ಆಧ್ಯಾತ್ಮ ಚಿಂತನೆ ಪ್ರತಿಯೊಬ್ಬರಿಗೂ ಬೇಕು : ಶಿವಸುಜ್ಞಾನತೀರ್ಥ ಮಹಾ ಸ್ವಾಮೀಜಿ

Spread the love

ಆಧ್ಯಾತ್ಮ ಚಿಂತನೆ ಪ್ರತಿಯೊಬ್ಬರಿಗೂ ಬೇಕು : ಶಿವಸುಜ್ಞಾನತೀರ್ಥ ಮಹಾ ಸ್ವಾಮೀಜಿ

ಬೈಂದೂರು : ಆಧ್ಯಾತ್ಮ ಚಿಂತನೆ ಪ್ರತಿಯೊಬ್ಬರಿಗೂ ಬೇಕು. ಬದುಕಲ್ಲಿ ಭಗವಂತನನ್ನು ಬಿಟ್ಟು ನನ್ನದೇನು ಇಲ್ಲವೆಂದು ಸತ್ಪಥದಲ್ಲಿ ನಡೆದುಕೊಳ್ಳುವುದೇ ಧರ್ಮ. ಧರ್ಮವನ್ನು ನಿರಂತರ ಅನುಸರಿಸುವುದರಿಂದ ಎಲ್ಲರೂ ಜಾಗೃತಿಯಿಂದ, ಶಾಂತಿಯಿ, ನೆಮ್ಮದಿಯಿಂದ ಇರಲು ಸಾಧ್ಯ. ಸನ್ಯಾಸಿಗಳ ಚಾತುರ್ಮಾಸ್ಯ ಒಂದೊಮ್ಮೆ ಎಲ್ಲಿಯೋ ಗುಹೆ, ನಿರ್ಜನ ಪ್ರದೇಶಗಳಲ್ಲಿ ನಡೆಯುತ್ತಿತ್ತು. ಆದರೆ ಈಗ ಚಾತುರ್ಮಾಸ್ಯದ ವ್ಯಾಪ್ತಿ ದೊಡ್ಡಾಗಿದೆ. ಇದಕ್ಕೆ ಜನರಲ್ಲಿ ಉಂಟಾದ ಜಾಗೃತಿಯೇ ಕಾರಣವೆಂದು ವಿಶ್ವಕರ್ಮ ಜಗದ್ಗುರು ಪೀಠ ಹಾಸನ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನದ ಪೀಠಾಧಿಪತಿ ಶಿವಸುಜ್ಞಾನತೀರ್ಥ ಮಹಾ ಸ್ವಾಮೀಜಿ ಹೇಳಿದರು.

