ಆರ್ಥಿಕ ಸಂಕಷ್ಟ: ವಕೀಲ ಆತ್ಮಹತ್ಯೆ

Spread the love

ಆರ್ಥಿಕ ಸಂಕಷ್ಟ: ವಕೀಲ ಆತ್ಮಹತ್ಯೆ
ಸುಳ್ಯ: ವೃತ್ತಿಯಲ್ಲಿ ಉದ್ಯಮಿ ಹಾಗೂ ವಕೀಲರಾಗಿದ್ದ ವ್ಯಕ್ತಿಯೋಬ್ಬರು ಆರ್ಥಿಕ ಸಂಕಷ್ಟದ ಹಿನ್ನಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದಿಂದ ವರದಿಯಾಗಿದೆ.

ಮೃತರನ್ನು ಸುಳ್ಯ ಅರಂಬೂರು ನಿವಾಸಿ ಬಿ.ಎಸ್.ಷರೀಪ್ (52) ಎಂದು ಗುರುತಿಸಲಾಗಿದೆ.
ಮೃತರು ತಮ್ಮ ಮನೆಯಲ್ಲಿನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು,, ಸುಳ್ಯದಲ್ಲಿ ಪ್ರೋಫೆಶನಲ್ ಕೊರಿಯರ್ ಉದ್ಯಮ ನಡೆಸುತ್ತಿದ್ದು, ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಮೃತರು ಸುಳ್ಯ ಸಿಟಿ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಜೇಸಿ ರಾಷ್ಟ್ರೀಯ ತರಬೇತುದಾರರಾಗಿದ್ದು ಹಲವು ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಪತ್ನಿ , ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.


Spread the love