Home Mangalorean News Kannada News ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತುಳು ಪರ್ಬ

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತುಳು ಪರ್ಬ

Spread the love

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತುಳು ಪರ್ಬ

ಮೂಡುಬಿದಿರೆ: ತುಳುವಿಗೆ ಯಾವುದೆ ಜಾತಿ ಧರ್ಮವಿಲ್ಲ,ಯಾರೆಲ್ಲ ತುಳುವಿನಲ್ಲಿ ವ್ಯವಹಾರ ಮಾಡುತ್ತಾರೋ ಅವರೆಲ್ಲ ನಮ್ಮ ತುಳುವರು. ತುಳುವರಲ್ಲಿ ಹಿಂದಿನದಲೂ ಇದ್ದ ಸಹಕಾರದ ಮನೋಭಾವನೆ ಇಂದಿಗೂ ಜೀವಂತ. ತುಳು ಸಂಸ್ಕøತಿ ಸಂಘಟನಾತ್ಮಕ ಶಕ್ತಿಯನ್ನು ಹೊಂದಿದೆ ಎಂದು ಕರ್ನಾಟಕ ಯಕ್ಷಾಗಾನ ಮಂಡಳಿಯ ಸದಸ್ಯ ಕದ್ರಿ ನವನೀತ್ ಶೆಟ್ಟಿ ಹೇಳಿದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ತುಳು ಸಂಘದ ವತಿಯಿಂದ ನಡೆದ ತುಳು ಪರ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಜಿರೆಯಲ್ಲಿ ನಡೆದ ತುಳು ಸಮ್ಮೇಳನದ ಬಳಿಕ ಯುವಜನರಲ್ಲಿ ತುಳು ಆಚಾರ ವಿಚಾರದ ಬಗ್ಗೆ ಜಾಗೃತಿ ಮೂಡಿದೆ. ತುಳು ಸಂಪ್ರಾದಾಯಿಕ ಖಾದ್ಯಗಳಿಗೆ ಇಂದು ಹೆಚ್ಚಿನ ಬೇಡಿಕೆಯಿದೆ. ವಿದ್ಯಾರ್ಥಿಗಳು ತುಳು ಆಚಾರ ವಿಚಾರಗಳನ್ನು ಅರಿತು, ಎಲ್ಲೆಡೆ ಪಸರಿಸುವಂತೆ ಕರೆ ನೀಡಿದರು.

ತುಳು ಸಂಘದ ಸಂಯೋಜಕ ಪ್ರಾಧ್ಯಾಪಕ ಕೆ.ವಿ ಸುರೇಶ್, ಪ್ರಾಧ್ಯಾಪಕ ನಾಗೇಂದ್ರ ಮತ್ತು ಶುೃತಿ ಉಪಸ್ಥಿತರಿದ್ದರು.

ತುಳುನಾಡಿನ ಖಾದ್ಯಗಳಾದ ಪತ್ರೋಡೆ, ಕೋರಿ-ಪುಂಡಿ, ಮೂಡೆ,ನೀರುದೋಸೆ,ಚಟ್ನಿ, ಕೋರಿ ಸಾರು, ಪದೆಂಗಿ ಗಸಿ ವಿಶೇಷವಾಗಿತ್ತು. ತುಳುನಾಡಿನ ಸಂಪ್ರಾದಾಯಿಕ ಆಟಗಳನ್ನು ಕೂಡ ಅಯೋಜಿಸಲಾಗಿತ್ತು ಅವುಗಳೆಂದರೆ ಲಗೋರಿ,ಬೆಲ್ಚಂಡಿ, ಗಣಪತಿ ಹಿಡಿದು ಓಡುವುದು, ಟೊಂಕ ಓಟ,ಚೆನ್ನಮಣೆ, ಗೋಣಿಚೀಲ ಓಟ, ಹಗ್ಗಜಗ್ಗಾಟ ಮತ್ತು 3 ಕಾಲು ಓಟಗಳು ವಿದ್ಯಾರ್ಥಿಗಳನ್ನು ಮನರಂಜಿಸಿತು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು.


Spread the love

Exit mobile version