ಅವರು ಉಡುಪಿ ಜಿಲ್ಲೆಯ ಕೊಕ್ಕರ್ಣೆ ಕಜ್ಕೆಯಲ್ಲಿ ನಿರ್ಮಿಸಿರುವ ವಿಶ್ವಕರ್ಮ ಜಗದ್ಗುರು ಪೀಠ ಹಾಸನ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನದ ಕಜ್ಕೆ ಶಾಖಾ ಮಠವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಐದು ವರ್ಷದ ಹಿಂದೆ ಕಜ್ಕೆಯ ಜಾಗಕ್ಕೆ ಪಾದಸ್ಪರ್ಶ ಮಾಡುವಾಗ ಈ ಜಾಗವನ್ನು ಹಾಡಿಮನೆ ಎಂದು ಕರೆಯುತ್ತಿದ್ದರು. ಇಂದು ಹಾಡಿಹಾಡಿ ಭಗವಂತನ ಭಜಿಸುವ ಕ್ಷೇತ್ರವಾಗಿ ಸಂಭ್ರಮಕ್ಕೆ ಚಾಲನೆ ದೊರೆತಿದೆ. ಮುಂದೆ ದೊಡ್ಡ ಕ್ಷೇತ್ರವಾಗಿ ಬೆಳಗುತ್ತದೆ. ಎಲ್ಲರ ದೊಡ್ಡ ಮನಸ್ಸು ಮತ್ತು ಶೃಂಗೇರಿ ಶಂಕರಾಚಾರ್ಯರು ಮತ್ತು ಉಡುಪಿ ಶ್ರೀಕೃಷ್ಣನ ಅನುಗ್ರಹದಿಂದ ಸಾಧ್ಯವಾಗಿದೆ. ಅರೆಮಾದನಹಳ್ಳಿಯ ಮಠದ ಸಮಗ್ರ ಅಭಿವೃದ್ಧಿಗೆ ಕರಾವಳಿಯ ವಿಶ್ವಕರ್ಮರ ದೊಡ್ಡ ಕೊಡುಗೆ ಇದೆ. ಕಜ್ಜೆಯಲ್ಲೂ ಅನುಷ್ಠಾನಕ್ಕೆ ಮಾತ್ರ ಸಣ್ಣ ಮನೆ ನಿರ್ಮಾಣ ಮಾಡಿಸಿದರೇ ಸಾಕು ಎಂಬ ಆಶಯವಿತ್ತು. ಆದರೆ ಎಲ್ಲ ಭಕ್ತರು ಸೇರಿ ಭವ್ಯವಾದ ಮಠವನ್ನೇ ನಿರ್ಮಾಣ ಮಾಡಿ ಅರ್ಪಿಸಿದ್ದಾರೆ. ಆದಿಶಂಕರಾಚಾರ್ಯರು ಮತ್ತು ದೇವಿ ಅಣ್ಣಪೂರ್ಣೇಶ್ವರಿಯ ಕೃಪೆಯಿಂದ ಮಾತ್ರ ಇದು ಸಾಧ್ಯವಾಗಿದೆ, ಅತೀ ಶೀಘ್ರವಾಗಿ ಅನ್ನಪೂರ್ಣೇಶ್ವರಿಯ ಕ್ಷೇತ್ರ ನಿರ್ಮಾಣಗೊಂಡು ಜಗದ್ವಿಖ್ಯಾತವಾಗಲಿದೆ ಎಂದು ಸ್ವಾಮೀಜಿ ನುಡಿದರು.

ವಿಶ್ವಕ್ಕೆ ವಿಶ್ವಕರ್ಮರ ಕೊಡುಗೆ ದೊಡ್ಡದಿದೆ, ರಾಜಕೀಯವಾಗಿಯೂ ವಿಶ್ವಕರ್ಮರಿಗೆ ಅವಕಾಶಗಳು ದೊರೆಯಬೇಕಿದೆ, ಪರಿಪೂರ್ಣ ವ್ಯಕ್ತಿತ್ವದ ಅದ್ಬುತ ಶಕ್ತಿ ಶಿವಸುಜ್ಞಾನ ತೀರ್ಥ ಮಹಾ ಸ್ವಾಮೀಜಿ ಮೂಲಕ ಕಜ್ಕೆ ಕ್ಷೇತ್ರ ರಾಜ್ಯದ ಅತ್ಯುನ್ನತ ಕ್ಷೇತ್ರವಾಗಿ ಮುಂದೆ ಮೂಡಿ ಬರಲಿದೆ, ಕ್ಷೇತ್ರದ ನನ್ನ ಶಕ್ತಿಯನುಸಾರ ಸೇವೆ ಸಲ್ಲಿಸುತ್ತೇನೆ. ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹರಿದಾಸರದಾದ ಬಿ.ಸಿ.ರಾವ್ ಶಿವಪುರ ಅವರು ಧಾರ್ಮಿಕ ಉಪನ್ಯಾಸ ನೀಡಿ, ನಾನು ಅನೇಕ ಸ್ವಾಮೀಜಿಯವರನ್ನು ನೋಡಿದ್ದೇನೆ ಹೆಚ್ಚಿನ ಸ್ವಾಮೀಜಿಯವರೊಂದಿಗೆ ವೇದಿಕೆ ಹಂಚಿಕೊಂಡಿದ್ದೇನೆ. ವಿಶ್ವಕರ್ಮರ ಗುರು ಶ್ರೀ ಶ್ರೀ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ವಿಶ್ವಕರ್ಮರಿಗೆ ಸೀಮಿತವಲ್ಲ ಅವರು ಸಮಸ್ತ ಹಿಂದೂ ಸಮಾಜ ಮತ್ತು ಭವ್ಯಭಾರತದ ಚೈತನ್ಯ, ಧರ್ಮ ಅಂದರೆ ಏನು ಎಂದು ಕಜ್ಜೆಯಲ್ಲಿ ವಿಶ್ವಕರ್ಮರು ತೊರಿಸಿಕೊಟ್ಟಿದ್ದಾರೆ. ವಿಶ್ವಕರ್ಮ ಜನಾಂಗವನ್ನು ಶಕ್ತಿಯಾಗಿ ಶಿವಸುಜ್ಞಾನತೀರ್ಥರು ಮುನ್ನಡೆಸುತ್ತಾರೆ. ಚೈತನ್ಯ ತುಂಬುತ್ತಾರೆ ನಾವು ನಮ್ಮ ಮಕ್ಕಳನ್ನು ಮನುಷ್ಯರನ್ನಾಗಿ ಬೆಳೆಸಿ ಸಮಾಜಕ್ಕೆ ಅರ್ಪಣೆ ಮಾಡಬೇಕಿದೆ ಎಂದು ಹೇಳಿದರು.

