿದೆ. ನನಲ್ಲಿರುವ ಧೈರ್ಯವನ್ನು ತೋರಿಸಿಕೊಂಡಿದ್ದೇನೆ ಎನ್ನುವ ತೃಪ್ತಿ ಇದೆ ಎನ್ನುವುದು ಈಗ ರೂಪಾಳ ಸಂತಸದ ಮಾತು. ರೂಪಾಳ ಸಹೋದರಿ ಮಂಗಳೂರಿನ ದಂತ ವೈದ್ಯಕೀಯ ಕಾಲೇಜಿನ ಉದ್ಯೋಗಿ ದೀಪಾ ಹೇಳುವಂತೆ ಇದರಲ್ಲಿ ನಮ್ಮದೇನಿದ್ದರೂ ಶೇ 10ರ ಕೊಡುಗೆ. ಅಮ್ಮನ ಪರಿಶ್ರಮ, ರೂಪಾಳ ಛಲ ಎಲ್ಲಕ್ಕಿಂತ ದೊಡ್ಡದು. ಹೌದು ರೂಪಾಳ ಆತ್ಮ ವಿಶ್ವಾಸ ಅದು ಅಪರೂಪದ್ದು ಮಾತ್ರವಲ್ಲ ಮಾದರಿಯಾದದ್ದು ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಆ ಸೀಟಿನಲ್ಲಿರುತ್ತಿದ್ದರೆ….!
ಮಂಗಳೂರಿನ ಇನ್ಫೋಸಿಸ್ ಉದ್ಯೋಗಿಯಾಗಿರುವ ಬ್ರಹ್ಮಾವರದ ನಿವೇದಿತಾ ಪಿ.ಶೆಟ್ಟಿ ಎಂದಿನಂತೆ ಮಂಗಳೂರಿಗೆ ತೆರಳುವಾಗ ಅದೇ ಬಸ್ಸಿನ ಅದೇ ಸೀಟು ಖಾಯಂ ಎಂಬಂತೆ ಕುಳಿತುಕೊಳ್ಳುತ್ತಿದ್ದವರು. ಆದರೆ ಅಂದು ರೂಪಾ ಆ ಸೀಟಿನಲ್ಲಿದ್ದರು. ಪರವಾಗಿಲ್ಲ ಎಂದು ನಿವೇದಿತಾ ಆಕೆಯ ಪಕ್ಕ ಕುಳಿತು ಪ್ರಯಾಣಿಸುತ್ತಿದ್ದಾಗ ಈ ಆಕ್ಸಿಡೆಂಟ್ ನಡೆದಿತ್ತು. ಆದರೆ ಮಾನವೀಯತೆ ಮೆರೆದ ನಿವೇದಿತಾ ರೂಪಾಳ ಜತೆಗಿದ್ದು ಆಧರಿಸಿದ್ದರು. ಅಂದಿನ ಪರಿಸ್ಥಿತಿಗೆ ಹೋಲಿಸಿದರೆ ರೂಪಾಳ ಮಾನಸಿಕತೆ, ದೃಢತೆ, ಆ ಪರಿಸ್ಥಿತಿಯ ಬಳಿಕವೂ ಆಕೆ ಶಿಕ್ಷಣ ಯಶಸ್ಸಿನಿಂದಲೇ ಪೂರೈಸಿ ಉದ್ಯೋಗ ರಂಗದಲ್ಲಿಯೂ ತೊಡಗಿಕೊಂಡಿರುವುದು ಖುಷಿ ತರುವ ಸಾಧನೆ ಎನ್ನುತ್ತಾರೆ ನಿವೇದಿತಾ.