ಆಗಸ್ಟ್ 27 ರಿಂದ ಶಾಲಾ ವಾಹನಗಳ ತಪಾಸಣೆ ಆರಂಭ
ಮ0ಗಳೂರು: ಸುರಕ್ಷತೆ ದೃಷ್ಟಿಯಿಂದ ಶಾಲಾ ವಿದ್ಯಾರ್ಥಿಗಳು ಸಂಚರಿಸುವ ಎಲ್ಲಾ ಶಾಲಾ ವಾಹನಗಳ ತಪಾಸಣೆಯನ್ನು ದ.ಕ ಜಿಲ್ಲಾ ಪೊಲೀಸ್, ಆರ್.ಟಿ.ಓ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆಗಳೊಂದಿಗೆ ಜಂಟಿಯಾಗಿ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಪ್ರಥಮವಾಗಿ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಎಲ್ಲಾ ಶಾಲಾ ವಾಹನಗಳನ್ನು ತಪಾಸನೆ ನಡೆಸಲಾಗುವುದು.
ಪುತ್ತೂರು ತಾಲೂಕಿಗೆ ಒಳಪಡುವ ಎಲ್ಲಾ ಶಾಲಾ ಆಡಳಿತ ಮಂಡಳಿಯವರು ಶಾಲಾ ಮಕ್ಕಳನ್ನು ಕರೆತರುವ ವಾಹನಗಳನ್ನು ಹಾಗೂ ಬಾಡಿಗೆ ವಾಹನಗಳನ್ನು ಆಗಸ್ಟ್ 27 ರಂದು ಅಪರಾಹ್ನ 3 ಗಂಟೆಗೆ ಪುತ್ತೂರು ತಾಲೂಕಿನ ತೆಂಕಿಲ ವಿವೇಕನಂದ ಶಾಲಾ ಮೈದಾನದಲ್ಲಿ ಹಾಜರುಪಡಿಸಬೇಕು.
ಅದೇ ರೀತಿ ಬಂಟ್ವಾಳ ತಾಲೂಕಿಗೆ ಒಳಪಡುವ ಎಲ್ಲಾ ಶಾಲಾ ಆಡಳಿತ ಮಂಡಲಿಯವರು ಶಾಲಾ ಮಕ್ಕಳನ್ನು ಕರೆತರುವ ವಾಹನಗಳನ್ನು ಹಾಗೂ ಬಾಡಿಗೆ ವಾಹನಗಳನ್ನು ಇನ್ಪೇಂಟ್ ಜೀಸಸ್ಸ್ ಶಾಲಾ ವಠಾರ ಮೊಡಂಕಾಪು ಬಿ.ಸಿ.ರೋಡ್ ಇಲ್ಲಿ ಆಗಸ್ಟ್ 28 ರಂದು ಬೆಳಿಗ್ಗೆ 10 ಗಂಟೆಗೆ ಹಾಜರುಪಡಿಸಬೇಖಿದೆ.
ವಾಹನಗಳೊಂದಿಗೆ ವಾಹನ ಚಾಲಕರು ಚಾಲನಾ ಅನುಜ್ಞಾ ಪತ್ರ, ನೊಂದಣಿ ಪುಸ್ತಕ, ವಿಮಾ ದಾಖಲಾತಿ, ಪರವಾನಿಗೆ ವಿವರ, ವಾಯು ಮಾಲಿನ್ಯ ತಪಾಸಣಾ ದಾಖಲೆ, ಅರ್ಹತಾ ಪತ್ರ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಅಗ್ನಿ ಶಾಮಕ ಸಾಧನ ಹಾಗೂ ಇನ್ನಿತರ ದಾಖಲಾತಿಗಳೊಂದಿಗೆ ಸಮಯಕ್ಕೆ ಸರಿಯಾಗಿ ಹಾಜರುಪಡಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.
ಆಗಸ್ಟ್ 27 ರಿಂದ ಶಾಲಾ ವಾಹನಗಳ ತಪಾಸಣೆ ಆರಂಭ
Spread the love
Spread the love