ಶಿವಸುಜ್ಞಾನ ತೀರ್ಥ ಮಹಾ ಸ್ವಾಮೀಜಿ ಅವರ ಪುರ ಪ್ರವೇಶ ಮೆರವಣಿಗೆ ಮತ್ತು ಹೊರೆಕಾಣಿಕೆ ಭವ್ಯ ಮೆರವಣಿಗೆ ಕಾಡೂರು ಬಸ್ ನಿಲ್ದಾಣದಿಂದ ಕೊಕ್ಕರ್ಣೆ ಕೆಂಜೂರು ಮುದ್ದೂರು ಮಾರ್ಗವಾಗಿ ಕಜ್ಜೆಗೆ ಸಾಗಿಬಂತು. ಬಳಿಕ ಸ್ವಾಮೀಜಿ ಮಠವನ್ನು ದೀಪ ಬೆಳಗಿ ಲೋಕಾರ್ಪಣೆ ಮಾಡಿದರು.

ವಿಶ್ವಕರ್ಮ ಜಗದ್ಗುರು ಪೀಠ ಶಾಖಾಮಠಕ್ಕೆ ಸ್ಥಳವನ್ನು ದಾನ ಮಾಡಿದ ಕಜ್ಜೆ ಕೃಷ್ಣಯ್ಯ ಶೆಟ್ಟಿ ಮತ್ತು ಶ್ರೀಧರ ಕಾಮತ್, ಮಿಯ್ಯಾರು ನರಸಿಂಹ ಆಚಾರ್ಯ ಅವರನ್ನು ಸ್ವಾಮೀಜಿ ಗೌರವಿಸಿದರು. ಕೊಡುಗೆ ನೀಡಿದ ಗಣ್ಯರನ್ನು, ಉಡುಪಿ ಜಿಲ್ಲೆಯ ವಿಶ್ವಕರ್ಮ ಸಮುದಾಯದ ಸಂಘ ಸಂಸ್ಥೆಗಳ ಅಧ್ಯಕ್ಷರು, ಪ್ರಮುಖರನ್ನು ಗೌರವಿಸಲಾಯಿತು.

ಚಾತುಮಾಸ್ಯ ವ್ರತ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದು ಕಾರ್ಯಕ್ರಮಕ್ಕೆ ಯಶಸ್ಸಿಗೆ ಶ್ರಮಿಸಿ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.

