Home Mangalorean News Kannada News ಆಗುಂಬೆ ಘಾಟ್ ರಸ್ತೆಯ ಡಾಮಾರೀಕರಣ ಮಾರ್ಗಗಳ ಸಂಚಾರ ಬದಲಾವಣೆ

ಆಗುಂಬೆ ಘಾಟ್ ರಸ್ತೆಯ ಡಾಮಾರೀಕರಣ ಮಾರ್ಗಗಳ ಸಂಚಾರ ಬದಲಾವಣೆ

Spread the love

ಆಗುಂಬೆ ಘಾಟ್ ರಸ್ತೆಯ ಡಾಮರೀಕರಣ ಮಾರ್ಗಗಳ ಸಂಚಾರ ಬದಲಾವಣೆ
ಉಡುಪಿ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಪಡುಬಿದ್ರೆ-ಚಿಕ್ಕಲಗೋಡು ರಸ್ತೆಯ ಆಗುಂಬೆ ಘಾಟ್ ಪ್ರದೇಶದ 76.80 ಕಿ.ಮೀ ರಿಂದ 79.30 ಕಿ.ಮೀ ರವರೆಗೆ ಡಾಮರೀಕರಣ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸುಮಾರು ಒಂದು ತಿಂಗಳ ಕಾಲಾವಕಾಶ ಬೇಕಾಗಿರುವುದರಿಂದ ಡಿಸೆಂಬರ್ 31 ರವರೆಗೆ ತೀರ್ಥಹಳ್ಳಿ ಯಿಂದ ಉಡುಪಿ, ಕಾರ್ಕಳಕ್ಕೆ ಆಗುಂಬೆ ಘಾಟಿ ರಸ್ತೆ ಮೂಲಕ ಸಂಚರಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 13ರ ಮೂಲಕ ಕೊಪ್ಪ ಶೃಂಗೇರಿ, ಬಜಗೋಳಿ ಮುಖಾಂತರ ಉಡುಪಿಗೆ ಹಾಗೂ ಉಡುಪಿ ಕಾರ್ಕಳದಿಂದ ಆಗುಂಬೆ ಘಾಟಿ ಮಾರ್ಗವಾಗಿ ತೀರ್ಥಹಳ್ಳಿ ಕಡೆ ಚಲಿಸುವ ವಾಹನಗಳು ಬಜಗೋಳಿ, ಶೃಂಗೇರಿ, ಕೊಪ್ಪ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 13 ರ ಮೂಲಕ ತೀರ್ಥಹಳ್ಳಿಗೆ ಮತ್ತು ತೀರ್ಥಹಳ್ಳಿಯಿಂದ ಕುಂದಾಪುರ/ಬೈಂದೂರು ಕಡೆ ಚಲಿಸುವ ವಾಹನಗಳು ಮಾಸ್ತಿಕಟ್ಟೆ, ಬಾಳೆಬರೆ ಘಾಟಿ, ಸಿದ್ಧಾಪುರ-ಕಂಡ್ಲೂರು ಮುಖಾಂತರ ಅದೇ ರೀತಿ ಕುಂದಾಪುರದಿಂದ ತೀರ್ಥಹಳ್ಳಿಗೆ ಸಂಚರಿಸುವ ವಾಹನಗಳು ಕಂಡ್ಲೂರು- ಸಿದ್ಧಾಪುರ, ಬಾಳೆಬರೆ ಘಾಟಿ, ಮಾಸ್ತಿಕಟ್ಟೆ ಮಾರ್ಗವಾಗಿ ವಾಹನಗಳು ಸಂಚರಿಸುವಂತೆ ಮಾರ್ಗಗಳನ್ನು ತಾತ್ಕಾಲಿಕವಾಗಿ ಬದಲಿಸಿ ಉಡುಪಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ.


Spread the love

Exit mobile version