Home Mangalorean News Kannada News ಆಗಸ್ಟ್ 5 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಪ್ರವಾಸ

ಆಗಸ್ಟ್ 5 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಪ್ರವಾಸ

Spread the love

ಆಗಸ್ಟ್ 5 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಪ್ರವಾಸ
ಮಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಡಾ. ಜಯಮಾಲಾ ಅವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಇಂತಿವೆ.
ಆಗಸ್ಟ್ 5 ರಂದು ಪೂರ್ವಾಹ್ನ 8.50 ಕ್ಕೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, ಪೂರ್ವಾಹ್ನ 11 ಗಂಟೆಗೆ ಫಾದರ್ ಮುಲ್ಲರ್ ಕನ್ವೆನ್‍ಷನ್ ಹಾಲ್‍ನಲ್ಲಿ ಯುವ ವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ವತಿಯಿಂದ 31ನೇ ವಾರ್ಷಿಕೋತ್ಸವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಅಪರಾಹ್ನ 3 ಗಂಟೆಗೆ ಸುಧೀಂದ್ರ ಆಡಿಟೋರಿಯಂ, ಕೆನರಾ ಗಲ್ರ್ಸ್ ಹೈ ಸ್ಕೂಲ್ ಇಲ್ಲಿ ಓದುಬಾ ಸ್ವರೂಪ ಬರಹ ಭಂಡಾರ ಗ್ರಂಥಾಲಯದ ಉದ್ಘಾಟನೆ, ಸಂಜೆ 5 ಗಂಟೆಗೆ ಬಂಟ್ವಾಳದಲ್ಲಿ ಪಂಜೆ ಮಂಗೇಶ್ವರ ರಾವ್ ಸ್ಮಾರಕ ಭವನ ಕಾಮಗಾರಿ ಪರಿಶೀಲನೆ , ರಾಣಿ ಅಬ್ಬಕ್ಕ ಆರ್ಟ್‍ಗ್ಯಾಲರಿಗೆ ಭೇಟಿ, ರಾತ್ರಿ 8.30 ಮಂಗಳೂರಿನಲ್ಲಿ ವಾಸ್ತವ್ಯ. ಆಗಸ್ಟ್ 6 ರಂದು ಪೂರ್ವಾಹ್ನ 9.10 ಕ್ಕೆ ಮಂಗಳೂರಿನಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.


Spread the love

Exit mobile version