ಕಜ್ಕೆ ಶಾಖಾ ಮಠ ನಿರ್ಮಾಣ ಸಮಿತಿಯ ಅಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ, ನಾಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಪೂಜಾರಿ, ಮಾಜಿ ಅಧ್ಯಕ್ಷ ಸಂತೋಷ ಹೆಗ್ಡೆ ಮಾರಾಳಿ, ಉದ್ಯಮಿ ಕಾಶೀನಾಥ ಶೆಣೈ, ಬಾರ್ಕೂರು ಶ್ರೀವಾಸ ಶೆಟ್ಟಿಗಾರ್, ವೃತ್ತ ಶಿಕ್ಷಕ ಕಜ್ಜೆ ಕರುಣಾಕರ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವೀಚಾರಕ ಹರೀಶ್, ಕೊಕ್ಕರ್ಣೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಗಣಪ ಪೂಜಾರಿ, ವಿಶ್ವಕರ್ಮ ಸಮಾಜದ ಮುಖಂಡರಾದ ಯು.ಕೆ.ಎಸ್ ಸೀತಾರಾಮ ಆಚಾರ್, ಕಾರ್ಕಳ ಪ್ರಕಾಶ ಆಚಾರ್, ಎಂ.ಎಸ್.ಗೋಪಾಲಕೃಷ್ಣ ಆಚಾರ್, ಸಂಜೀವ ಆಚಾರ್ಯ, ದೇವಸ್ಥಾನದ ಆಡಳಿತ ಮೋಕ್ತೇಸರರಾದ ಕಾರ್ಕಳದ ರತ್ನಾಕರ ಆಚಾರ್ಯ, ಕಟಪಾಡಿಯ ನವೀನ ಆಚಾರ್ಯ, ಗೋಕರ್ಣದ ಮಧುಕರ ಚಂದ್ರಶೇಖರ ಆಚಾರ್ಯ, ಕಾಪುವಿನ ಭಾಸ್ಕರ ಆಚಾರ್ಯ, ಜನಪ್ರತಿಧಿಗಳು, ಸ್ಥಳೀಯ ಗಣ್ಯರು, ವಿಶ್ವಕರ್ಮ ಸಮಾಜದ ಗಣ್ಯರು, ದೇವಸ್ಥಾನಗಳ ಆಡಳಿತ ಮೋಕ್ತೇಸರರು, ಶಾಖಾ ಮಠದ ರ್ಮಾಣ ಸಮಿತಿ, 37ನೇ ಚಾತುರ್ಮಾಸ್ಯ ವ್ರತಾನುಷ್ಠಾನ ವ್ಯವಸ್ಥಾಪನಾ ಸಮಿತಿ, ಅನ್ನಪೂರ್ಣೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ,ಸ್ವಾಗತ ಸಮಿತಿಯ ಜೊತೆಗೆ ವಿವಿಧ ಉಪಸಮಿತಿಗಳು, ಪುರೋಹಿತರು ಇದ್ದರು.

ಅಲೆವೂರು ಯೋಗೀಶ್ ಆಚಾರ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಚಿತ್ತೂರು ಪ್ರಭಾಕರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿಚಂದ್ರ ಆಚಾರ್ಯ ಮಾರಾಳಿ ವಂದಿಸಿದರು. ಬಾರ್ಕೂರು ಪುರೋಹಿತ್ ದಾಮೋಧರ ಶರ್ಮ ನಿರೂಪಿಸಿದರು. ಮುಸ್ಲಿಂ ಸಮುದಾಯದ ಗುಲ್ಬರ್ಗದ ನಾವೀದ್ ಸ್ವಾಮೀಜಿಯವರ ಪಾದಪೂಜೆ ಮಾಡಿರುವುದು ಭಾವೈಕ್ಯತೆಯ ಸಂಕೇತವಾಗಿ ಮೆಚ್ಚುಗೆಗೆ ಪಾತ್ರವಾಯಿತು.


Spread the love