Home Mangalorean News Kannada News ಆಳ್ವಾಸ್‍ ನ ವರುಣ್ ನಾಲ್ಕನೇ ಏಷ್ಯಾ ವಿಶ್ವ ಮಾದರಿ ಸಂಯುಕ್ತ ರಾಷ್ಟ್ರ ಮೀಟ್‍ಗೆ ಆಯ್ಕೆ

ಆಳ್ವಾಸ್‍ ನ ವರುಣ್ ನಾಲ್ಕನೇ ಏಷ್ಯಾ ವಿಶ್ವ ಮಾದರಿ ಸಂಯುಕ್ತ ರಾಷ್ಟ್ರ ಮೀಟ್‍ಗೆ ಆಯ್ಕೆ

Spread the love

ಆಳ್ವಾಸ್‍ ನ ವರುಣ್ ನಾಲ್ಕನೇ ಏಷ್ಯಾ ವಿಶ್ವ ಮಾದರಿ ಸಂಯುಕ್ತ ರಾಷ್ಟ್ರ ಮೀಟ್‍ಗೆ ಆಯ್ಕೆ

ಮಿಜಾರು: ಆಳ್ವಾಸ್ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ಎಂಬಿಎ ವಿದ್ಯಾರ್ಥಿ ವರುಣ್ ಕಟ್ಟಿ ಇಂಡೋನೇಷಿಯಾದ ಬಾಲಿಯಲ್ಲಿ ಜುಲೈ 3 ರಿಂದ 6ರವರೆಗೆ ನಡೆಯಲಿರುವ ನಾಲ್ಕನೇ ಏಷ್ಯಾ ವಿಶ್ವ ಮಾದರಿ ಸಂಯುಕ್ತ ರಾಷ್ಟ್ರ -2020ಕ್ಕೆ ಆಯ್ಕೆಯಾಗಿದ್ದರೆ. `ಕ್ರಿಯಾತ್ಮಕ ಭದ್ರತಾ ಆಯಾಮಗಳಲ್ಲಿ ಶಾಂತಿಯನ್ನು ಕಾಪಾಡುವುದು’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.

ಜಾಗತಿಕ ಮಂಡಳಿಯಲ್ಲಿ ಭಾಗವಹಿಸಲು ನಾನಾ ದೇಶಗಳಿಂದ ಬಂದ 3500 ಅರ್ಜಿಗಳಲ್ಲಿ 4.33% ಜನರನ್ನು ಆಯ್ಕೆಮಾಡಲಾಗುತ್ತದೆ. ಶೈಕ್ಷಣಿಕ ಸಾಧನೆಯ ಆಧಾರದಲ್ಲಿ ವರುಣ್‍ನನ್ನು ಆಯ್ಕೆ ಮಾಡಲಾಗಿದೆ.

ವಿದ್ಯಾರ್ಥಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ, ಮ್ಯಾನೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.


Spread the love

Exit mobile version