ಆಳ್ವಾಸ್ ಆಯುರ್ವೇದ ಸ್ನಾತಕೋತ್ತರ ಕಾಲೇಜಿನ ಫಲಿತಾಂಶ
ಮೂಡುಬಿದಿರೆ: ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು 2019-20ರ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಆಯುರ್ವೇದ ಪರೀಕ್ಷೆಗಳ ಫಲಿತಾಂಶವು ಬಿಡುಗಡೆಯಾಗಿದ್ದು, ಆಳ್ವಾಸ್ ಆಯುರ್ವೇದ ಸ್ನಾತಕೋತ್ತರ ಕಾಲೇಜು ಶೇ100 ಫಲಿತಾಂಶದೊಂದಿಗೆ, 8 ರ್ಯಾಂಕ್‍ಗಳನ್ನು ಪಡೆದುಕೊಂಡಿದೆ.
ಶರೀರಕ್ರಿಯಾ ವಿಭಾಗದಲ್ಲಿ ಡಾ.ಅರ್ಜುನ್ ಎನ್‍ಗೆ ಎರಡನೇ ರ್ಯಾಂಕ್, ಅಗದತಂತ್ರ ವಿಭಾಗದಲ್ಲಿ ಡಾ.ಆದಿತ್ಯ ಶಂಕರ್ ಮೂರನೇ ರ್ಯಾಂಕ್, ಸ್ವಸ್ಥವೃತ್ತ ವಿಭಾಗದಲ್ಲಿ ಡಾ.ಅನುಷಾ ಪೂಜಾರಿ ಮೂರನೇ ರ್ಯಾಂಕ್, ಡಾ. ನುಸೈಬಾ ಎಂಟನೇ ರ್ಯಾಂಕ್, ಮಾನಸರೋಗ ವಿಭಾಗದಲ್ಲಿ ಡಾ.ಅಕ್ಷತಾ ಸಿ.ಜೆ ನಾಲ್ಕನೇ ರ್ಯಾಂಕ್, ಡಾ. ಟಿ ರಘು ಪಿ.ಕೆ ಹತ್ತನೇ ರ್ಯಾಂಕ್, ರೋಗನಿದಾನ ವಿಭಾಗದಲ್ಲಿ ಡಾ. ಪೊನ್‍ಶ್ರೀತಾ ಎಸ್ ಒಂಬತ್ತನೇ ರ್ಯಾಂಕ್ ಮತ್ತು ಶಾಲಕ್ಯತಂತ್ರ ವಿಭಾಗದಲ್ಲಿ ಡಾ.ಕಿರಣ್ ಸಿ ಶೀಲವಂತ್‍ಗೆ ಆರನೇ ರ್ಯಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ, ಮ್ಯಾನೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯೆ ಡಾ ಜೆನಿಕಾ ಡಿಸೋಜಾ ಅಭಿನಂದಿಸಿದ್ದಾರೆ.